ಚಿಕ್ಕಮಗಳೂರು

ದಾಸರು ನಿರ್ದಿಷ್ಟ ಜಾತಿಗೆ ಸೀಮಿತವಲ್ಲ

Published On :

ಕ.ಪ್ರ.ವಾರ್ತೆ    ಚಿಕ್ಕಮಗಳೂರು    ಮಾ. 30
ಋಷಿಮುನಿಗಳು, ಸಂತರು, ದಾಸರನ್ನು ಒಂದು ನಿರ್ದಿಷ್ಟ ಜಾತಿಗೆ ಸೀಮಿತಗೊಳಿಸಬಾರದು ಎಂದು ಜಿಲ್ಲಾ ಗಮಕ ಕಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಮಸುಬ್ರಾಯ ಶೇಟ್ ಹೇಳಿದ್ದಾರೆ.
ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ವ್ಯಾಸ ವಾಲ್ಮೀಕಿ, ಕನಕ, ಪುರಂದರ ದಾಸರು ಜಾತಿಮತಗಳನ್ನು ಮೀರಿ ಬೆಳೆದವರು ಎಂದರು.
ಸತತ ಸಾಧನೆ ದೈವ ಕೃಪೆಯಿದ್ದರೆ ಬೇಡನೊಬ್ಬ ವಾಲ್ಮೀಕಿ ಮಹರ್ಷಿ ಆಗಬಲ್ಲ. ಯೋಧನೊಬ್ಬ ದಾಸ ಶ್ರೇಷ್ಠ ಆಗಬಲ್ಲ.  ದಾಸ ಸಾಹಿತ್ಯವು ಕನ್ನಡಕ್ಕೆ ಬಹುದೊಡ್ಡ ಕೊಡುಗೆ ಎಂದು ಹೇಳಿದರು.
ಬೋಧನೆ ಪಾಲಿಸಿ:  ಸುಮಾರು 4000 ಕೀರ್ತನೆಗಳನ್ನು ರಚಿಸಿದ ಕನಕದಾಸರು ಕನಕ ದಾಸರಾಗದೇ ಹರಿದಾಸರಾಗಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿದರು. ಲಕ್ಷಾಂತರ ಕೀರ್ತನೆಗಳನ್ನು ರಚಿಸಿ ಹಾಡಿದ ಕೀರ್ತಿ ಪ್ರಪಂಚದಲ್ಲಿಯೇ ಪುರಂದರದಾಸರಿಗೆ ಸಲ್ಲುತ್ತದೆ.  ಕೆಲವು ಕೀರ್ತನೆಗಳನ್ನು ಉದಾಹರಿಸಿ ಅವರ ಬೋಧನೆಗಳನ್ನು ನಾವೆಲ್ಲ ಪಾಲಿಸಬೇಕೆಂದು ಕರೆ ನೀಡಿದರು.
ದಿ. ಎಚ್.ಎಚ್. ರುದ್ರೇಗೌಡರ ದತ್ತಿ ಮತ್ತು ದಿ. ಜಿ.ಕೆ. ಶ್ರೀನಿವಾಸ (ಮುರಳಿ) ಸ್ಮರಣಾರ್ಥ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನಾ.ಸು. ಶಿವಸ್ವಾಮಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಅಡಿಪಾಯ ಹಾಕಿಕೊಟ್ಟವರು ದಿ. ಕೋದಂಡರಾಮ ಶ್ರೇಷ್ಠಿ ಅವರ ಮನೆಯಲ್ಲಿ ದತ್ತಿ ಕಾರ್ಯಕ್ರಮ ನಡೆಯುತ್ತಿರುವುದು ವಿಶೇಷ. ಅಧ್ಮಾತ್ಮ ಚಿಂತಕರು ಶ್ರೀಮದ್ ಭಗವದ್ಗೀತೆಯ ಬೋಧಕರು ಆದ ಮಾತೆ ಪ್ರೇಮಾ ಕೋದಂಡರಾಮ ಇವರು ಕನ್ನಡಕ್ಕೆ ಆಸ್ತಿ. ಪ್ರತಿಯೊಬ್ಬರೂ ಕನ್ನಡ ಸೇವೆ ಕಟಿಬದ್ದರಾಗಬೇಕೆಂದು ಹೇಳಿದರು.
ಶ್ರೇಷ್ಠಗುಣ ಹೊಂದಿ: ರಾಜ್ಯದಲ್ಲಿಯೇ ಅತಿ ಹೆಚ್ಚಿನ ದತ್ತಿ ದಾನಿಗಳನ್ನು ಹೊಂದಿದ ಜಿಲ್ಲೆ ಇದಾಗಿದೆ. ರುದ್ರೇಗೌಡರ ಪುತ್ರ ಹರೀಶ್ ಪಾಲಕರ ಆಶೋತ್ತರಗಳನ್ನು ಪೂರೈಸುವುದು ಮಕ್ಕಳ ಕರ್ತವ್ಯ. ನಾವೆಷ್ಟೇ ಪುರಾಣಶಾಸ್ತ್ರ ಕಂಠಪಾಠ ಮಾಡಿಕೊಂಡರೂ ಸೇವೆ ಸಜ್ಜನಿಕೆ ದಾನ ಮುಂತಾದ ಶ್ರೇಷ್ಠ ಗುಣ ಹೊಂದಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ನಟರಾಜ್ ಮಾತನಾಡಿದರು. ಗುರುವೇಶ್ ಉಪಸ್ಥಿತರಿದ್ದರು. ಪ್ರೇಮಾ ಕೋದಂಡರಾಮ ಅವರು ದಾಸರ ಕೀರ್ತನೆಗಳನ್ನು ಸುಶ್ರಾವ್ಯವಾಗಿ ಭಾವಪೂರ್ಣವಾಗಿ ಹಾಡಿದರು. ಮೇಕನಗದ್ದೆ ಲಕ್ಷ್ಮಣಗೌಡ ಸ್ವಾಗತಿಸಿ, ವಾಣಿ ಚಂದ್ರಯ್ಯ ನಾಯ್ಡು ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.