ಮದ್ಯವ್ಯಸನ ಮುಕ್ತರಾಗಲು ಪರಿವರ್ತನೆ ಅಗತ್ಯ
ನರಸಿಂಹರಾಜಪುರ: ಸರ್ಕಾರವು ಮದ್ಯಪಾನ ನಿಷೇಧ ಮಾಡಿದ್ದರೂ ಮದ್ಯವ್ಯಸನ ನಿಲ್ಲಿಸಲು ಸಾಧ್ಯವಾಗಿಲ್ಲ. ಮದ್ಯವ್ಯಸನಿಗಳ ಮನಸ್ಸನ್ನು ಪರಿವರ್ತನೆ ಮಾಡುವುದರಿಂದ ಮಾತ್ರ ಪರಿಹಾರ ಕಂಡುಕೊಳ್ಳಬಹುದು ಎಂದು ಚಿಕ್ಕಮಗಳೂರು ಜಿಲ್ಲಾ ಜನ ಜಾಗೃತಿ ವೇದಿಕೆಯ ಉಪಾಧ್ಯಕ್ಷ ಅರವಿಂದ ಸೋಮಯಾಜಿ ಅಭಿಪ್ರಾಯಪಟ್ಟರು.
ಕಳ್ಳಿಕೊಪ್ಪದ ಜಿ.ಟಿ. ನಾರಾಯಣಗೌಡ ಸಮುದಾಯ ಭವನದಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೆಟ್ಟಿಕೊಪ್ಪ ವಲಯದ ವ್ಯಾಪ್ತಿಯ ಮದ್ಯವರ್ಜನ ವ್ಯವಸ್ಥಾಪನಾ ಸಮಿತಿಯ ನೇತೃತ್ವದಲ್ಲಿ ನಡೆದ 7 ದಿನಗಳ 678ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚಿಕಿತ್ಸಾ ತಂಡದ ಶಿಬಿರಾಧಿಕಾರಿ ದಿವಾಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಇದುವರೆಗೆ 677 ಮದ್ಯವರ್ಜನಾ ಶಿಬಿರವು ಯಶಸ್ವಿಯಾಗಿ ಮುಕ್ತಾಯವಾಗಿದ್ದು, 45 ಸಾವಿರ ಮದ್ಯವ್ಯಸನಿಗಳು ಮದ್ಯವ್ಯಸನ ಮುಕ್ತರಾಗಿದ್ದಾರೆ. ಈಗ 4 ಕಡೆ ಏಕಕಾಲಕ್ಕೆ ಮದ್ಯವರ್ಜನಾ ಶಿಬಿರ ಪ್ರಾರಂಭವಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಪ್ಪ, ಶೃಂಗೇರಿ,ನ.ರಾ. ಪುರ ತಾಲೂಕುಗಳ ಯೋಜನಾಧಿಕಾರಿ ಕು. ಉಮಾವತಿ ಮಾತನಾಡಿದರು. ದ್ವಾರಮಕ್ಕಿಯ ಇಂದಿರಮ್ಮ ಸಮಾರಂಭವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ದ್ವಾರಮಕ್ಕಿಯ ಕೃಷಿಕ ಶ್ರೀನಾಥ್, ಸಮಿತಿಯ ಕೋಶಾಧಿಕಾರಿ ಎನ್.ಎಂ. ಕಾಂತರಾಜ್, ಮುತ್ತಿನಕೊಪ್ಪದ ಮಾಜಿ ಸೈನಿಕ ಯತಿರಾಜ್, ಶಿಬಿರದ ಚಿಕಿತ್ಸಾ ತಂಡದ ಆರೋಗ್ಯ ಸಹಾಯಕಿ ಜಯಲಕ್ಷ್ಮಿ ಉಪಸ್ಥಿತರಿದ್ದರು. ಶೋಭಾ ಪ್ರಾರ್ಥಿಸಿದರು.ಧ.ಗ್ರಾ. ಯೋಜನೆಯ ಕೃಷಿ ಮೇಲ್ವೀಚಾರಕ ಪ್ರೇಂಕುಮಾರ್ ಸ್ವಾಗತಿಸಿದರು. ಶೆಟ್ಟಿಕೊಪ್ಪ ವಲಯ ಮೇಲ್ವೀಚಾರಕ ಜಿ. ಉಮೇಶ್ ನಿರೂಪಿಸಿದರು. ಅಶ್ವಥ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

