ಚಿಕ್ಕಮಗಳೂರು

'ಕೊಬ್ಬಿನಾಂಶ ಇಳಿಸಲು ರಕ್ತದಾನ ಸಹಕಾರಿ'

Published On :

ತರೀಕೆರೆ: ರಕ್ತದಾನ ಪ್ರಾಣದಾನ ಮಾಡಿದ ಹಾಗೆ ಎಂದು ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ. ಶ್ರೀನಿವಾಸ ಆಚಾರ್ ತಿಳಿಸಿದ್ದಾರೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೈಪುಣ್ಯ ನಿಧಿ ವತಿಯಿಂದ ಕಾಲೇಜು ಆವರಣದಲ್ಲಿ ಕೌಶಲ್ಯ ಅಭಿವೃದ್ಧಿ, ರಕ್ತದಾನ ಮಹತ್ವ ಕುರಿತು ಏರ್ಪಾಡಾಗಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಪಘಾತ, ಹೆರಿಗೆ ಮತ್ತು ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ರಕ್ತದ ಅವಶ್ಯಕತೆ ಹೆಚ್ಚು ಇರುತ್ತದೆ. ರಕ್ತ ಸುರಕ್ಷಿತವಾಗಿದ್ದರೆ ಮಾತ್ರ ಬೇರೆಯವರಿಗೆ ಕೊಡಬಹುದು,
ಪ್ಯಾಕ್ಡ್ ಫುಡ್ ಬೇಡ: ಸೂಕ್ತವಲ್ಲದ ಪ್ಲಾಸ್ಟಿಕ್ ಬಾಟಲಿಗಳಲ್ಲಿನ ನೀರು ಕುಡಿಯುವುದರಿಂದ ಉಂಟಾಗುವ ದುಷ್ಪರಿಣಾಮ ತಿಳಿಸಿದ ಅವರು ಪ್ಯಾಕ್ಡ್ ಫುಡ್ಗಳನ್ನು ಸೇವಿಸಬಾರದು. ಹೆಚ್ಚಾಗಿ ಕರಿದ ತಿಂಡಿ ಸೇವಿಸುವುದರಿಂದ ಅಸ್ತಮಾ, ಕೊಬ್ಬು ಹೆಚ್ಚಾಗುವಿಕೆ ಇತ್ಯಾದಿಗಳನ್ನು ವಿವರಿಸಿದ ಅವರು, ಮನೆಯಲ್ಲಿ ಸಿದ್ಧಪಡಿಸಿದ ತಾಜಾ ಆಹಾರ ಸೇವನೆ ಆರೋಗ್ಯಕ್ಕೆ ಬಹಳ ಉತ್ತಮವಾದುದು ಎಂದರು.
ಉಪನ್ಯಾಸಕ ಡಾ. ಜಗದೀಶ್ ಮಾತನಾಡಿ, ತರಬೇತಿಗಳು ಹೆಚ್ಚಿನ ಅನುಭವ ತಂದುಕೊಡುತ್ತದೆ. ಅದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ರಕ್ತದಾನ ಮಾಡುವುದರಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕು. ರಕ್ತ ಕೊಡುವುದರಿಂದ ಯಾವುದೇ ರೀತಿಯ ತೊಂದರೆ ಇಲ್ಲ ಎಂದರು.
ಓಂಕಾರಮೂರ್ತಿ ಮಾತನಾಡಿದರು. ಪ್ರಾಚಾರ್ಯ ಡಾ. ವಿಶ್ವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ರೂಪ, ಪುಷ್ಪ, ತೇಜಸ್ವಿನಿ ಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.