ಚಿಕ್ಕಮಗಳೂರು

ಬಿ.ಮಲ್ಲೇನಹಳ್ಳಿಯಲ್ಲಿ ಹಾಲು ಶೀತಲೀಕರಣ ಘಟಕ

Published On :

ಕ.ಪ್ರ.ವಾರ್ತೆ, ಕಡೂರು, ಮಾ.3
ಕಡೂರು ತಾಲೂಕಿನ ಬಿ. ಮಲ್ಲೇನಹಳ್ಳಿಯಲ್ಲಿ ರು. 20 ಲಕ್ಷ ವೆಚ್ಚದಲ್ಲಿ ಹಾಲು ಶೀತಲೀಕರಣ ಘಟಕ ತೆರೆಯಲಾಗುವುದು ಎಂದು ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಡಿ. ರೇವಣ್ಣ ಹೇಳಿದರು.
ಅವರು ಕಡೂರು ತಾಲೂಕಿನ ಬಿ. ಮಲ್ಲೇನಹಳ್ಳಿಯಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಹಾಸನ ಹಾಲು ಒಕ್ಕೂಟ ಹೆಚ್ಚಿನ ಬೆಲೆಗೆ ರೈತರಿಂದ ಹಾಲು ಖರೀದಿ ಮಾಡುತ್ತಿದೆ. ಖರೀದಿ ಮಾಡಿದ ಹಾಲು ಸಂಪೂರ್ಣ ಮಾರಾಟವಾಗದಿದ್ದಲ್ಲಿ ಅದನ್ನು ಹಾಲಿನ ಪುಡಿಯಾಗಿ ರೂಪಾಂತರಗೊಳಿಸಲಾಗುತ್ತಿದೆ. ಹಾಸನ  ಹಾಲು ಒಕ್ಕೂಟವು ರು. 14.5 ಕೋಟಿ ಲಾಭದಲ್ಲಿದ್ದು, ಇದರಲ್ಲಿ ರು. 15 ಕೋಟಿ ಲೀಟರಿಗೆ ರು. 3 ರಂತೆ ರೈತರಿಗೆ ವಾಪಸ್ ನೀಡಲಾಗುತ್ತಿದೆ.
ಸವಲತ್ತು ಪಡೆದಿಲ್ಲ: ನಮ್ಮ ಒಕ್ಕೂಟದಲ್ಲಿ ಅಧ್ಯಕ್ಷರಿಗೆ ಸಂಬಳ, ಸಾರಿಗೆಯಾಗಲೀ ಇಲ್ಲ. ನಾನು ಅಧ್ಯಕ್ಷನಾದ ಅವಧಿಯಿಂದ ಇಲ್ಲಿವರೆಗೆ ಯಾವುದೇ ಸವಲತ್ತು ಪಡೆದಿಲ್ಲ. ಅಧ್ಯಕ್ಷನಾದ ಆರಂಭದಲ್ಲಿ ಒಕ್ಕೂಟದ ವಾರ್ಷಿಕ ವಹಿವಾಟು ರು. 25 ಕೋಟಿ ಇದ್ದದ್ದು, ಇದೀಗ ರು. 750 ಕೋಟಿಗೆ ಏರುವ ಮೂಲಕ ಅಭಿವೃದ್ಧಿಯತ್ತ ಸಾಗಿದೆ. ಈ ಒಕ್ಕಟವು ಈ ಮಟ್ಟಕ್ಕೆ ಬೆಳೆಯಲು ಮಾಜಿ ಪ್ರಧಾನಿ ದೇವೇಗೌಡರ ಸಹಕಾರದಿಂದ ಚನ್ನರಾಯಪಟ್ಟಣದಲ್ಲಿ ಆರಂಭವಾಗಿರುವ ರು. 180 ಕೋಟಿ ವೆಚ್ಚದಲ್ಲಿ ಆರಂಭಿಸಿರುವ ಚಿಲ್ಲಿಂಗ್ ಪ್ಲಾಂಟ್ ಕಾರಣವಾಗಿದೆ ಎಂದರು.
ಕಡೂರಿನಲ್ಲಿ ಡೈರಿ ಆರಂಭಿಸುವಂತೆ ದೇವೇಗೌಡರು ತಮಗೆ ಸೂಚನೆ ನೀಡಿದ್ದು, ಕಡೂರಿನಲ್ಲಿ ಡೈರಿ ಆರಂಭಿಸಿ ಅಲ್ಲಿಂದ  ಚಿಕ್ಕಮಗಳೂರಿಗೆ ಹಾಲು ಸರಬರಾಜು ಮಾಡುವ ಯೋಜನೆ ಬಗ್ಗೆ ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
6 ಟಿ.ಎಂ.ಸಿ. ಮಾತ್ರ ಲಭ್ಯ: ಎತ್ತಿನಹೊಳೆ ಯೋಜನೆಯ ನೇತ್ರಾವತಿ ನದಿಯಿಂದ  250 ಟಿಎಂಸಿ ನೀರು ತರುವ ಚಿಂತನೆಯಿದ್ದು, ಆದರೆ ನೇತ್ರಾವತಿ ಯೋಜನೆಯಿಂದ 6 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಹೆಚ್ಚಿನ ನೀರಿಗಾಗಿ ಹೋರಾಟ ಮಾಡುವ ಅಗತ್ಯವಿದ್ದು, ಅದಕ್ಕಾಗಿ ಸಮಾಲೋಚಿಸಲಾಗುತ್ತಿದೆ. ಮಾಜಿ ಶಾಸಕ ಧರ್ಮೇಗೌಡರ ಹೋರಾಟದ ಫಲವಾಗಿ ಕಡೂರಿನಲ್ಲಿ ಮೆಸ್ಕಾಂ ವಿಭಾಗಿಯ ಕಚೇರಿ ಆರಂಭವಾಗಿದೆ ಎಂದರು.
ಅವರು ಬೀರೂರು ಕ್ಷೇತ್ರದ ಶಾಸಕರಾದಾಗ ಅನೇಕ ಕೆಲಸ ಮಾಡಿಸಿದ್ದು ಇದೀಗ ದೇವೇಗೌಡರು ಮತ್ತು ಶಾಸಕ  ವೈ.ಎಸ್.ವಿ. ದತ್ತರವರು ಕಡೂರು ಕ್ಷೇತ್ರದ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.
ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ, ಜಿಪಂ ಸದಸ್ಯರಾದ ಕವಿತಾ ಬೆಳ್ಳಿಪ್ರಕಾಶ್ ಮಾತನಾಡಿದರು.
ಹಾಸನ ಹಾಲು ಒಕ್ಕಟೂದ ನಿರ್ದೇಶಕರಾದ ಕೆ.ಎಂ. ಮಹೇಶ್ವರಪ್ಪ, ರಾಮಪ್ಪ, ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ಗೋಪಾಲಯ್ಯ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷೆ ಟಿ.ಕೆ. ಶಾರದಮ್ಮ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.