'ಸಂಘಟನೆಯಿಂದ ಸ್ತ್ರೀ ಆರ್ಥಿಕ ಸಬಲತೆ ಸಾಧ್ಯ'
ತರೀಕೆರೆ: ಬಲವಾದ ಸಂಘಟನೆಯಿಂದ ಸ್ತ್ರೀ ಆರ್ಥಿಕ ಸಬಲತೆ ಸಾಧಿಸಲು ಸಾಧ್ಯ ಎಂದು ಯುವ ಪ್ರಶಸ್ತಿ ಪುರಸ್ಕೃತ ಮಾಜಿ ಪುರಸಭಾಧ್ಯಕ್ಷ ಎಂ.ನರೇಂದ್ರ ತಿಳಿಸಿದ್ದಾರೆ.
ತಾಲೂಕಿನಲ್ಲಿ ಮಹಿಳೆಯರು, ಬಿಸಿಯೂಟ, ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಒಳಗೊಂಡಂತೆ ಪಟ್ಟಣದಲ್ಲಿ ಸ್ತ್ರೀ ಬ್ಯಾಂಕ್ ಸ್ಥಾಪನೆಯ ಹಿನ್ನೆಲೆ ಶುಕ್ರವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಕನಿಷ್ಠ ಗೌರವಧನ: ಅಂಗನವಾಡಿ, ಬಿಸಿಯೂಟ ಮತ್ತು ಆಶಾ ಕಾರ್ಯಕರ್ತೆಯರಿಗೆ ಅನುಕೂಲವಾಗಬೇಕು. ಕನಿಷ್ಠ ಗೌರವಧನ ಕೊಡಿಸಲೇಬೇಕು. ಅದಕ್ಕಾಗಿ ಸಂಘಟನೆ ಮಾಡಬೇಕು. ಎಲ್ಲ ಮಹಿಳೆಯರ ಸಬಲೀಕರಣಕ್ಕೆ, ಗಟ್ಟಿಯಾದ ಹೋರಾಟದ ಮಜಲು ಇದ್ದರೆ ಇನ್ನೂ ಒಳ್ಳೆಯದು. ಆರ್ಥಿಕ ಸಬಲೀಕರಣದಿಂದ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಇತ್ಯಾದಿ ಸೌಲಭ್ಯಗಳನ್ನು ಪಡೆಯಲು ಅನುಕೂಲ ಎಂದರು.
ಬದಲಾವಣೆ ಸಾಧ್ಯ: ಎನ್.ರಾಜು ಮಾತನಾಡಿ, ಮಹಿಳೆಯರಲ್ಲಿ ಪರಸ್ಪರ ಸಹಾಯ ಮಾಡುವ ಮನೋಭಾವನೆ ಹೆಚ್ಚಾಗಿರುತ್ತದೆ. ಮಹಿಳೆಯರಿಂದ ಬದಲಾವಣೆ ಸಾಧ್ಯ. ಎಲ್ಲರ ಸಹಕಾರ ಪಡೆದು, ತಾಲೂಕಿನಲ್ಲೇ ಮಾದರಿಯಾಗಿ ಸ್ತ್ರೀ ಬ್ಯಾಂಕ್ ಅನ್ನು ಸ್ಥಾಪಿಸೋಣ. ಮಹಿಳೆಯರೇ ಹೆಚ್ಚು ಶೋಷಣೆಗೆ ಒಳಪಡುವುದು.
ಆದುದರಿಂದ ಎಲ್ಲರೂ ಒಗ್ಗಟ್ಟಾಗಿದ್ದರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಸ್ತ್ರೀ ಬ್ಯಾಂಕ್ ಸ್ಥಾಪನೆ, ತಾಲೂಕಿನಲ್ಲಿ ಸ್ತ್ರೀ ಭವನ ಹಾಗೂ ಮಹಿಳೆಯರ ಸಾಧನೆ ಪುರಸ್ಕರಿಸುವ ಸ್ತ್ರೀ ಸಾರ್ಥಕ ಪ್ರಶಸ್ತಿಗಳನ್ನು ಪ್ರತಿ ವರ್ಷ ವಿತರಿಸಲಾಗುವುದು. ಸ್ತ್ರೀ ಬ್ಯಾಂಕ್ ಸ್ಥಾಪನೆ ಒಳ್ಳೆಯ ಉದ್ದೇಶ ಹೊಂದಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಬಿ.ಆರ್. ನೀಲಕಂಠಪ್ಪ ಮಾತನಾಡಿ, ಮಹಿಳೆಯರ ಆರ್ಥಿಕ ಸಬಲೀಕರಣದಿಂದ ಜೀವನ ನಿರ್ವಹಣೆ ಸಾಧಿಸಬಹುದು ಎಂದು ತಿಳಿಸಿದರು.
ಪ್ರಹರ್ಷಿತ ವಿದ್ಯಾ ಸಂಸ್ಧೆ ಅಧ್ಯಕ್ಷ ಟಿ,ಆರ್.ಸೋಮಶೇಖರಯ್ಯ, ಅಂಗನವಾಡಿ ಕಾರ್ಯಕರ್ತರ್ತೆಯರ ತಾಲೂಕು ಅಧ್ಯಕ್ಷೆ ವಿಜಯಲಕ್ಷ್ಮಿ, ಆಶಾ ಕಾರ್ಯಕರ್ತೆಯರು ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

