ಚಿಕ್ಕಮಗಳೂರು

'ಪರಿಸರ ವೈಪರೀತ್ಯಕ್ಕೆ ದುರಾಸೆಯೇ ಕಾರಣ'

Published On :

ತರೀಕೆರೆ: ಇಂದು ನಾವು ಅನುಭವಿಸುತ್ತಿರುವ ಪರಿಸರ ವೈಪರೀತ್ಯಕ್ಕೆ ನಮ್ಮ ದುರಾಸೆಯೇ ಕಾರಣವಾಗಿದೆ ಎಂದು ಎವಿಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಶಶಿಧರ ಗೌಡ್ರು ಹೇಳಿದರು.
ಅವರು, ಸಮೀಪದ ಗಂಟೆಕಣಿವೆ ಎವಿಎಸ್ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಸಿಪಿಆರ್ ಪರಿಸರ ಶಿಕ್ಷಣ ಕೇಂದ್ರ ಬೆಂಗಳೂರು, ಜನಚಿಂತನ ಸಂಸ್ಥೆ ಏರ್ಪಡಿಸಲಾಗಿದ್ದ ಪರಿಸರ ಶಿಕ್ಷಣ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಭಿವೃದ್ಧಿ ಹೆಸರಲ್ಲಿ ಪರಿಸರವನ್ನು ಇನ್ನಿಲ್ಲದಂತೆ ನಾಶ ಮಾಡುತ್ತಿರುವುದು ಒಂದೆಡೆಯಾದರೆ, ಒತ್ತುವರಿಗಾಗಿ ಕಾಡು ನಾಶ ಮಾಡುತ್ತಾ, ಪರಿಸರದ ಅಸಮತೋಲನಕ್ಕೆ ಕಾರಣರಾಗಿ ಮಾಡಿದ ತಪ್ಪಿಗೆ ಪರಿಸರದ ವೈಪರೀತ್ಯ ಅನುಭವಿಸುವಂತಾಗಿದ್ದು, ಈಗಲಾದರೂ ಎಚ್ಚೆತ್ತುಕೊಳ್ಳುವ ಮೂಲಕ ಪರಿಸರದ ಸಮತೋಲನಗೆ ಪ್ರಯತ್ನಿಸಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ತಿಳಿಸಿದರು.
ಸಿಪಿಆರ್ ಶಿಕ್ಷಣ ಕೇಂದ್ರದ ಯೋಜನಾಧಿಕಾರಿ ರವಿಶಂಕರ್ ಪರಿಸರ ಕುರಿತಾದ ಚಲನಚಿತ್ರದ ಮೂಲಕ ಬೂತಕಾಲ ಹಾಗೂ ಭವಿಷ್ಯದಲ್ಲಿ ಆಗಬಹುದಾದ ಪರಿಸರ ವ್ಯತ್ಯಯ ಕುರಿತು ವಿವರಿಸಿದರು.
ಎವಿಎಸ್ ವಿದ್ಯಾಸಂಸ್ಥೆ ಅಧ್ಯಕ್ಷ ಡಾ. ವೀರಣಸಜ್ಜನ್ ಉದ್ಘಾಟಿಸಿ, ಪರಿಸರ ನಾಶಕ್ಕೆ ಕಾರಣರಾದ ನಾವೇ ಅದರ ಉಳಿವಿಗೆ ಪ್ರಯತ್ಮಿಸಬೇಕು. ಎನ್. ವೀರಭದ್ರಪ್ಪ, ರೇಣುಕಾ ಪ್ರಸಾದ್ ವಿಶ್ವನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.