ಚಿಕ್ಕಮಗಳೂರು

ಕಾರ್ಪೋರೇಷನ್ ಬ್ಯಾಂಕ್‌ನಿಂದ 3 ಲಕ್ಷ ಕೋಟಿ ವ್ಯವಹಾರ

Published On :

ಬಾಳೆಹೊನ್ನೂರು: ಸಾಮಾಜಿಕ ಬದ್ಧತೆಯೊಂದಿಗೆ ಕಾರ್ಪೋರೇಷನ್ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ ಎಂದು ಬ್ಯಾಂಕ್‌ನ ಸಹಾಯಕ ಮಹಾ ಪ್ರಬಂಧಕ ವಿ.ಎನ್. ಹೆಗ್ಡೆ ಹೇಳಿದ್ದಾರೆ.
ಇಲ್ಲಿನ ಪ್ರಕಾಶ್ ಕಾಂಪ್ಲೆಕ್ಸ್‌ನಲ್ಲಿ ಸೋಮವಾರದಿಂದ ನೂತನವಾಗಿ ಆರಂಭಗೊಂಡ ಕಾರ್ಪೋರೇಷನ್ ಬ್ಯಾಂಕ್‌ನ ನೂತನ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಉತ್ತಮ ವ್ಯವಹಾರ: ಜಿಪಂ ಸದಸ್ಯ ಮಹಮ್ಮದ್ ಇಫ್ತೆಖಾರ್ ಆದಿಲ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪಟ್ಟಣದಲ್ಲಿ ಆರ್ಥಿಕ ವ್ಯವಹಾರ ಉತ್ತಮವಾಗಿದ್ದು, ಬ್ಯಾಂಕ್‌ನಲ್ಲಿ ಗ್ರಾಹಕರು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಬ್ಯಾಂಕ್ ಸಿಬ್ಬಂದಿ ನೀಡುವ ಸಲಹೆಯನ್ನು ಗ್ರಾಹಕರು ಸ್ವೀಕರಿಸಬೇಕು ಎಂದರು.
ಕಾರ್ಪ್ ಬ್ಯಾಂಕ್ ಸ್ವ ಉದ್ಯೋಗ ಸಂಸ್ಥೆಯ ಪ್ರಭಾಕರ್ ಮಾತನಾಡಿ, ಕಾರ್ಪೋರೇಷನ್ ಬ್ಯಾಂಕ್ ಸಹಯೋಗದಲ್ಲಿ ಉದ್ಯೋಗ ತರಬೇತಿ ಸಂಸ್ಥೆ ಇದ್ದು, ನಿರುದ್ಯೋಗಿ ಯುವಕ, ಯುವತಿಯರಿಗೆ ಹಲವಾರು ವಿಧದ ತರಬೇತಿ ನೀಡಿ ಸ್ವ ಉದ್ಯೋಗ ಮಾಡುವಲ್ಲಿ ಸಹಕರಿಸಲಾಗುವುದು. ಗ್ರಾಮೀಣ ಪ್ರದೇಶದ ಅಭಿವೃದ್ಧಿಯೇ ಈ ತರಬೇತಿ ಮೂಲ ಉದ್ದೇಶವಾಗಿದ್ದು ಎಂದು ಹೇಳಿದರು.
  ದರು. ಬಿ. ಕಣಬೂರು ಗ್ರಾಪಂ ಅಧ್ಯಕ್ಷೆ ಶಾಹಿದಾ ಬಾನು, ಸ್ಥಳೀಯ ಮಸೀದಿ ಧರ್ಮಗುರು ಮೌಲಾನ ಮಹಮ್ಮದ್ ಕಾಶ್ಮೀರಿ ಸಾಬ್, ಕಾಫಿ ಬೆಳೆಗಾರ ಎಂ.ಎಸ್. ಜಯಪ್ರಕಾಶ್, ಮಹಿಳಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಬಿ.ಸಿ. ಗೀತಾ, ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್. ಚನ್ನಕೇಶವ್, ಬ್ಯಾಂಕ್‌ನ ಹಂಗಾಮಿ ವ್ಯವಸ್ಥಾಪಕಿ ನಿಗಾ ಸುಲ್ತಾನ, ಸಿಬ್ಬಂದಿಗಳಾದ ಚನ್ನಕೇಶವ್, ಶಿವರಾಂ, ಪ್ರಕಾಶ್, ಮಲ್ನಾಡ್, ವಿಶ್ವನಾಥ್, ಮಹೇಶ್ವರಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.