ತರೀಕೆರೆ ವ್ಯಾಪ್ತಿಯಲ್ಲಿ 227 ಮತಗಟ್ಟೆ
ತರೀಕೆರೆ: ತರೀಕೆರೆ ವಿಧಾಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎ. ರಂಗಾಪುರ ಮತ್ತು ಅತ್ತಿಗನಾಳ್ ಸೇರ್ಪಡೆಯೊಂದಿಗೆ ಒಟ್ಟು 221 ಮತಗಟ್ಟೆ ಸ್ಥಾಪಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಅನುರಾಧ ತಿಳಿಸಿದ್ದಾರೆ.
ಅವರು ಸೋಮವಾರ ಉಪವಿಭಾಗಾಧಿಕಾರಿ ಕಾರ್ಯಾಲಯ ಸಭಾಂಗಣದಲ್ಲಿ ಮಾತನಾಡಿದರು.
ಇದರಲ್ಲಿ 27 ಅತಿಸೂಕ್ಷ್ಮ, 46 ಸೂಕ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ನಾಗೇನಹಳ್ಳಿ, ಹಾದಿಕೆರೆ, ಕಾಟಿನಗೆರೆ, ಗೌರಾಪುರ ಮತಗಟ್ಟೆಗಳನ್ನು, ಮತದಾನ ಪ್ರಕ್ರಿಯೆಯಲ್ಲಿ, ಆಮಿಷ, ಒತ್ತಡ ಭಯ
ಇನ್ನಿತರಗಳನ್ನು ಒಡ್ಡುವ, ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗು ಅಲ್ಪಸಂಖ್ಯಾತರನ್ನು ಒಳಗೊಂಡಿರುವ ಕಾರಣ ಅತ್ಯಂತ ಒತ್ತಡ ಹೊಂದಿರುವ ಪ್ರದೇಶವೆಂದು ಗುರುತಿಸಲಾಗುವುದು. ಇಂತಹ ಮತಗಟ್ಟೆಗಳಿಗೆ ಹೆಚ್ಚಿನ ಭದ್ರತಾ ವ್ಯವಸ್ಥೆ ಕಳಿಸಲಾಗುವುದು ಎಂದು ಅವರು ತಿಳಿಸಿದರು.
ತಂಡ ರಚನೆ: ತಹಸೀಲ್ದಾರ್ ಶಿವಕುಮಾರ್ ಮಾತನಾಡಿ ಚುನಾವಣಾ ಖರ್ಚು ವೆಚ್ಚ ನಿರ್ವಹಣೆಗಾಗಿ ತಂಡ ರಚಿಸಲಾಗುವುದು ಅದರಂತೆ ಪ್ರತಿ ಹೋಬಳಿಗೆ ಒಂದೊಂದು ಎಂಎಸ್ಎಸ್ ರಚಿಸಲಾಗುವುದು. ಪ್ರತಿ ತಂಡಕ್ಕೆ ಮುಖ್ಯಸ್ಥರು, ಮತ್ತಿತರೆ ಆರು ಜನ ಸಿಬ್ಬಂದಿಯನ್ನು ವೀಡಿಯೋಗ್ರಾಫರ್ಗಳನ್ನು ಒದಗಿಸಲಾಗುವುದು.
ಆವರು ಆಯಾ ಭಾಗದಲ್ಲಿ ಪಕ್ಷದ ಕಾರ್ಯಚಟುವಟಿಕೆ, ಪಕ್ಷಗಳು ನಡೆಸುವ ಕಾರ್ಯಕ್ರಮ ಹಾಗೂ ಪ್ರಚಾರ ಕುರಿತಂತೆ ಮಾಹಿತಿ ಒದಗಿಸುವರು ಮತ್ತು ಅದರೊಂದಿಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕುರಿತಂತೆ ಕ್ರಮ ಕೈಗೊಂಡು ದೂರು ದಾಖಲಾಗಿಸುವುದು ಎಂದು ಅವರು ತಿಳಿಸಿದರು.
ಚುನಾವಣೆ ಸಂಬಂಧ ರಾಜಕೀಯ ಪಕ್ಷ ಮತ್ತು ಅಭ್ಯರ್ಥಿ ವಿವಿಧ ರೀತಿಯ ಅನುಮತಿ ಮತ್ತು ಪರವಾನಗಿ ನೀಡಲು ತಾಲೂಕು ಕಚೇರಿಯಲ್ಲಿ ಏಕಗವಾಕ್ಷಿ ಯೋಜನೆ ತರಲಾಗುವುದು. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಿಸಲು ಮಾಹಿತಿ ಪಡೆಯಲು ದಿನದ 24ಗಂಟೆಯೂ ಕಾರ್ಯ ನಿರ್ವಹಿಸುವ ಕಂಟ್ರೋಲ್ ರೂಂ ಪ್ರಾರಂಭಿಸಲಾಗುವುದು ದೂರವಾಣಿ ಸಂಖ್ಯೆ 08261-222250ಕ್ಕೆ ಕರೆ ಮಾಡಬಹುದು ಎಂದು ಅವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

