'ಅಧ್ಯಾತ್ಮ ಬದುಕಿನಿಂದ ಸದೃಢ ದೇಶ ನಿರ್ಮಾಣ'
ಬಾಳೆಹೊನ್ನೂರು: ಜೀವನದಲ್ಲಿ ನಾವುಗಳು ಆಧ್ಯಾತ್ಮಿಕ ಮೌಲ್ಯದಲ್ಲಿ ಸಾಗಿ ಸಮೃದ್ಧ ದೇಶ ನಿರ್ಮಿಸಿ ಭಾರತವನ್ನು ಸದೃಢಗೊಳಿಸಬೇಕು ಎಂದು ಚಿಕ್ಕಮಗಳೂರು ಭಾರತ್ ಸ್ವಾಭಿಮಾನ್ ಟ್ರಸ್ಟ್ನ ಪ್ರೀತೇಶ್ ಹೇಳಿದ್ದಾರೆ.
ಇಲ್ಲಿನ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಪತಂಜಲಿ ಯೋಗ ಸಮಿತಿ ಹಾಗೂ ಭಾರತ್ ಸ್ವಾಭಿಮಾನ್ ಟ್ರಸ್ಟ್ ಶನಿವಾರ ಆಯೋಜಿಸಿದ್ದ ಯೋಗ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೂಜಾ ಪಾಠದ ಪದ್ಧತಿಯಲ್ಲ: ನಮ್ಮ ಪ್ರತಿನಿತ್ಯದ ಜೀವನದಲ್ಲಿ ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಅಷ್ಟಾಂಗ ಯೋಗ, ಜ್ಞಾನ ಯೋಗ, ಭಕ್ತಿಯೋಗ, ಕರ್ಮ ಯೋಗ ಅಳವಡಿಸಿಕೊಳ್ಳಬೇಕಿದೆ. ನಮಗೆ ಆಧುನೀಕತೆ, ವಿಕಾಸಗಳು ಭಾರತೀಯತೆ, ಆಧ್ಯಾತ್ಮಿಕತೆಗಳ ಜತೆಗೆ ಸಮೃದ್ಧಿ ಶಕ್ತಿ ಬೇಕಾಗಿದೆ.
ಯೋಗವು ಒಂದು ಮತ, ಪಂಥದಲ್ಲ, ಇದೊಂದು ವಿಜ್ಞಾನ ಪ್ರಕ್ರಿಯೆ. ಪೂರ್ವಜರ ಜ್ಞಾನ ಭಂಡಾರವಾಗಿದೆ. ಯೋಗವೆಂದರೆ ಪೂಜಾ ಪಾಠದ ಪದ್ಧತಿಯಲ್ಲ. ಅದು ಸಂಪೂರ್ಣ ವಿಜ್ಞಾನ ಚಿಕಿತ್ಸಾ ಪದ್ಧತಿಯಾಗಿದೆ ಹಾಗೂ ಜೀವನ ಪದ್ಧತಿ, ಆಧ್ಯಾತ್ಮಿಕ ವಿದ್ಯೆಯಾಗಿದ್ದು, ಇದರಲ್ಲಿ ನಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ ಎಂದರು.
ಸಂಸ್ಕೃತಿಯ ಮೂಲ: ಯೋಗದ ಪ್ರತಿಯೊಂದು ಕ್ರಿಯೆ ಹಾಗೂ ಹಂತದ ಬಗೆಗೆ ಪೂರ್ವಜರು, ಋಷಿ- ಮುನಿಗಳು ಅಧ್ಯಯನ ನಡೆಸಿದ್ದಾರೆ. ಅದನ್ನು ನಾವುಗಳು ಇಂದು ಪ್ರತಿ ಮನೆಗೆ ತಲುಪಿಸುವ ಪ್ರಯತ್ನ ಮಾಡಬೇಕು. ಯೋಗವು ನಮ್ಮ ಸಂಸ್ಕೃತಿಯ ಮೂಲವಾಗಿದ್ದು, ನಮ್ಮ ಪೂರ್ವಜರೆಲ್ಲರೂ ಯೋಗಿಗಳಾಗಿದ್ದರು. ಯೋಗ ಕ್ರಿಯೆಯಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ದೊರೆಯಲಿದೆ ಎಂದರು.
ಸ್ವಾಭಿಮಾನ್ ಟ್ರಸ್ಟ್ನ ಶಾಶ್ವತ್ ಮಾತನಾಡಿ, ದೇಶಕ್ಕಾಗಿ ಹುತಾತ್ಮರಾದ ಭಗತ್ಸಿಂಗ್, ರಾಜಗುರು, ಸುಖದೇವರ ಬಲಿದಾನ ದಿನದ ಅಂಗವಾಗಿ ಮಾ. 17 ರಿಂದ ದೇಶಾದ್ಯಂತ ಯೋಗ ಮಹೋತ್ಸವ ಆಚರಿಸುತ್ತಿದ್ದು, ಸುಮಾರು 10 ಕೋಟಿಗೂ ಹೆಚ್ಚು ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಆಯೋಜಕ ಹಿರಿಯಣ್ಣ, ಮನುಕುಮಾರ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

