ಕಾಫಿಗೆ ಬಿಳಿ ಕಾಂಡ ಕೊರಕ: ನಿಯಂತ್ರಣ ಕ್ರಮ
ಚಿಕ್ಕಮಗಳೂರು: ಅರೇಬಿಕಾ ಕಾಫಿಯ ವಿನಾಶಕಾರಿ ಕೀಟ ಬಿಳಿಕಾಂಡ ಕೊರಕ ಸದ್ಯದ ಪರಿಸ್ಥಿತಿಯಲ್ಲಿ ಜಾಸ್ತಿಯಾಗಿರುವುದು ಕಂಡು ಬಂದಿದೆ.
ಇತ್ತೀಚಿನ ಹವಾಮಾನ ವರದಿಯ ಪ್ರಕಾರ ಈ ವರ್ಷ ಕಡಿಮೆ ಮಳೆಯಾಗುವ ಸಾಧ್ಯತೆ ಹಿನ್ನೆಲೆ ಬೆಳೆಗಾರರು ಈ ಕ್ಲಿಷ್ಟ ಪರಿಸ್ಥಿತಿಯಲ್ಲಿ ಹೆಚ್ಚುತ್ತಿರುವ ಬಿಳಿಕಾಂಡ ಕೊರಕದ ಹಾನಿಯ ಪ್ರಮಾಣವನ್ನು ಮುಂಬರುವ ದಿನಗಳಲ್ಲಿ ಅವುಗಳ ನಿಯಂತ್ರಣಕ್ಕೆ ಅಗತ್ಯಕ್ಕೆ ಅನುಗುಣವಾಗಿ ಕಾರ್ಯವನ್ನು ಕೈಗೊಳ್ಳಬೇಕು ಎಂದು ಕಾಫಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಅರೇಬಿಕಾ ಕಾಫಿ ಬೆಳೆಗಾರರು ಬಿಳಿ ಕಾಂಡ ಕೊರಕ ಕೀಟ ಪೀಡಿತ ಗಿಡಗಳನ್ನು ಹುಡುಕಿ, ಕಿತ್ತು ನಾಶ ಮಾಡುವುದು ಸೂಕ್ತ.
ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಕಾಫಿ ಚಿಗುರುಗಳನ್ನು ತೆಗೆಯುವುದು ಸಾಮಾನ್ಯ. ಆದರೆ, ಈ ವರ್ಷ ಪುಡಿ ಚಿಗುರು ತೆಗೆಯುವ ಕೆಲಸ ಮಾಡುವಾಗ ಗಿಡದ ನೆತ್ತಿ ಚಿಗುರುಗಳನ್ನು ತೆಗೆದು ನೆತ್ತಿ ಬಿಡಿಸುವ ಕಾರ್ಯವನ್ನು ಮಾಡದೇ ಇರುವುದರಿಂದ ಮುಖ್ಯಕಾಂಡವನ್ನು ಬೋರರ್ನಿಂದ ಕಾಪಾಡಬಹುದಾಗಿದೆ.
ಅರೇಬಿಕಾ ತೋಟದಲ್ಲಿ ಬೋರರ್ ಪೀಡಿತವಾದ ಎಲ್ಲಾ ಗಿಡಗಳನ್ನು ಸೆಪ್ಟೆಂಬರ್ ತಿಂಗಳೊಳಗೆ ಕಿತ್ತು ತೆಗೆದ ನಂತರ ಉಳಿದ ಗಿಡಗಳನ್ನು ಬೋರರ್ನಿಂದ ರಕ್ಷಿಸಲು ಕ್ಲೋರೋಫೈರಿಫಾಸ್ 35 ಇ.ಸಿ. ಎಂಬ ಕೀಟನಾಶಕವನ್ನು ಒಂದು ಬ್ಯಾರೆಲ್ (200 ಲೀಟರ್ ನೀರಿನಲ್ಲಿ 600 ಮಿ.ಲೀ ಪ್ರಮಾಣದಲ್ಲಿ ಮತ್ತು 200 ಮಿ.ಲೀ. ಅಂಟು ದ್ರಾವಣ ಸೇರಿಸಿ, ಮಿಶ್ರಗೊಳಿಸಿ, ಕಾಫಿ ಗಿಡದ ಮುಖ್ಯ ಕಾಂಡ ಮತ್ತು ದಪ್ಪ ರಂಬೆಗಳನ್ನು ಸಂಪೂರ್ಣವಾಗಿ ನೆನೆಯುವಂತೆ (ಒದ್ದೆಯಾಗುವಂತೆ) ಸಿಂಪಡಿಸಿ, ಈ ರೀತಿಯ ಸಿಂಪರಣೆಯನ್ನು ಮಾಡಲು ಮ್ಯಾನುವಲ್ ಅಥವಾ ಬ್ಯಾಟರಿ ಚಾಲಿತ, ಬ್ಯಾಕ್ ಪ್ರಯಾಕ್ ಸ್ಟ್ರೇಯರ್ ಬಳಸಿ, ಗಿಋಃ-24 ಅಥವಾ ಏಈಃ-ಆ ನಾಜಲ್ ಉಪಯೋಗಿಸಿ ಸಿಂಪರಣೆ ಮಾಡಬೇಕು ಎಂದು ಕಾಫಿ ಮಂಡಳಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

