ಉ-ಚಿ ಲೋಕಸಭಾ ಕ್ಷೇತ್ರದಲ್ಲಿ 1059 ಮತಗಟ್ಟೆ
ಕ.ಪ್ರ.ವಾರ್ತೆ ಟಿ ಕೊಪ್ಪ ಟಿ ಮಾ.19
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 1059 ಮತಗಟ್ಟೆಗಳಲ್ಲಿ 13,51,245 ಮತದಾರರು ಮತ ಚಲಾಯಿಸಲಿದ್ದು, ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ 249 ಮತಗಟ್ಟೆಗಳಲ್ಲಿ 1,50,199 ಮತದಾರರು ಮತ ಚಲಾಯಿಸಲಿದ್ದಾರೆ ಎಂದು ಶೃಂಗೇರಿ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಜಿ.ಎಲ್. ವಿಠಲ್ ಹೇಳಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿ ಚುನಾವಣಾ ನೀತಿ ಸಂಹಿತೆ ಪಾಲನೆ ಬಗ್ಗೆ ಮಾಹಿತಿ ನೀಡಿದರು.
ಈ ಪೈಕಿ 54 ಸೂಕ್ಷ್ಮ, 52 ಅತೀ ಸೂಕ್ಷ್ಮ,33 ನಕ್ಸಲ್ ಪೀಡಿತ ಮತಗಟ್ಟೆ ಎಂದು ಗುರುತಿಸಲಾಗಿದೆ. ಚುನಾವಣೆಗೆ ಸಂಬಂಧಪಟ್ಟಂತೆ 3 ತಾಲೂಕುಗಳಲ್ಲಿ ಪ್ರತ್ಯೇಕ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ. ಕೊಪ್ಪ ಸಹಾಯವಾಣಿ ಸಂಖ್ಯೆ 1800 425 1014, ನ.ರಾ.ಪುರ 1800 425 2208, ಶೃಂಗೇರಿ 1800 425 2251 ಸಂಖ್ಯೆಗಳಿಗೆ ಉಚಿತ ಸಂಪರ್ಕಿಸಬಹುದು ಎಂದರು.
ವೀಡಿಯೋ ಚಿತ್ರೀಕರಣ: ಪರವಾನಿಗೆ ಇನ್ನಿತರ ಅಗತ್ಯಗಳಿಗಾಗಿ ಸಂಬಂಧ ಪಟ್ಟಂತೆ ಮತ್ತು 3 ತಾಲೂಕುಗಳಲ್ಲಿ ಏಕಗವಾಕ್ಷಿ ಸೇವಾಕೇಂದ್ರಗಳನ್ನು ತೆರೆಯಲಾಗಿದೆ. ಚುನಾವಣೆ ವೇಳೆ ಅಕ್ರಮ ಮದ್ಯ, ವಸ್ತು ರೂಪದ ಉಡುಗೊರೆ ನೀಡಿಕೆ ಇತ್ಯಾದಿ ಅಕ್ರಮ ತಡೆಯಲು ಶೃಂಗೇರಿ ತಾಲೂಕಿನ ಎಸ್.ಕೆ. ಬಾರ್ಡರ್, ಕೊಪ್ಪ ತಾಲೂಕಿನ ಗಡಿಕಲ್ ಮತ್ತು ಬಿದರಗೋಡು, ನ.ರಾ.ಪುರ ತಾಲೂಕಿನ ಶಂಕರಪುರದಲ್ಲಿ ತಪಾಸಣೆ ಗೇಟುಗಳನ್ನು ಸ್ಥಾಪಿಸಲಾಗಿದೆ. 17 ಎಂಸಿಸಿ ಅಧಿಕಾರಿಗಳು, 24 ಸೆಕ್ಟರ್ ಅಧಿಕಾರಿಗಳ ದಾಳಿ ತಂಡ ರಚಿಸಲಾಗಿದೆ. 3 ತಾಲೂಕುಗಳಲ್ಲಿ ಪ್ರತ್ಯೇಕ ತಂಡಗಳಿಂದ ಪ್ರಚಾರ ಸಭೆ, ಮೆರವಣಿಗೆ ಸೇರಿದಂತೆ ಚುನಾವಣೆಗೆ ಸಂಬಂಧಪಟ್ಟಂತೆ ಎಲ್ಲಾ ಪ್ರಕ್ರಿಯೆಗಳ ವೀಡಿಯೋ ಚಿತ್ರೀಕರಣ ನಡೆಸಲಾಗುವುದು ಎಂದರು.
ಪರಿವೀಕ್ಷಕರ ನೇಮಕ: ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ 70 ಲಕ್ಷ ಚುನಾವಣೆ ಖರ್ಚಿಗೆ ಸಂಬಂದ ಪಟ್ಟಂತೆ ಪ್ರತ್ಯೇಕ ಖಾತೆ ತೆರೆದು ಆಯಾ ದಿನಗಳ ವೆಚ್ಚ, ನಗದು ಮತ್ತು ಬ್ಯಾಂಕ್ ಖಾತೆಯಲ್ಲಿರುವ ಹಣದ ವಿವರ ನೀಡಬೇಕು. ಅದಕ್ಕಾಗಿ ಸಹಾಯಕ ಖರ್ಚು ವೆಚ್ಚ ಪರಿವೀಕ್ಷಕರನ್ನು ನೇಮಿಸಲಾಗಿದೆ ಎಂದರು.
ಚುನಾವಣಾ ಪ್ರಕ್ರಿಯೆ ಸುಗಮವಾಗಿ ಸಾಗಲು ಕೇವಲ ಅಧಿಕಾರಿಗಳ ಪ್ರಯತ್ನ ಸಾಲದು. ಹಾಗಾಗಿ, ಎಲ್ಲಾ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಮತ್ತಿತರ ಸಾರ್ವಜನಿಕರು ಚುನಾವಣಾ ಪ್ರಕ್ರಿಯೆ ಯಶಸ್ವಿಯಾಗಲು ಮತ್ತು ಶಾಂತಿಯುತ ಮತದಾನ ನಡೆಯಲು ಸಹಕರಿಸುವಂತೆ ಅವರು ಮನವಿ ಮಾಡಿದರು.
ತಾಲೂಕು ಚುನಾವಣಾಧಿಕಾರಿ ಹಾಗೂ ಕೊಪ್ಪ ತಾಲೂಕು ತಹಸೀಲ್ದಾರ್ ಶ್ರೀಧರಮೂರ್ತಿ ಎಸ್. ಪಂಡಿತ್,ನ.ರಾ.ಪುರ ತಹಸೀಲ್ದಾರ್ ಕೃಷ್ಣಮೂರ್ತಿ, ಶೃಂಗೇರಿ ತಹಸೀಲ್ದಾರ್ ದೇವಮ್ಮ, ವಿವಿಧ ಪಕ್ಷಗಳ ಮುಖಂಡರಾದ ಎಸ್.ಎನ್. ರಾಮಸ್ವಾಮಿ, ನಾರ್ವೆ ಅಶೋಕ್, ಬಿ.ಎನ್. ಭಾಸ್ಕರ್, ಮಂಜುನಾಖ್ ಹೊಸೂರು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

