ಕೊಳವೆ ಬಾವಿಗೆ 89 ಲಕ್ಷ ಬಿಡುಗಡೆ: ದತ್ತ
ಕಡೂರು: ಬರದ ಹಿನ್ನೆಲೆಯಲ್ಲಿ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಹೊಸದಾಗಿ ಕೊರೆಸಲಾಗಿರುವ 129 ಕೊಳವೆ ಬಾವಿಗಳ ಬಾಕಿ ಪಾವತಿಗಾಗಿ ಸಚಿವ ಎಚ್.ಕೆ. ಪಾಟೀಲ್ ಅವರು 89 ಲಕ್ಷ ಬಿಡುಗಡೆ ಮಾಡಿದ್ದಾರೆ ಎಂದು ಶಾಸಕ ವೈಎಸ್‌ವಿ ದತ್ತ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಬರ ತಾಂಡವವಾಡುತ್ತಾ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದ್ದರೂ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲಿಸಿದ್ದ 3.25 ಕೋಟಿ ಕ್ರಿಯಾಶೀಲ ಯೋಜನೆಯಲ್ಲಿ ನಯಾಪೈಸೆ ಬಿಡುಗಡೆ ಮಾಡಲಿಲ್ಲ. ಆದರೆ 129 ಹೊಸ ಕೊಳವೆ ಬಾವಿ ಕೊರೆಸಿದ ಬಾಕಿ ಹಣದ ಕುರಿತು ಸಚಿವ ಎಚ್.ಕೆ. ಪಾಟೀಲ್ ಅವರ ಗಮನ ಸೆಳೆದು ಪರಿಸ್ಥಿತಿ ವಿವರಿಸಿದ್ದರಿಂದ 89 ಲಕ್ಷ ಅನುದಾನ ಬಿಡುಗಡೆ ಮಾಡಿದ್ದಾರೆ.
ಇತ್ತೀಚೆಗೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಸರ್ಕಾರ ಕೇವಲ 50 ಲಕ್ಷ ಬಿಡುಗಡೆ ಮಾಡಿದೆ. ಮೇ 29ಕ್ಕೆ ತಾವು ಶಾಸಕರಾಗಿ ಒಂದು ವರ್ಷ ತುಂಬುತ್ತಿರುವ ಈ ಅವಧಿಯಲ್ಲಿ ಚುನಾವಣೆ ನೀತಿ ಸಂಹಿತೆ ಸೇರಿದಂತೆ 4 ತಿಂಗಳು ಮಾತ್ರ ಜನರಿಗೆ ಶಾಸಕಗಿರಿ ಕೆಲಸ ಮಾಡುವ ಅವಧಿ ಸಿಕ್ಕಿ ಪ್ರೊಬೇಷನರಿ ಮುಗಿಸಿ ಕ್ಷೇತ್ರದ ಜನ ಎಲ್ಲ ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳ ನಾಡಿಮಿಡಿತ ಅರಿತಿದ್ದೇನೆ. ತಾವು ಕೇವಲ 1 ವರ್ಷದಲ್ಲೇ ವಿಫಲರಾಗಿದ್ದಾರೆಂದು ಆರೋಪ ಮಾಡುವುದನ್ನು ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್ ಮತ್ತು ಕಾಂಗ್ರೆಸ್ ಮುಖಂಡರು ಕೈಬಿಡಬೇಕು ಎಂದರು.
ಕಡೂರು ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಿದೆ. ಅದಕ್ಕಾಗಿ ಎಲ್ಲಿ ಟಿಸಿ ಕೆಟ್ಟು ಸಮಸ್ಯೆ ಇದೆಯೋ ಅಲ್ಲಿಗೆ ತೆರಳಿ ಟಿಸಿ ರಿಪೇರಿ ಮಾಡುವ ಸಂಚಾರಿ ಟಿಸಿ ರಿಪೇರಿ ಸೆಂಟರ್‌ಗಳು 15 ದಿನಗಳಲ್ಲಿ ಆರಂಭವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೆ.ಎಂ. ಮಹೇಶ್ವರಪ್ಪ, ಬಿ.ಪಿ.ನಾಗರಾಜ್, ಎನ್. ಇಮಾಮ್, ಮಲ್ಲೇಶಪ್ಪ, ತಮ್ಮಯ್ಯ, ತಿಮ್ಮೇಗೌಡ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

