ಚಿಕ್ಕಮಗಳೂರು

ಮಾಕೋನಹಳ್ಳಿ ಪಿಡಿಒ ವರ್ಗಾವಣೆಗೆ ಒತ್ತಾಯ

Published On :

ಮೂಡಿಗೆರೆ: ಜನಪ್ರತಿನಿಧಿಗಳನ್ನು ಕಡೆಗಣಿಸಿ ಅಭಿವೃದ್ಧಿ ಕಾರ್ಯಗಳಿಂದ ತೊಡಕಾಗಿರುವ ಮಾಕೋನಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ವರ್ಗಾಯಿಸುವಂತೆ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯ ಕೆ.ಬಿ.ಜಗದೀಶ್ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಾಕೋನಹಳ್ಳಿ ಗ್ರಾಪಂನಲ್ಲಿ ಹಾಲಿ ಪ್ರಭಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಹೇಶ್ ಎಂಬುವವರು ಚುನಾಯಿತ ಸದಸ್ಯರನ್ನು ಕಡೆಗಾಣಿಸಿ ಮನಬಂದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಸದಸ್ಯರಿಗೆ ಸೂಚನೆ ನೀಡದೆ ಗಾಂಧಿ ಜಯಂತಿ, ಅಂಬೇಡ್ಕರ್ ಜಯಂತಿ, ಕೆರೆಗಳ ಪುನಶ್ಚೇತನದಂಥ ಕಾರ್ಯಕ್ರಮಗಳನ್ನು ನಡೆಸಿದ್ದಲ್ಲದೆ, 2014-15 ನೇ ಸಾಲಿನ ವಾರ್ಡ್‌ಸಭೆ ಮತ್ತು ಗ್ರಾಮ ಸಭೆಗಳಿಗೆ ಹಾಲಿ ಸದಸ್ಯ ಹಾಗೂ ಮಾಜಿ ಅಧ್ಯಕ್ಷರಾಗಿರುವ ತಮಗೆ ಅಹ್ವಾನ ನೀಡದೆ ನಿರ್ಲಕ್ಷ್ಯ ತೋರಿಸಿ ತಾರತಮ್ಯ ಮಾಡುತ್ತಿದ್ದಾರೆ ಎಂದಿದ್ದಾರೆ.
ಹಲವೆಡೆ ವಿದ್ಯುತ್ ನಿಲುಗಡೆ ಇಂದು
ಮೂಡಿಗೆರೆ: ಕೆವಿ ಎಂ.ಯು.ಎಸ್.ಎಸ್ ಮೂಡಿಗೆರೆ ವಿದ್ಯುತ್ ವಿತರಣಾ ಕೆಂದ್ರದ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ ಮೂಡಿಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಮಾರ್ಗಗಳಲ್ಲಿ ಜೂ. 26 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 5 ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ. ಗ್ರಾಹಕರು ಈ ವಿಷಯದಲ್ಲಿ ಕಂಪನಿಯೊಂದಿಗೆ ಸಹಕರಿಸುವಂತೆ ಮೂಡಿಗೆರೆ ಉಪ-ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ರಸ್ತೆ ದುರಸ್ತಿಗೆ ಆಗ್ರಹಿಸಿ ಬಸ್ ಸಂಚಾರ ಸ್ಥಗಿತ
ತರೀಕೆರೆ: ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ ಜಿಲ್ಲಾ ಖಾಸಗಿ ಬಸ್ ಮಾಲಿಕರ ಸಂಘ ವತಿಯಿಂದ, ಬುಧವಾರ ಅಜ್ಜಂಪುರದಲ್ಲಿ, ತಾಲೂಕಿನ ಕೆಟ್ಟ ರಸ್ತೆಗಳ ದುರಸ್ತೀಗಾಗಿ ಆಗ್ರಹಿಸಿ ಜೂನ್ 25 ರಿಂದ ಅನಿರ್ಧಿಷ್ಟ ಕಾಲ ಖಾಸಗಿ ಬಸ್ ಸಂಚಾರ ಸ್ಥಗಿತ ಹಾಗೂ ಇತರೆ ಎಲ್ಲಾ ಮಾದರಿಯ ವಾಹನಗಳ ಸ್ಥಗಿತಗೊಳಿಸಿ, ಪಿಡಬ್ಲೂಡಿ ಮತ್ತು ಕೆಶಿಪ್ ಅಧಿಕಾರಿಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಅಜ್ಜಂಪುರ ಗ್ರಾಪಂ ಅಧ್ಯಕ್ಷರು ಜೋಗಿ ಪ್ರಕಾಶ್, ಗ್ರಾಪಂ ಸದಸ್ಯರು, ಜಿಪಂ ಮಾಜಿ ಸದಸ್ಯ ಎ.ಸಿ. ಚಂದ್ರಪ್ಪ, ಮತ್ತು ನಾಲ್ಕು ಜಿಲ್ಲೆಯ ಬಸ್ ಮಾಲಿಕರ ಸಂಘದ ಅಧ್ಯಕ್ಷರಾದ ಬೈರೇಶ್, ಜೆ.ಕೆ.ಬಾಲಕೃಷ್ಣ ಭಟ್, ಜಯಪ್ರಕಾಶ್, ಜಿ.ಎ.ಲಿಂಗಾರೆಡ್ಡಿ, ಇ.ವಿ.ಅಜ್ಜಪ್ಪನವರು, ಮಾಜಿ ಶಾಸಕರು ಹಾಗು ಬಸ್ ಮಾಲಿಕರಾದ ಇ.ವಿ.ವಿಜಯಕುಮಾರ್ ಮತ್ತು ನಾಲ್ಕು ಜಿಲ್ಲೆಯ ಬಸ್ ಮಾಲಿಕರ ಸಂಘದ ಸದಸ್ಯರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು, ಸಣ್ಣ ಮತ್ತು ದೊಡ್ಡ ಲಾರಿ ಮಾಲಿಕರು,  ಚಾಲಕರು, ಪ್ರಯಾಣಿಕರ ಆಟೋಗಳು, ಲಗೇಜ್ ಆಟೋ ಮಾಲಿಕರು, ಪ್ರವಾಸಿ ಆಟೋಗಳ ಮಾಲಿಕರು, ಚಾಲಕರು, ರೈತ ಬಾಂಧವರು, ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಮತ್ತು ಸ್ತ್ರೀ ಶಕ್ತಿ ಸಂಘದ ಸದಸ್ಯರು, ಕಟ್ಟಡ ಕೂಲಿ ಕಾರ್ಮಿಕ ಸಂಘದ ಸದಸ್ಯರು, ವರ್ತಕರು ಭಾಗವಹಿಸಿದ್ದರು ಎಂದು ಚಿಕ್ಕಮಗಳೂರ ಜಿಲ್ಲಾ ಖಾಸಗಿ ಬಸ್ ಮಾಲಿಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಪಿ. ಚಂದ್ರಶೇಖರ್ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.