ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘಕ್ಕೆ ಚುನಾವಣೆ
ನರಸಿಂಹರಾಜಪುರ: ತಾಲೂಕಿನ ಮೆಣಸೂರು ಗ್ರಾಮದಲ್ಲಿರುವ ಮೌಂಟ್ ಕಾರ್ಮಲ್ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘಕ್ಕೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಗುರುವಾರ ಚುನಾವಣೆ ನಡೆಯಿತು. ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿ ವಿದ್ಯಾರ್ಥಿ ಸಂಘದ ಅದ್ಯಕ್ಷರನ್ನು ಆಯ್ಕೆ ಮಾಡಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಸಿಸ್ಟರ್ ಶಾಲಿ, ಉಪಪ್ರಾಂಶುಪಾಲೆ ಸಿಸ್ಟರ್ ಶುಭ, ಉಪನ್ಯಾಸಕ ಎ.ಎಸ್. ಸತೀಶ್, ಸ್ವಪ್ನ ಹೆಗಡೆ, ಐ.ಎಂ. ರಾಜೀವ್, ಸುಪ್ರೀತ್, ಟಿ.ಮಂಜುನಾಥ್ ಉಪಸ್ಥಿತರಿದ್ದರು.ಸಂಘದ ಪದಾಧಿಕಾರಿಗಳು: ಅಧ್ಯಕ್ಷರು ಡಿ. ಜಸ್ಟಿನ್, ಉಪಾಧ್ಯಕ್ಷ ಪಿ.ಪಿ. ವಿಬಿನ್, ಕಾಯದರ್ಶಿ ಲವೀನಾ ಮಸ್ಕ ರೇನಸ್, ಸಹ ಕಾರ್ಯದರ್ಶಿ ರೋಸಮ್ಮ, ಕ್ರೀಡಾ ಕಾರ್ಯದರ್ಶಿ ಎಸ್. ನವ್ಯಶ್ರೀ, ಎಸ್.ಜೆ. ಸುಕೇಶ್, ಸಾಂಸ್ಕೃತಿಕ ಕಾಯದರ್ಶಿ ಜೋಸ್ನಾ ಜೋಸ್, ಕೆ. ಸುಮತಿ, ಶಿಸ್ತು ಸಮಿತಿ ಕೆ.ಪಿ.ಅನಿಷ್, ಕೆ.ಜೆ. ಪ್ರಿಯಾ, ಆರೋಗ್ಯ ವಿಭಾಗ ಪಿ.ಜೆ. ಸನ್ನಿಧಿ, ಖಜಾಂಚಿ ಬಿ.ಎಂ. ದಿವ್ಯಶ್ರೀ.
ವೀರಶೈವ ಸಮಾಜ ವಾರ್ಷಿಕ ಸಮಾವೇಶಕ್ಕೆ ಚಟ್ನಳ್ಳಿ ಮಹೇಶ್
ಚಿಕ್ಕಮಗಳೂರು: ಉತ್ತರ ಅಮೇರಿಕಾ ವೀರಶೈವ ಸಮಾಜ ಜುಲೈ 4 ಮತ್ತು 5 ರಂದು ಸಂಘಟಿಸಿರುವ 37ನೇ ವಾರ್ಷಿಕ ಸಮಾವೇಶಕ್ಕೆ ವಿಶೇಷ ಉಪನ್ಯಾಸಕರಾಗಿ ಚಿಕ್ಕಮಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಟ್ನಳ್ಳಿ ಮಹೇಶ್ ಆಹ್ವಾನಿತರಾಗಿದ್ದಾರೆ. ವೀರಶೈವ ಸಮ್ಮೇಳನದಲ್ಲಿ ವಚನಕಾರರ ಬದುಕು ಮತ್ತು ಬರಹ ಕುರಿತಂತೆ ವಿಶೇಷ ಉಪನ್ಯಾಸ ನೀಡುವ ಚಟ್ನಳ್ಳಿ ಮಹೇಶ್ ಅವರು 4 ವಾರಗಳ ಅಮೇರಿಕಾ ಪ್ರವಾಸ ಕೈಗೊಳ್ಳಲಿದ್ದಾರೆ. ನ್ಯೂಯಾರ್ಕ್, ಬಾಸ್ಟನ್, ಡೆಟ್ರಾಯ್ಟ್ ಹಾಗೂ ಮೇರಿಲ್ಯಾಂಡ್ನ ಜಿಎಸ್ಎಸ್ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಆಯೋಜಿಸಿರುವ ವಿಶೇಷ ಸಭೆಯಲ್ಲಿ ಕನ್ನಡ ಸಾಹಿತ್ಯದ ಮೌಲಿಕ ವಿಷಯಗಳ ಬಗ್ಗೆ ಉಪನ್ಯಾಸ-ಸಂವಾದ ನಡೆಸಿಕೊಡಲಿದ್ದಾರೆ.ಜೂ. 29 ರ ಸಂಜೆ 5 ಗಂಟೆಗೆ ಚಟ್ನಳ್ಳಿ ಗ್ರಾಮದ ಶ್ರೀ ಮಲ್ಲಿಕಾರ್ಜುನಸ್ವಾಮಿ ಸಮುದಾಯಭವನದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಚಟ್ನಳ್ಳಿ ಮಹೇಶ್ ಅವರನ್ನು ಅಭಿನಂದಿಸಲಿದೆ. ಶಾಸಕ ಸಿ.ಟಿ. ರವಿ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಸಾಹಿತ್ಯ ಪೂಜಾರಿ ಹಿರೇಮಗಳೂರು ಕಣ್ಣನ್, ಹಿರಿಯ ಪತ್ರಕರ್ತ ಸ. ಗಿರಿಜಾಶಂಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

