ಚಿಕ್ಕಮಗಳೂರು

2 ದಿನದಲ್ಲಿ ನಿರ್ಧಾರ ಪ್ರಕಟ: ಕೃಷ್ಣಯ್ಯ ಶೆಟ್ಟಿ

Published On :

ಮಾಲೂರು: ತಾಲೂಕು ಜನತೆಯ ಆಶೀರ್ವಾದದಿಂದ ಕಳೆದ ಒಂಬತ್ತು ವರ್ಷ ನಾನು ಶಾಸಕ, ಸಚಿವ ಸಹ ಆಗಿದ್ದು, ರಾಜಕೀಯದಲ್ಲಿ ಇನ್ಯಾವ ಆಧಿಕಾರದ ಆಸೆ ಇಲ್ಲ. ಆದರೆ ನನ್ನ ಹಿಂದೆ ದಶಕ ಕಾಲದಿಂದ ಬೆಂಬಲಿಗರಾಗಿ ನನ್ನ ಸುಖದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರ ರಾಜಕೀಯ ಉಳಿವಿಗಾಗಿ ತಾಲೂಕಿನಲ್ಲಿ ಕಾಂಗ್ರೆಸ್ ಸೇರಲು ಪ್ರಯತ್ನ ಮಾಡುತ್ತಿರುವುದಾಗಿ ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿ ಹೇಳಿದರು.
ಅವರು ತಮ್ಮ ಬೆಂಬಲಿಗರ ಸಭೆಯ ನಂತರ ಪತ್ರಕರ್ತರೊಡನೆ ಮಾತನಾಡಿ, ಶಾಸಕನಾಗಲು ಹಾಗೂ ಸಚಿವನಾಗಲು ಬಿಜೆಪಿ ಕಾರಣವಾಗಿದ್ದರೂ ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಸಾಕಷ್ಟು ಶ್ರಮ ಹಾಕಿದ್ದೇನೆ. ನನ್ನ ಮನೆ, ಕಚೇರಿ ಹಾಗೂ ಸಿಬ್ಬಂದಿ ವೇತನ ಸಹ ನಾನೇ ಕೊಟ್ಟೆ. ಆದರೆ ಟಿಕೆಟ್ ನೀಡುವ ವಿಷಯದಲ್ಲಿ ಪಕ್ಷ ನಡೆದುಕೊಂಡು ರೀತಿ ಬೇಸರ ತಂದಿದ್ದು, ನನ್ನ ಪಾಲಿಗೆ ಬಿಜೆಪಿ ಮುಗಿದ ಅಧ್ಯಾಯ ಎಂದರು. ಮಂಗಳವಾರ ನನ್ನ ಮನೆಗೆ ಕೇಂದ್ರ ಮಂತ್ರಿ ಕೆ.ಎಚ್.ಮುನಿಯಪ್ಪ, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಶಾಸಕರಾದ ರಮೇಶ್ ಕುಮಾರ್, ನಸೀರ್ ಅಹ್ಮದ್ ಬಂದಿದ್ದು, ನಿಮ್ಮ ಸೇರ್ಪಡೆ ಬಗ್ಗೆ ಹೈಕಮಾಂಡ್‌ನಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ. ಇನ್ನೆರಡು ದಿನಗಳಲ್ಲಿ ನಿಮ್ಮ ಸೇರ್ಪಡೆ ಖಚಿತವಾಗಿದ್ದು, ಅಲ್ಲಿಯ ತನಕ ಅವಸರ ಪಡದೆ ನಿಮ್ಮ ಬೆಂಬಲಿಗರ ಸಭೆಯಲ್ಲಿ ತಪ್ಪು ನಿರ್ಧಾರ ಮಾಡಬೇಡಿ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.