ದಾಖಲೆ ಸಹಿತ ಮಾಹಿತಿ ಸಂಗ್ರಹಿಸಿ
ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿದ್ದು, ಇದರ ಉಲ್ಲಂಘನೆ ಬಗ್ಗೆ ದಾಖಲೆ ಸಮೇತ ಮಾಹಿತಿ ಸಂಗ್ರಹಿಸುವುದು ಸೂಕ್ತ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ವೆಚ್ಚ ವೀಕ್ಷಕರಾದ ರಂಜನ ಝಾ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸ್ಥಿರ ವಿಚಕ್ಷಣಾ ಸಮಿತಿ, ಕಣ್ಗಾವಲು ಸಮಿತಿ ಹಾಗೂ ಮಾಧ್ಯಮ ನಿಗಾ ಸಮಿತಿಯ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಕುರಿತಂತೆ ವಿವರಿಸಿದ ಅವರು, ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸುವುದರ ಜತೆಗೆ ವೀಡಿಯೋ ವೀವಿಂಗ್ ಟೀಮ್ ಹಾಗೂ ವೀಡಿಯೋ ಸರ್ವೆಲೆನ್ಸ್ ಟೀಮ್‌ನವರು ರಾಜಕೀಯ ಪಕ್ಷದವರು ನಡೆಸುವ ರ್ಯಾಲಿ, ಸಮಾವೇಶ, ರೋಡ್ ಶೋ, ಇನ್ನಿತರೆ ಕಾರ್ಯಕ್ರಮಗಳನ್ನು ಸ್ಥಳದಲ್ಲಿಯೇ ಚಿತ್ರೀಕರಣ ಮಾಡಬೇಕು.
ಕಾರ್ಯಕ್ರಮಕ್ಕೆ ಎಷ್ಟು ವಾಹನಗಳ ಬಳಕೆ, ಅವುಗಳ ನೋಂದಣಿ ಸಂಖ್ಯೆ, ತಾರಾ ಪ್ರಚಾರಕರು, ಮುಖಂಡರು ಭಾಗವಹಿಸಿರುವುದರ ಬಗ್ಗೆ, ಪೆಂಡಾಲ್‌ನ ಅಳತೆ, ಕುರ್ಚಿಗಳ ಬಳಕೆ, ಊಟದ ವ್ಯವಸ್ಥೆ, ಹೀಗೆ ಇತರ ಸಂಗತಿಗಳನ್ನು ವೀಡಿಯೋ ಮಾಡುವುದರೊಂದಿಗೆ ವಿವಿಟಿ ಮುಖ್ಯಸ್ಥರು ಖರ್ಚು ಎಷ್ಟು ಎಂಬುದರ ಬಗ್ಗೆ ಅಂದಾಜಿಸಬೇಕು ಎಂದು ಸೂಚಿಸಿದರು.
ವೀಡಿಯೋ ಚಿತ್ರೀಕರಣ: ಎಸ್‌ಎಸ್‌ಟಿ ತಂಡದವರು ಚೆಕ್‌ಪೋಸ್ಟ್‌ಗಳಲ್ಲಿ ರಾಜಕೀಯ ಪಕ್ಷದವರ ವಾಹನ ಹಾಗೂ ಇತರೆ ವಾಹನಗಳನ್ನು ತಪ್ಪದೇ ತಪಾಸಣೆಯನ್ನು ವೀಡಿಯೋ ಚಿತ್ರೀಕರಣದೊಂದಿಗೆ ಮಾಡುವುದರೊಂದಿಗೆ ಅನಧಿಕೃತವಾಗಿ 50 ಸಾವಿರ ಮೇಲ್ಪಟ್ಟ ಹಣ, ಸೀರೆ, ಬಟ್ಟೆ, ಆಭರಣಗಳು ಹಾಗೂ ಮದ್ಯ ಮೊದಲಾದವುಗಳ ಸಾಗಾಣಿಕೆ ತಡೆಯಬೇಕೆಂದರು.
ಗಮನಕ್ಕೆ ತನ್ನಿ: ಮಾಧ್ಯಮ ನಿಗಾ ಸಮಿತಿಯವರು ಪತ್ರಿಕೆ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪರವಾಗಿ ನೀಡುವ ಜಾಹೀರಾತು ಹಾಗೂ ಕಾಸಿಗಾಗಿ ಸುದ್ದಿ, ಇದ್ದಲ್ಲಿ ಚುನಾವಣಾ ಅಧಿಕಾರಿಗಳ ಗಮನಕ್ಕೆ ತರಬೇಕೆಂದರು.
ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ, ಅಪರ ಜಿಲ್ಲಾಧಿಕಾರಿ ಅರ್ಚನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಬಿ. ಕರುಣಾಕರ್, ಉಪ ವಿಭಾಗಾಧಿಕಾರಿಗಳಾದ ಕೆ. ಚನ್ನಬಸಪ್ಪ, ಅನುರಾಧ, ಜಿಲ್ಲಾ ಚುನಾವಣಾಧಿಕಾರಿಗಳು, ತಹಸೀಲ್ದಾರರು ಸೇರಿದಂತೆ ಹಲವರುಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

