ಚಿಕ್ಕಮಗಳೂರು

ಸಾಲ ಮುಕ್ತರಾಗಲು ಅದಾಲತ್ ಅವಕಾಶ

Published On :

ಚಿಕ್ಕಮಗಳೂರು: ಬ್ಯಾಂಕ್ ಸಾಲ ಪಡೆದಿರುವ ಗ್ರಾಹಕರಿಗೆ ಲೋಕ ಅದಾಲತ್‌ನಲ್ಲಿ ರಿಯಾಯಿತಿಯೊಂದಿಗೆ ಸಾಲ ಮುಕ್ತರಾಗಲು ಸುವರ್ಣಾವಕಾಶವಾಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಎಚ್.ಎಸ್. ಕಮಲ ಹೇಳಿದ್ದಾರೆ.
ನಗರದ ಕೆನರಾ ಬ್ಯಾಂಕ್ ಮುಖ್ಯ ಶಾಖೆಯ ಆವರಣದಲ್ಲಿ ಆಯೋಜಿಸಿದ್ದ 2ನೇ ರಾಷ್ಟ್ರೀಯ ಲೋಕ ಅದಾಲತ್ ಸಂಬಂಧ ಬ್ಯಾಂಕ್ ಪ್ರಕರಣಗಳ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರ್ಯಾಯ ವ್ಯವಸ್ಥೆ: ನ್ಯಾಯಾಲಯಗಳಿಗೆ ಪ್ರಕರಣಗಳ ಒಳಹರಿವು ಹೆಚ್ಚಾದ ಕಾರಣ ನ್ಯಾಯದಾನದಲ್ಲಿ ವಿಳಂಬವಾಗಬಾರದೆಂಬ ಕಾರಣದಿಂದ ಪರ್ಯಾಯ ವ್ಯವಸ್ಥೆಯಾಗಿ ಲೋಕ್ ಅದಾಲತ್‌ಗಳು ಕಾರ್ಯನಿರ್ವಹಿಸುತ್ತಿದ್ದು, ವ್ಯಾಜ್ಯ ಪೂರ್ವ ಹಂತದಲ್ಲಿಯೇ ಈ ಪ್ರಕರಣಗಳು ಇತ್ಯರ್ಥವಾಗುವುದರಿಂದ ಗ್ರಾಹಕರು ನ್ಯಾಯಾಲಯದ ಶುಲ್ಕದಿಂದ ವಿನಾಯಿತಿ ಪಡೆಯುವುದರ ಜತೆಗೆ ಸುಸ್ತಿ ಬಡ್ಡಿಯಲ್ಲಿ ರಿಯಾಯಿತಿ ಪಡೆದುಕೊಂಡು ಈ ಅವಕಾಶ ಸದುಪಯೋಪಡಿಸಿಕೊಳ್ಳುವಂತೆ ಕರೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯಂತೆಯೇ ಚಿಕ್ಕಮಗಳೂರು ಜಿಲ್ಲೆಯ ಕೆನರಾ ಬ್ಯಾಂಕ್ ಗ್ರಾಹಕರು ಈ ಲೋಕ ಅದಾಲತ್ ಸದುಪಯೋಗ ಪಡೆದುಕೊಂಡು, ಜಿಲ್ಲೆಯಲ್ಲಿ 2ನೇ ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಗೊಳಿಸಲು ಸಹಕರಿಸಬೇಕೆಂದರು.
ಕೆನರಾ ಬ್ಯಾಂಕ್ ಶಿವಮೊಗ್ಗ ವೃತ್ತ ಕಚೇರಿಯ ಉಪ ಮಹಾ ಪ್ರಬಂಧಕ ಎಂ.ಎಂ. ಚಿನಿವಾರ್ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಅಫ್ತಾಬ್ ಅಹಮದ್, ಕಾರ್ಯದರ್ಶಿ ಐ.ಎಸ್. ತೇಜಸ್ವಿ, ಸಹಾಯಕ ಮಹಾ ಪ್ರಬಂಧಕ ಸತೀಶ್ ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಮುಖ್ಯ ವ್ಯವಸ್ಥಾಪಕ ವಿ. ರಘುನಾಥ್ ಸ್ವಾಗತಿಸಿದರು, ಮಮತ ನಿರೂಪಿಸಿ, ಸಹಾಯಕ ಮಹಾ ಪ್ರಬಂಧಕ ಕುಲಕರ್ಣಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.