ಚಿಕ್ಕಮಗಳೂರು

ಯುವಜನರು ಸವಲತ್ತು ಬಳಕೆಗೆ ಮುಂದಾಗಲಿ

Published On :

ಕ.ಪ್ರ.ವಾರ್ತೆ, ತರೀಕೆರೆ, ಮಾ. 6
ಯುವ ಜನರಿಗಾಗಿಯೇ ಇರುವ ಹಲವಾರು ಸವಲತ್ತುಗಳ ಬಳಕೆಗೆ ಯುವಜನರು ಮುಂದಾಗಬೇಕು ಎಂದು ತಾಪಂ ಸದಸ್ಯೆ ಶಾಂತ ಗುರುಮೂರ್ತಿ ತಿಳಿಸಿದ್ದಾರೆ.
ನೆಹರು ಯುವ ಕೇಂದ್ರ, ಕನ್ನಡ ಯುವಕ ಸಂಘ, ಸ್ಫೂರ್ತಿ ಮಹಿಳಾ ಸಮಾಜ, ಜನಚಿಂತನ ಸಂಸ್ಥೆ, ಗ್ರಾಮ ಜಲಾನಯನ ಸಮಿತಿ ವತಿಯಿಂದ ಸಮೀಪದ ಬುಕ್ಕಾಂಬುದಿ ವಿರೂಪಾಕ್ಷೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಯುವ ಮುಂದಾಳತ್ವ ಮತ್ತು ಸಮುದಾಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ನಬಾರ್ಡ್ ಜಿಲ್ಲಾ ವ್ಯವಸ್ಥಾಪಕರಾದ ಅನುರಾಧ ನರಹರಿ ಮಾತನಾಡಿದರು.ಗ್ರಾಪಂ ಅಧ್ಯಕ್ಷೆ ಸುಫಿಯಾ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ವಿಜ್ಞಾನ ಶಿಕ್ಷಕ ತಿಪ್ಪೇಶಪ್ಪ, ರಾಜ್ಯ ಯುವ ಪ್ರಶಸ್ತಿ ವಿಜೇತ ಎನ್. ವೀರಭದ್ರಪ್ಪ ಅವರು ಯುವ ಮುಂದಾಳತ್ವ ಕುರಿತು ಉಪನ್ಯಾಸ ನೀಡಿದರು. ರಾಷ್ಟ್ರೀಯ ಯುವದಳ ಕಾರ್ಯಕರ್ತೆ ಶ್ರುತಿ, ವಿನಯ್ ಮತ್ತಿತರರು ಭಾಗವಹಿಸಿದ್ದರು.

ಕಾಮಗಾರಿ ಸ್ಥಗಿತ; ಗ್ರಾಮಸ್ಥರ ಆಕ್ರೋಶ
ನರಸಿಂಹರಾಜಪುರ: ಹೊನ್ನೇಕೊಡಿಗೆ ಗ್ರಾಮದ ಬಿದಿರೆಮನೆ ಬಿ.ಕಾಲೋನಿಗೆ ಬಸ್ಸು ನಿಲ್ದಾಣ ಮಂಜೂರಾಗಿದ್ದರೂ ರಾಜಕೀಯ ಕಾರಣದಿಂದ ಕಾಮಗಾರಿ ನಿಲ್ಲಿಸಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ಬಗ್ಗೆ ಹೊನ್ನೇಕೊಡಿಗೆ ಗ್ರಾಮ ಪಂಚಾಯ್ತಿಗೆ ದೂರು ನೀಡಿದ ಗ್ರಾಮಸ್ಥರು, ಬಿದರೆಮನೆ ಬಿ. ಕಾಲೋನಿಗೆ ಸರ್ಕಾರದಿಂದ ಬಸ್ಸು ನಿಲ್ದಾಣ ನಿರ್ಮಿಸಲು 1 ಲಕ್ಷ ಮಂಜೂರಾಗಿದೆ. ಹಿಂದಿನಿಂದಲೂ ಬಿದರೆಮನೆ ಬಿ. ಕಾಲೋನಿಯಲ್ಲಿ ಬಸ್ಸು ನಿಲುಗಡೆ ಆಗುತ್ತಿದ್ದು, ಅದೇ ಜಾಗದಲ್ಲಿ ಬಸ್ಸು ನಿಲ್ದಾಣ ಮಾಡಿದರೆ ಹೆಚ್ಚು ಜನರಿಗೆ ಅನುಕೂಲವಾಗುತ್ತದೆ. ಒಂದು ಕುಟುಂಬದವರ ವಿರೋಧದಿಂದಾಗಿ ಕಾಮಗಾರಿಯನ್ನೇ ನಿಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ. ಕಾಮಗಾರಿ ಮಂಜೂರಾಗಿರುವ ಬಿದರೆಮನೆ ಬಿ. ಕಾಲೋನಿಯಲ್ಲೇ ಬಸ್ಸು ನಿಲ್ದಾಣ ಮಾಡಿ ಕಾಲೋನಿಯ ಜನರಿಗೆ ಅನುಕೂಲ ಮಾಡಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.