ಚಿಕ್ಕಮಗಳೂರು

ಶಾಂತಿ, ನೆಮ್ಮದಿಗೆ ಸರಳ ವಿವಾಹ ಸಹಕಾರಿ

Published On :

ಕ.ಪ್ರ.ವಾರ್ತೆ    ತರೀಕೆರೆ    ಮೇ 2
ಸರಳ ವಿವಾಹಗಳಿಂದ ಸುಖ, ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ ಎಂದು ಹಾರನಹಳ್ಳಿಯ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದರು.
ಜೇನುಗೂಡು ವಿಳ್ಯೆದೆಲೆ ವ್ಯಾಪಾರಸ್ಥರ ಮತ್ತು ಬೆಳೆಗಾರರ ಸಂಘ ವತಿಯಿಂದ ಪಟ್ಟಣದ ಎಪಿಎಂಸಿ ಆವರಣದಲ್ಲಿ ಏರ್ಪಾಡಾಗಿದ್ದ ಶಿವಶರಣರ ಸ್ಮರಣೋತ್ಸವ, ಧಾರ್ಮಿಕ ಸಮಾರಂಭ ಮತ್ತು ಉಚಿತ ಸಾಮೂಹಿಕ ವಿವಾಹ ಮಹೋತ್ಸವ, ಸರ್ವ ಶಿವಶರಣರ ಸ್ಮರಣೋತ್ಸವ, ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಉಚಿತ ವಿವಾಹ ಕಾರ್ಯಗಳಿಂದ ಪುಣ್ಯ ಲಭಿಸುತ್ತದೆ. ಅಂಧಶ್ರದ್ಧೆ ದೂರಾಗುತ್ತದೆ. ಶರಣರ ಸಿದ್ಧಾಂತದಲ್ಲಿ ಮದುವೆಗೆ ಮಹತ್ವ ಇದೆ. ಸಂಸಾರದಲ್ಲಿ ಸೋಲುವಿಕೆ ಇರಬೇಕು. ಅಡಂಬರ ಇರಕೂಡದು ಎಂದರು.
ಅರಸೀಕೆರೆ ತಾಲೂಕು ಯಳನಡು ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ, ಹಣ್ಣೆ ಶ್ರೀಶೈಲ ಶಾಖಾ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ವೃಷಭೇಂದ್ರ ದೇಶಿಕೇಂದ್ರ ಸ್ವಾಮೀಜಿ, ಜೇನುಗೂಡು ವೀಳ್ಯೆದೆಲೆ ವ್ಯಾಪಾರಸ್ಥರ ಮತ್ತು ಬೆಳೆಗಾರರ ಸಂಘದ ಅಧ್ಯಕ್ಷ ಟಿ.ವಿ. ಶಿವಣ್ಣ ಮತ್ತು ಸಂಘದ ಸದಸ್ಯರು, ಮಾಜಿ ಶಾಸಕ, ಟಿ.ಎಚ್. ಶಿವಶಂಕರಪ್ಪ, ಮಾಜಿ ಪುರಸಭಾಧ್ಯಕ್ಷ ಎಂ. ನರೇಂದ್ರ, ಪುರಸಭಾ ಸದಸ್ಯ ಪದ್ಮರಾಜ್, ಹಾಲುವಜ್ರಪ್ಪ, ಮಲಿಯಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎ.ಆರ್. ರಾಜಶೇಖರ್ ಮತ್ತಿತರರು ಭಾಗವಹಿಸಿದ್ದರು. ಟಿ.ಜಿ. ಸದಾನಂದ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.