12ರಿಂದ ರೇಣುಕಾಚಾರ್ಯ ಜಯಂತ್ಯುತ್ಸವ ಪ್ರಾರಂಭ
ಕಡೂರು: ಮಾ.12ರಿಂದ 16 ರವರೆಗೆ ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆಯಲಿರುವ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ದಾಸೋಹಕ್ಕೆ ಕಡೂರು ತಾಲೂಕಿನ ಎಲ್ಲಾ ಸಮಾಜದ ಸರ್ವ ಭಕ್ಕರೂ ಮೀಸಲು ಮತ್ತು ಕಾಣಿಕೆ ನೀಡಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ಎಂ. ಲೋಕೇಶ್ ಹಾಗೂ ವೀರಶೈವ ಸಮಾಜ ವಿದ್ಯಾರ್ಥಿನಿಲಯ ಅಧ್ಯಕ್ಷ ರೇವಣ್ಣಯ್ಯ ಮನವಿ ಮಾಡಿದರು.
ಕಡೂರು ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದ ತುರುವನಹಳ್ಳಿ ರೇಣುಕಯ್ಯ, ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾವಿರಾರು ಭಕ್ತರಿಗಾಗಿ ಏರ್ಪಡಿಸಿರುವ ಅನ್ನ ದಾಸೋಹಕ್ಕೆ ತಮ್ಮ ಕೈಲಾದ ಮೀಸಲು ಹಾಗೂ ಕಾಣಿಕೆಯನ್ನು ಅರ್ಪಿಸಿ ಶ್ರೀಯವರ ಕೃಪೆಗೆ ಪಾತ್ರರಾಗಬೇಕು ಎಂದರು.
ಈ ಬಾರಿಯೂ ಮೀಸಲು ಹಾಗು ಕಾಣಿಕೆಯನ್ನು ಸಂಗ್ರಹಿಸಲಾಗುವುದು ತಾಲೂಕಿನ ಎಲ್ಲಾ ವರ್ಗದ ಭಕ್ತರು ಒಂದು ದಿನದ ದಾಸೋಹಕ್ಕಾಗಿ ನಗದು ಮತ್ತು ವಸ್ತು ರೂಪದಲ್ಲಿ ಕಾಣಿಕೆ ನೀಡಬೇಕು. ಅಕ್ಕಿ, ಬೇಳೆ, ತೆಂಗಿನಕಾಯಿ, ಬೆಲ್ಲ, ಎಣ್ಣೆ, ಸಾಂಬಾರು ಪದಾರ್ಥಗಳು ಹಾಗೂ ಅಡುಗೆಗೆ ಬೇಕಾದ ತರಕಾರಿಗಳು ಇತರೆ ಎಲ್ಲಾ ಸಾಮಗ್ರಿಗಳನ್ನು ನೀಡುವ ಮೂಲಕ ಶ್ರೀಗಳ ಕೃಪೆಗೆ ಪಾತ್ರರ್ರಾಗಬೇಕು ಎಂದು ಕೋರಿದರು.
ಕಾಣಿಕ ನೀಡುವ ಭಕ್ತರು ಮಾಹಿತಿಗಾಗಿ ಮೊ. 9448272201 ಹಾಗೂ ಮೊ. 9449157704 ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಟಿಯಲ್ಲಿ ಪುರಸಭಾ ಸದಸ್ಯ ಎಂ. ರೇಣುಕಾರಾಧ್ಯ, ಬಳ್ಳೇಕೆರೆ ವಿಶ್ವನಾಥ್, ಗಂಗಾಧರಯ್ಯ, ರೇಣುಕಾರಾಧ್ಯ, ಸದಾಶಿವ ಮೊದಲಾದರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

