ಸಾರಸ್ವತ ಲೋಕಕ್ಕೆ ಮಲೆನಾಡಿನ ಕೊಡುಗೆ ಅಪಾರ
ನರಸಿಂಹರಾಜಪುರ: ಸಾಹಿತ್ಯ ಕ್ಷೇತ್ರಕ್ಕೆ ಮಲೆನಾಡಿನ ಸಾಹಿತಿಗಳ ಕೊಡುಗೆ ಅದ್ಭುತವಾಗಿದ್ದು, ವಿಶೇಷವಾಗಿ ಸಣ್ಣ ಕಥೆಗಳನ್ನು ಮಲೆನಾಡಿನ ಸಾಹಿತಿಗಳು ಸಾರಸ್ವತ ಕ್ಷೇತ್ರಕ್ಕೆ ನೀಡಿದ್ದಾರೆ ಎಂದು ಕಿರುತೆರೆ ನಿರ್ದೇಶಕ ಹಾಗೂ ಕಲಾವಿದ ರಮೇಶ್ ಬೇಗಾರ್ ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಭಾನುವಾರ ಕೊನೋಡಿಯ ದತ್ತಿ ದಾನಿಗಳಾದ ಕೆ. ರಾಮಚಂದ್ರಯ್ಯ ಅವರ ಮನೆಯ ಅಂಗಳದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಮಲೆನಾಡಿನ ಕೊಡುಗೆ ಎಂಬ ವಿಷಯಗಳ ಬಗ್ಗೆ ದತ್ತಿ ಉಪನ್ಯಾಸ ನೀಡಿದರು.
ಮರೆತ ಸಾರಸ್ವತ ಲೋಕ: ಮಲೆನಾಡಿನ ಶ್ರೇಷ್ಠ ಕವಿಗಳಾದ ಕುವೆಂಪು, ಎಂ.ಕೆ. ಇಂದಿರಾ, ತೇಜಸ್ವಿ ಅವರು ಸಣ್ಣ ಕಥೆಗಳಿಗೆ ಆದ್ಯತೆ ನೀಡಿದ್ದರು. ಆದರೆ, ಕೊರಟಕಲ್ಲು ಶ್ರೀನಿವಾಸರಾಯರು ಮಲೆನಾಡಿನ ಸಣ್ಣ ಕಥೆಗಳ ಜನಕರಾಗಿದ್ದರೂ ಸಾರಸ್ವತ ಲೋಕ ಅವರನ್ನು ಮರೆತಿರುವುದು ಮಾತ್ರ ವಿಷಾದಕರವಾಗಿದೆ ಎಂದರು.
ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ನಾ.ಸು. ಶಿವಸ್ವಾಮಿ ಮಾತನಾಡಿ, ರಾಜ್ಯ ಕಸಾಪ ಅಧ್ಯಕ್ಷರ ಆಶಯದಂತೆ ದತ್ತಿ ಉಪನ್ಯಾಸಗಳನ್ನು ದತ್ತಿ ದಾನಿಗಳ ಮನೆಯ ಅಂಗಳದಲ್ಲಿ ಏರ್ಪಡಿಸಲಾಗುತ್ತಿದೆ. ರಾಜ್ಯದಲ್ಲಿ ಕನ್ನಡ ಬೆಳೆಯಲು ಶ್ರೀಸಾಮಾನ್ಯನಿಂದ ಹಿಡಿದು ಸಾಹಿತಿಗಳವರೆಗೆ ಹಲವರ ಪರಿಶ್ರಮ ಇದೆ ಎಂದರು.
ತಾ. ಕಸಾಪ ನಿಕಟಪೂರ್ವ ಅಧ್ಯಕ್ಷ ಪಿ.ಕೆ. ಬಸವರಾಜಪ್ಪ ಮಾತನಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷ ಎಸ್.ಜಿ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ದತ್ತಿ ದಾನಿಗಳಾದ ಕೊನೋಡಿ ಕೆ. ರಾಮಚಂದ್ರಯ್ಯ, ಲಕ್ಷ್ಮೀದೇವಿ ಉಪಸ್ಥಿತರಿದ್ದರು.
ಕು. ಅತಿಥಿ ಪ್ರಾರ್ಥಿಸಿದರು. ಕೆ.ಆರ್. ಗಣೇಶ್ ಸ್ವಾಗತಿಸಿದರು. ದಯಾನಂದ್ ನಿರೂಪಿಸಿದರು. ಎಸ್.ಎಸ್. ಅಶ್ವಥ್ ವಂದಿಸಿದರು. ಮದ್ಯಾಹ್ನದ ನಂತರ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಹಾ.ಮಾ.ನಾ. ಅವಸರ ಸಾಹಿತ್ಯ, ಅಂಕಣ ಸಾಹಿತ್ಯ, ಚಿಂತನೆ, ಬರಹ ಎಂಬ ವಿಷಯಗಳ ಬಗ್ಗೆ ಕೊಪ್ಪದ ಹುಲ್ಲುಮಗ್ಗೆಯ ಸಾಹಿತಿ ಚಂದ್ರಕಲಾ ರಾವ್ ಉಪನ್ಯಾಸ ನೀಡಿದರು.
ನಂತರ ಬಾಳೆಹೊನ್ನೂರಿನ ಸಂಗೀತ ವಿದುಷಿ ನಿವೇದಿತಾ ಗಜೇಂದ್ರ ಅವರಿಂದ ಸುಗಮ ಸಂಗೀತ ಕಚೇರಿ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

