ಕಾಂಗ್ರೆಸ್ನಲ್ಲಿ ಸರ್ವಾಧಿಕಾರಿ ಧೋರಣೆ: ಆರೋಪ
ಕೊಪ್ಪ: ರಾಹುಲ್ ಗಾಂಧಿ ಅವರು ಗ್ರಾಮ ಪಂಚಾಯಿತಿಗಳಿಗೆ ಅಧಿಕಾರ ಸ್ವಾತಂತ್ರ್ಯ ನೀಡಬೇಕು ಎಂದು ಬಾಯಿಮಾತಿನಲ್ಲಿ ಹೇಳುತ್ತಾರೆ. ಆದರೆ ಅವರದ್ದೇ ಪಕ್ಷದ ನಾಯಕ ಪ್ರಧಾನಮಂತ್ರಿಯಾದ ಮನಮೋಹನ್ ಸಿಂಗ್ ಅವರಿಗೆ ಅಧಿಕಾರ ಚಲಾವಣೆ ಮಾಡುವ ಹಕ್ಕನ್ನು ನೀಡದೇ ಇರುವುದು ಕಾಂಗ್ರೆಸ್ ಪಕ್ಷದ ಸರ್ವಾಧಿಕಾರದ ಧೋರಣೆ ಎತ್ತಿತೋರುತ್ತಿದೆ ಎಂದು ಬಿಜೆಪಿ ರಾಜ್ಯ ಸಮಿತಿಯ ಮಾಜಿ ಸದಸ್ಯ ಹಾಗೂ ಶೃಂಗೇರಿ ಕ್ಷೇತ್ರ ಬಿಜೆಪಿ ವಕ್ತಾರ ಚಂದ್ರಶೇಖರ್ ಜೋಯಿಸ್ ತಿಳಿಸಿದರು.
ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಸೈದ್ಧಾಂತಿಕ ವಿಚಾರದಲ್ಲಿ ದೇಶದ ಪರಂಪರೆ, ಸಂಸ್ಕೃತಿ, ಇತಿಹಾಸದ ಆಧಾರ ಮೇಲೆ ಪ್ರಜಾಪ್ರಭುತ್ವದ ನೈಜ ರೂಪದಲ್ಲಿ ಬೆಳೆದು ಬಂದಿರುವ ಪಕ್ಷವಾಗಿದೆ.
ಇದು ಯಾವ ವ್ಯಕ್ತಿ ಆಧಾರಿತ ಪಕ್ಷವಲ್ಲ. ಬಿಜೆಪಿ ಈ ಚುನಾವಣೆಯಲ್ಲಿ ಒಬ್ಬ ಸಾಮಾನ್ಯ ಕುಟುಂಬದ, ಹಿಂದುಳಿದ ವರ್ಗದಿಂದ ಬಂದ ನರೇಂದ್ರ ಮೋದಿ ಅವರನ್ನು ನಮ್ಮ ಪಕ್ಷದ ನಾಯಕರಾಗಿ ಆಯ್ಕೆಮಾಡಿದೆ ಎಂದರು.
ಮತದಾರರು ಯೋಚಿಸಲಿ: ಗೋರಕ್ ಸಿಂಗ್ ವರದಿ ಇದುವರೆಗೆ ಸಂಸತ್ತಿನಲ್ಲಿ ಮಂಡನೆ ಆಗೇ ಇಲ್ಲ ಎಂದು ದಾಖಲೆಗಳು ಹೇಳುತ್ತಿವೆ. ಸಂಸದರು ಇನ್ನೂ ಮುಂದುವರಿದು ಗೋರಕ್ ಸಿಂಗ್ ವರದಿಯ 9 ಅಂಶಗಳು ಜಾರಿಗೆ ಬಂದಿದೆ. ಇನ್ನೂ ಜಾರಿ ಮಾಡುವುದಕ್ಕೆ ಸಾಲಮನ್ನಾದ 1 ಅಂಶ ಮಾತ್ರ ಬಾಕಿ ಇದೆ ಎಂದು ಸುಳ್ಳಿನ ಮೇಲೆ ಸುಳ್ಳು ಹೇಳಿ ಜನರ ಕಣ್ಣಿಗೆ ಮಣ್ಣು ಎರಾಚುವ ಸಂಸದರು ನಮಗೆ ಬೇಕಾ ಎಂಬುದು ಇಲ್ಲಿನ ಮತದಾರರು ಯೋಚಿಸಿಬೇಕಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ಮುಖಂಡರಾದ ನಾಗೇಂದ್ರಪ್ರಸಾದ್, ಸುಬ್ಬಣ್ಣ ಇದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

