ಚಿಕ್ಕಮಗಳೂರು

ಗ್ರಾಮೀಣರಿಗೆ ಮೂಲ ಸೌಕರ್ಯ ಬಿಜೆಪಿ ಕನಸು

Published On :

ಕ.ಪ್ರ.ವಾರ್ತೆ   ಕಡೂರು   ಮಾ. 20
ವಿದೇಶಿ ವ್ಯಾಮೋಹಕ್ಕೆ ಒಳಗಾಗಿ ವಲಸೆ ಹೋಗುತ್ತಿರುವ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ ದೇಶದ ಸಮಗ್ರ ಅಭಿವೃದ್ಧಿಗಾಗಿ ಸಮರ್ಥ ನಾಯಕನ ಅವಶ್ಯಕತೆ ಇದ್ದು, ಅದು ನರೇಂದ್ರ ಮೋದಿಯಿಂದ ಮಾತ್ರ ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು.
ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಏರ್ಪಡಿಸಿದ್ದ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಕನಸು: ಮೂಲ ಸೌಕರ್ಯಗಳಿಗಾಗಿ ಗ್ರಾಮೀಣರು ನಗರಕ್ಕೆ ವಲಸೆ ಹೋಗದಂತೆ ಮತ್ತು ನಗರದ ಜನರು ಗ್ರಾಮ ಜೀವನಕ್ಕೆ ಮನಸೋತು ಗ್ರಾಮಗಳಿಗೆ ವಲಸೆ ಬರುವಂತೆ ಗ್ರಾಮೀಣ ಭಾಗದಲ್ಲಿ ಮೂಲ ಸವಲತ್ತು ಅನುಷ್ಠಾನಗೊಳಿಸುವುದು ಬಿಜೆಪಿಯ ಕನಸಾಗಿದೆ. 50 ವರ್ಷದಿಂದ ದೇಶ ಮತ್ತು ರಾಜ್ಯವನ್ನಾಳಿದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ರೈತರಿಗೆ ಮತ್ತು ಗ್ರಾಮೀಣ ಭಾಗದ ನಾಗರಿಕರಿಗೆ ಯಾವುದೇ ಮೂಲ ಸವಲತ್ತು ಕಲ್ಪಿಸುವಲ್ಲಿ ವಿಫಲವಾಗಿ ಜನರ ಜೀವನದ ದಿಕ್ಕು ಬದಲಾಗಿದೆ ಎಂದು ವಿಷಾದಿಸಿದರು.
ದೇಶದಲ್ಲಿ ಸಮರ್ಥ ನಾಯಕನಿಲ್ಲದೆ ಸ್ಥಿರ ಸರ್ಕಾರ ಎಂಬುದು ಇಲ್ಲದಂತಾಗಿದ್ದು, ಅಂತಹ ಸ್ಥಿರ ಸರ್ಕಾರಕ್ಕೆ ಅಡಿಪಾಯ ಹಾಕಲು ನರೇಂದ್ರ ಮೋದಿಯಿಂದ ಮಾತ್ರ ಸಾಧ್ಯ ಎಂದರು.
ಮಾಜಿ ಪ್ರಧಾನಿ ವಾಜಪೇಯಿ ದೇಶದ ನೀರಿನ ಕೊರತೆ ನೀಗಿಸಲು ನದಿ ಜೋಡಣೆ ಯೋಜನೆ ರೂಪಿಸಿದ್ದರು. ಆದರೆ, ನಂತರ ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರ ಇದನ್ನು ಮೂಲೆಗುಂಪು ಮಾಡಿ ದೇಶದ ಆರ್ಥಿಕ ಮತು ಕೃಷಿ ಕ್ಷೇತ್ರದ ಮೇಲೆ ಇದರ ಭೀಕರ ಪರಿಣಾಮ ಉಂಟಾಗಲು ಕಾರಣವಾಯಿತು ಎಂದು ಆರೋಪಿಸಿದರು.
ಅಧ್ಯಕ್ಷತೆಯನ್ನು ಕ್ಷೇತ್ರ ಸಮಿತಿ ಅಧ್ಯಕ್ಷ ಚಿಕ್ಕದೇವನೂರು ರವಿ ವಹಿಸಿ ಮಾತನಾಡಿದರು. ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪದ್ಮಾ ಚಂದ್ರಪ್ಪ, ಸದಸ್ಯರಾದ ರೇಖಾ ಹುಲಿಯಪ್ಪಗೌಡ, ಕಲ್ಮರುಡಪ್ಪ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಶ್ಯಾಮಲಾ, ಶ್ಯಾಮಲಾ ಕುಂದೂರು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಜಯುಕುಮಾರ್, ಮುಖಂಡರಾದ ನಿಡಘಟ್ಟ ಲೋಕೇಶ್, ಮಿಲ್ಟ್ರಿರವಿ, ಎಸ್.ಎ. ನಟರಾಜ್ ಇದ್ದರು.


ಮಾಜಿ ಪ್ರಧಾನಿ ವಾಜಪೇಯಿ ದೇಶದ ನೀರಿನ ಕೊರತೆ ನೀಗಿಸಲು ನದಿ ಜೋಡಣೆ ಯೋಜನೆ ರೂಪಿಸಿದ್ದರು. ಆದರೆ, ನಂತರ ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರ ಇದನ್ನು ಮೂಲೆಗುಂಪು ಮಾಡಿ ದೇಶದ ಆರ್ಥಿಕ ಮತು ಕೃಷಿ ಕ್ಷೇತ್ರದ ಮೇಲೆ ಇದರ ಭೀಕರ ಪರಿಣಾಮ ಉಂಟಾಗಲು ಕಾರಣವಾಯಿತು
- ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.