ಮೀನುಗಾರರ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ
ಕ.ಪ್ರ.ವಾರ್ತೆ, ಕಡೂರು, ಮಾ.5
ತಾಲೂಕು ಮೀನುಗಾರರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅಜ್ಜಯ್ಯ, ಉಪಾಧ್ಯಕ್ಷರಾಗಿ ಬಸವರಾಜು ಅವಿರೋಧವಾಗಿ ಆಯ್ಕೆಗೊಂಡರು.
ಪಟ್ಟಣದ ಬನಶಂಕರಿ ದೇವಾಲಯದ ಸಮೀಪದ ಟ್ರೈಬಲ್ ಮೀನುಗಾರರ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆ ನಡೆಯಿತು. 13 ನಿರ್ದೇಕರಿರುವ ಸಂಘದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿಗೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆ ಆಗಿದ್ದ ಹಿನ್ನೆಲೆಯಲ್ಲಿ ಆಯ್ಕೆಯು ಸುಗಮವಾಗಿ ನಡೆಯಿತು.
ಚುನಾವಣಾಧಿಕಾರಿ ಟಿ.ಜೆ. ಪರಮೇಶ್ವರಪ್ಪ ಅವರು ಅಜ್ಜಯ್ಯನವರು ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಬಸವರಾಜು ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಇದೇ ಸಂದರ್ಭ ಅಧ್ಯಕ್ಷ ಅಜ್ಜಯ್ಯ ಮಾತನಾಡಿ, ಕಳೆದ ವಾರ ನಡೆದ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ನಾನು ಸೇರಿಂದಂತೆ 13 ಜನ ನಿರ್ದೇಶಕರ ಆಯ್ಕೆ ನಡೆದಿದೆ. ಎಲ್ಲ ನಿರ್ದೇಶಕರು ತಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿ ಉನ್ನತ ಸ್ಥಾನ ನೀಡಿದ್ದಾರೆ. ನಮಗೆ ಸಿಕ್ಕಿರುವ ಈ ಅವಧಿಯಲ್ಲಿ ಎಲ್ಲರ ಸಲಹೆ ಸಹಕಾರದಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿ ಸದಸ್ಯರ ನಂಬಿಕೆ ಉಳಿಸಿಕೊಳ್ಳುತ್ತೇನೆ ಎಂದರು.
ಕಡೂರು ತಾಲೂಕು ಕಳೆದ ಹಲವು ವರ್ಷದಿಂದ ಬರಗಾಲಕ್ಕೆ ತುತ್ತಾಗಿ ಮಳೆ ಬಾರದೆ ಕೆರೆಗಳಲ್ಲಿ ನೀರು ಸಂಗ್ರಹವಾಗದೆ ಮೀನುಗಾರರ ಸ್ಥಿತಿ ಕಷ್ಟವಾಗಿತ್ತು. ಇಂತಹ ಸಂದರ್ಭದಲ್ಲಿ ಸರ್ಕಾರವು ನಮ್ಮ ಸಂಘದ ಅಭಿವೃದ್ಧಿಗೆ ಸಹಾಯ ನೀಡಿ ಮೀನುಗಾರರ ಸಹಾಯಕ್ಕೆ ಬರಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಂಘದ ನೂತನ ನಿದೇಶಕರಾದ ಶಿವಮೂರ್ತಿನಾಯ್ಕ, ಎಸ್.ಕೆ. ಜಗದೀಶ್, ಕಲೀಮ ಖಾನ್, ಎಸ್.ಕೃಷ್ಣಪ್ಪ, ಜಿ.ಜಿ. ಮಂಜುನಾಥ್, ಮುರುಗೇಶ್, ಕೆ.ಎಚ್. ರಘು, ಕಂಸಾಗರ ರಘು, ಟಿ.ಎನ್. ಪುಟ್ಟಸ್ವಾಮಿ, ಬಸವರಾಜನಾಯ್ಕ, ನೂರ್ ಜಹಾನ್, ಸರಸ್ವತಿ ಕೃಷ್ಣಮೂರ್ತಿ ಹಾಗೂ ಸಂಘದ ಕಾರ್ಯದರ್ಶಿ ಗಂಗಾಧರನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

