ಚಿಕ್ಕಮಗಳೂರು

ದ್ವಾರಕನಾಥ್ ಆಯೋಗ ವರದಿ ಜಾರಿಗೆ ಆಗ್ರಹ

Published On :

ನರಸಿಂಹರಾಜಪುರ: ದ್ವಾರಕನಾಥ್ ಆಯೋಗವು ಸವಿತಾ ಸಮಾಜದವರ ಏಳಿಗೆಗಾಗಿ ನೀಡಿರುವ ವರದಿಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ತಾಲೂಕು ಸವಿತಾ ಸಮಾಜವು ಸರ್ಕಾರವನ್ನು ಒತ್ತಾಯಿಸಿದೆ.
ಸವಿತಾ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ.ಎನ್. ನಾಗರಾಜ್ ಮತ್ತು ಮುಖಂಡರಾದ ಶಿವಕುಮಾರ್, ಜಯರಾಂ, ಸುಬ್ರಮಣ್ಯ, ಶ್ರೀನಿವಾಸ್ ಅವರು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಅರ್ಪಿಸಿದರು.
ರಾಜ್ಯದಲ್ಲಿ ಸವಿತಾ ಸಮಾಜವು ಅತ್ಯಂತ ಹಿಂದುಳಿದ ಜನಾಂಗವಾಗಿದ್ದು, ಸವಿತಾ ಸಮಾಜದ ಬಹುತೇಕ ಜನರು ತಮ್ಮ ಕುಲ ಕಸುಬಿನ ಮೂಲಕವೇ ಜೀವನ ನಡೆಸುತ್ತಿದ್ದು, ಆರ್ಥಿಕವಾಗಿ ಹಿಂದುಳಿದಿದ್ದಾರೆ. ಸವಿತಾ ಸಮಾಜದವರು ಪ್ರತಿ ನಿತ್ಯ ಶೋಷಣೆ ಮತ್ತು ದೌರ್ಜನ್ಯದ ಬದುಕು ಸಾಗಿಸುವಂತಾಗಿದ್ದು, ಜನಾಂಗವನ್ನು ಅತ್ಯಂತ ಹೀನಾಯವಾಗಿ ಕಾಣಲಾಗುತ್ತಿದೆ. ಇದರಿಂದ ಸವಿತಾ ಸಮಾಜವು ಹೊರಬರಬೇಕಾದರೆ ಜನಾಂಗದ ಅಭಿವೃದ್ಧಿಗೆ ವಿಶೇಷ ಮೀಸಲಾತಿಯ ಅಗತ್ಯವಿದೆ.
ಆದ್ದರಿಂದ ಸವಿತಾ ಸಮಾಜದ ಏಳಿಗೆಗಾಗಿ ಸರ್ಕಾರವು ನೂತನ ನಿಗಮ ಸ್ಥಾಪಿಸಬೇಕು ಮತ್ತು ಸವಿತಾ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದರ ಜತೆಗೆ ದ್ವಾರಕನಾಥ ಆಯೋಗವು ಸವಿತಾ ಸಮಾಜದವರ ಏಳಿಗೆಗೆ ನೀಡಿರುವ ವರದಿಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು. ಆರೋಗ್ಯ ಭಾಗ್ಯ ಯೋಜನೆ, ತಾಲೂಕು ಕೇಂದ್ರಗಳಲ್ಲಿ ಸಮುದಾಯ ಭವನಗಳ ನಿರ್ಮಾಣ ನಿರ್ಮಿಸಲು ನಿವೇಶನ ಮಂಜೂರಾತಿ ಮಾಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.