ಚಿಕ್ಕಮಗಳೂರು

ಇನಾಂಭೂಮಿ ತೆರವು: ಮತದಾನ ಬಹಿಷ್ಕಾರಕ್ಕೆ ನಿರ್ಧಾರ

Published On :

ಮೂಡಿಗೆರೆ: ತಲೆತಲಾಂತರದಿಂದ ಇನಾಂ ಭೂಮಿಯಲ್ಲಿ ವಾಸಿಸುತ್ತಿದ್ದ ಕೃಷಿಕರನ್ನು ಮತ್ತು ಕಾರ್ಮಿಕರನ್ನು ತೆರವುಗೊಳಿಸಲು ನ್ಯಾಯಾಲಯ ಆದೇಶ ನೀಡಿದ ಹಿನ್ನೆಲೆಯಲ್ಲಿ ಮಾವಿನಕೆರೆ ಬಲಿಗೆ ಗ್ರಾಮಸ್ಥರು ಈ ಬಾರಿ ಲೋಕಸಭಾ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಬಲಿಗೆ ಗ್ರಾಮದಲ್ಲಿ 50 ಕ್ಕೂ ಅಧಿಕ ಕುಟುಂಬಗಳು ತಲೆತಲಾಂತರದಿಂದ ವಾಸಿಸುತ್ತಿದ್ದು, ಅಧಿಕಾರಿಗಳ ತಪ್ಪು ಮಾಹಿತಿಯಿಂದ ಮತ್ತು ಸರ್ಕಾರಗಳು ಮೇಲ್ಮನವಿ ಸಲ್ಲಿಸದೆ ಇರುವ ಕಾರಣ ಹಾಗೂ ಕಂದಾಯ ಮತ್ತು ಅರಣ್ಯ ಇಲಾಖೆಗಳ ತಪ್ಪು ಸರ್ವೆ ಕಾರ್ಯದಿಂದ ಇಂದು ಕುಟುಂಬಗಳು ಬೀದಿ ಪಾಲಾಗುತ್ತಿವೆ. ನಮ್ಮನ್ನು ಬೀದಿಗೆ ತಳ್ಳಿ ಅಧಿಕಾರ ನಡೆಸಲು ರಾಜಕಾರಣಿಗಳು ತಂತ್ರ ರೂಪಿಸಿ ಅಧಿಕಾರಕ್ಕೆ ಬಂದ ನಂತರ ತಮ್ಮನ್ನು ಮರೆತಿರುವ ಸರ್ಕಾರಗಳಿಗೆ ಸರಿಯಾಗಿ ಬುದ್ಧಿ ಕಲಿಸುವ ನಿರ್ಧಾರದಿಂದ ಈ ಬಾರಿ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡಿರುವುದಾಗಿ ಗ್ರಾಮಸ್ಥ ಸವಿಂಜಯ ಸುದ್ದಿಗಾರರಿಗೆ ತಿಳಿಸಿದರು.
ಕಣ್ಣೊರೆಸುವ ತಂತ್ರ: ಮತದಾನ ನಮ್ಮ ಕರ್ತವ್ಯ. ಆದರೆ, ನಮ್ಮ ಮತದಿಂದ ಚುನಾಯಿತ ಸರ್ಕಾರಗಳ ಎಡಬಿಡಂಗಿತನದಿಂದ ನಾವೀಗ ಅತಂತ್ರ. ಆದ್ದರಿಂದ ಈ ಬಾರಿ ಲೋಕ ಸಭಾ ಚುನಾವಣೆ ಬಹಿಷ್ಕರಿಸುತ್ತೇವೆ. ಮೇ 6 ರಂದು ಖುಲ್ಲಾ ಮಾಡಿ ನ್ಯಾಯಾಲಯ ಆದೇಶ ನೀಡಿದೆ.
 ಆದರೆ ರಾಜಕಾರಣಿಗಳು ತಮ್ಮ ಅಧಿಕಾರದ ದಾಹದಿಂದ ಮುಗ್ಧ ಜನರನ್ನು ತಪ್ಪು ದಾರಿಗೆ ಹೊರಟಿದ್ದಾರೆ. ಈ ತೆರವಿನಿಂದ ಬಡ ಕುಟುಂಬಗಳು ಬೀದಿಗೆ ಬೀಳುತ್ತಿರುವಾಗ ರಾಜಕಾರಣಿಗಳು ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ. ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸುವ ಸಲುವಾಗಿ ಈ ಬಾರಿ ಚುನಾವಣೆಯನ್ನು ಗ್ರಾಮಸ್ಥರೆ ಬಹಿಷ್ಕರಿಸಿರುವುದಾಗಿ ತಿಳಿಸಿದರು.
ತೆರವಿಗೆ ಮುಂದಾದಲ್ಲಿ ವಿಷಪ್ರಾಸನ ಮಾಡುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.  
ಊರಿನ ಶೇಷಿ, ಪ್ರಸನ್ನ, ಜಯಾ, ಧರಣೇಂದ್ರ, ಪ್ರಕಾಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.