ಕಡೂರಲ್ಲಿ ಪಹಣಿ ದಾಖಲೆ ಪಡೆಯಲು ನೂಕು ನುಗ್ಗಲು
ಕ.ಪ್ರ.ವಾರ್ತೆ ್ಣ ಕಡೂರು ್ಣ ಮಾ. 4
ನಷ್ಟಕ್ಕೆ ಒಳಗಾಗಿರುವ ತೆಂಗು ಬೆಳೆಗಾರ ರೈತರ ತೋಟದ ಪುನಶ್ಚೇತನಕ್ಕಾಗಿ ರಾಜ್ಯ ಸರ್ಕಾರ ನೀಡುತ್ತಿರುವ ಸಹಾಯಧನ ಪಡೆಯಲು ಬೇಕಾಗಿರುವ ಪಹಣಿ ದಾಖಲೆಗಾಗಿ ತಾಲೂಕು ಕಚೇರಿ ಮುಂದೆ ನೂಕು ನೂಗ್ಗಲಲ್ಲಿ ನಿಂತು ಹರಸಾಹಸಪಡುತ್ತಿರುವ ರೈತರಲ್ಲಿ ಸರ್ಕಾರದ ಮಾನದಂಡದಂತೆ ನಿಜವಾದ ಫಲಾನುಭವಿಗೆ ಸವಲತ್ತು ಸಿಗುತ್ತದೆಯೇ ಎಂಬ ಶಂಕೆ ಕಾಡುತ್ತಿದೆ.
ರಾಜ್ಯ ಸರ್ಕಾರ ತೆಂಗು ಹಾಳಾಗಿರುವ ತೋಟಗಳ ಪುನಶ್ಚೇತನಕ್ಕಾಗಿ ತಲಾ 1 ಹೆಕ್ಟೇರ್ಗೆ ರು. 5,000 ದಂತೆ 2 ಹೆಕ್ಟೇರ್ ತೆಂಗಿನ ತೋಟ ಹೊಂದಿರುವ ರೈತರಿಗೆ ಸಹಾಯಧನ ಯೋಜನೆಗೆ ಫಲಾನುಭವಿ ರೈತರು ಅರ್ಜಿ ಸಲ್ಲಿಸಬೇಕಾಗಿದೆ.
ನೆಮ್ಮದಿ ಕೇಂದ್ರ: ಈ ಹಿನ್ನೆಲೆಯಲ್ಲಿ ತಾಲೂಕಿನ ಪ್ರತೀ ಹೋಬಳಿ ಕೇಂದ್ರಗಳಲ್ಲಿ ಇದ್ದು ನೆಮ್ಮದಿ ಕೇಂದ್ರಗಳು ಈ ಹಿಂದೆಯೇ ರದ್ದು ಪಡಿಸಿರುವುದರಿಂದ ದೂರದ ಊರುಗಳಿಂದ ಕಡೂರು ತಾಲೂಕು ಕಚೇರಿಯಲ್ಲಿ ಪಹಣಿ ಸ್ವೀಕಾರ ಕೇಂದ್ರಕ್ಕೆ ಆಗಮಿಸುತ್ತಿರುವ ರೈತರ ಸಂಖ್ಯೆ ಹೆಚ್ಚುತ್ತಿದೆ.
ಕಡೂರು ತಾಲೂಕಿನಲ್ಲಿನ 69 ಸಾವಿರ ಹೆಕ್ಟೇರ್ ಕೃಷಿ ಭೂಮಿ ಇದೆ. ಅದರಲ್ಲಿ ಖಾಲಿ ಜಮೀನು ಬಿಟ್ಟರೆ ಬಯಲು ಪ್ರದೇಶವಾದ ತೆಂಗು ಪ್ರಮುಖ ಬೆಳೆಯಾಗಿದ್ದು, ಅಡಕೆಗಿಂತ ತೆಂಗಿನ ಬೆಳೆಯೇ ಹೆಚ್ಚಾಗಿದೆ.
ಕಡೂರು ತಾಲೂಕಿನಲ್ಲಿ ನಿರಂತರ ಕಾಡುತ್ತಿರುವ ಬರಗಾಲದಿಂದ ತೆಂಗಿಗೆ ಮತ್ತೆ ಗರಿರೋಗ, ನುಸಿ ಪೀಡೆ ಬಂದಿದ್ದು, ಇಳುವರಿ ಇಲ್ಲದೆ ತೋಟಗಳು ಒಣಗಿ, ರೈತರು ಸಂಕಷ್ಟದಲ್ಲಿದ್ದಾರೆ. 10 ತಿಂಗಳ ಹಿಂದೆ ರಾಜ್ಯದ ಪ್ರತಿ ತಾಲೂಕುಗಳಿಗೆ ಸ್ವತಃ ಗೋರಕ್ ಸಿಂಗ್ ಅವರು ಭೇಟಿ ನೀಡಿ, ತೋಟಗಳ ಪರಿಶೀಲಿಸಿ, ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದಾರೆ.
ಸಹಾಯಧನ ಯೋಜನೆ: ಇದೀಗ ರಾಜ್ಯ ಸರ್ಕಾರ ತೋಟಗಳ ಪುನಶ್ಚೇತನಕ್ಕಾಗಿ ಪ್ರತೀ 2 ಹೆಕ್ಟೇರ್ಗೆ ರು. 10,000 ಸಹಾಯಧನ ಯೋಜನೆ ಜಾರಿಗೆ ತಂದಿದೆ. ಆದರೆ ಯೋಜನೆಯಿಂದ ನಿಜವಾದ ರೈತನಿಗೆ ಸಿಗುವ ಸಹಾಯಧನ ಎಷ್ಟು ಎಂಬುದರ ಬಗ್ಗೆ ರೈತರೇ ಚಿಂತಿಸುವಂತಾಗಿದೆ.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲೂ ಸುವರ್ಣಭೂಮಿ ಎಂಬ ಹೆಸರಿನಲ್ಲಿ ಔಷಧಿ, ಗೊಬ್ಬರ ಖರೀದಿಗಾಗಿ ರೈತನಿಗೆ ತಲಾ ರು. 10,000 ನೀಡುವ ಯೋಜನೆ ಜಾರಿ ಮಾಡಿತ್ತು. ಆಗಲೂ ರೈತರೇ ಫಲಾನುಭವಿಗಳಾದರೂ ನಿಜವಾದ ರೈತರಿಗೆ ಸವಲತ್ತು ತಲುಪುತ್ತಿಲ್ಲ ಎಂಬ ಹಲವಾರು ದೂರುಗಳಿದ್ದವು.
ಈ ಬಗ್ಗೆ ಸರ್ಕಾರ ಗಮನಹರಿಸಿ ನಿಜವಾದ ಫಲಾನುಭವಿ ರೈತರಿಗೆ ಸವಲತ್ತು ಸಿಗುವಂತೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ. ಒಟ್ಟಿನಲ್ಲಿ ಸರ್ಕಾರದ ಯೋಜನೆಗಳು ಎಷ್ಟರಮಟ್ಟಿಗೆ ಜನರನ್ನು ತಲುಪುತ್ತಿವೆ ಎಂಬುದು ಮುಖ್ಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

