ಗ್ರಾಮಾಂತರ ಪ್ರದೇಶಕ್ಕೆ ಸುಸಜ್ಜಿತ ಬಸ್‌ಗೆ ಆಗ್ರಹ
ಚಿಕ್ಕಮಗಳೂರು: ಗ್ರಾಮಾಂತರ ಪ್ರದೇಶಗಳಿಗೆ ಕೆಎಸ್ಸಾಆರ್ಟಿಸಿ ಸುಸಜ್ಜಿತ ಬಸ್‌ಗಳನ್ನು ಬಿಡುವಂತೆ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಎಚ್.ಕೆ. ಶಶಿಧರ್ ಹಾಗೂ ಬಿಎಸ್ಪಿಯ ಜಿಲ್ಲಾ ಕಾರ್ಯದರ್ಶಿ ಎನ್.ಪಿ. ಈಶ್ವರ್ ಆಗ್ರಹಿಸಿದ್ದಾರೆ.
ಚಿಕ್ಕಮಗಳೂರಿನಿಂದ ಜಾವಗಲ್, ನಿಡಘಟ್ಟ, ಮರ್ಲೆ, ಗುಡ್ಡೇನಹಳ್ಳಿ, ಸಿಂದಿಗೆರೆ ಈ ಮಾರ್ಗಗಳಲ್ಲಿ ಓಡಾಡುವ ಬಹುತೇಕ ಎಲ್ಲಾ ಸಾರಿಗೆ ಸಂಸ್ಥೆಯ ಬಸ್‌ಗಳು ಪ್ರಯಾಣಕ್ಕೆ ಯೋಗ್ಯವಾಗಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಅಧಿಕವಾಗಿದೆ. ಈ ಮಾರ್ಗದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಳೆಯ ಬಸ್‌ಗಳನ್ನು ಓಡಿಸುತ್ತಿದ್ದು, ಹಲವು ಬಾರಿ ಮಾರ್ಗ ಮಧ್ಯೆಯೇ ಕೆಟ್ಟು ನಿಲ್ಲುತ್ತಿದ್ದು, ಪ್ರಯಾಣಿಕರು ತಮ್ಮ ಊರು ತಲುಪುವುದೇ ದುಸ್ತರವಾಗಿದೆ. ಮಳೆ ಬಂದಾಗ ಸೋರುತ್ತವೆ. ಕೆಲವು ಬಸ್‌ಗಳಿಗೆ ಡೋರ್‌ಗಳಿಲ್ಲ, ಕಿಟಕಿಗಳಿದ್ದರೂ ಗಾಜುಗಳಿಲ್ಲ, ಇಂತಹ ಬಸ್‌ಗಳಲ್ಲಿ ಸಂಚರಿಸಲು ಮಕ್ಕಳಿಗೆ, ರೋಗಿಗಳಿಗೆ, ಮಹಿಳೆಯರಿಗೆ, ವೃದ್ಧರಿಗೆ ತೊಂದರೆಯಾಗುತ್ತಿದೆ ಎಂದಿದ್ದಾರೆ.
ನಗರ ಪ್ರದೇಶದಲ್ಲಿ ಒಳ್ಳೆಯ ಬಸ್‌ಗಳನ್ನು ಬಿಟ್ಟು ಗ್ರಾಮಾಂತರ ಪ್ರದೇಶಗಳಿಗೆ ಹಳೆಯದಾದ ಬಸ್ ಬಿಡಲಾಗುತ್ತಿದೆ. ಸಂಸ್ಥೆ, ಗ್ರಾಮೀಣ ವಿರೋಧಿ ಭಾವನೆ ತೋರಿಸುತ್ತಿರುವುದು ದುರ್ದೈವ ಸಂಗತಿ. ಗ್ರಾಮಾಂತರ ಪ್ರದೇಶದ ಮಾರ್ಗಗಳಲ್ಲಿ ಓಡಾಡುತ್ತಿರುವ ಪ್ರಯಾಣಕ್ಕೆ ಯೋಗ್ಯವಲ್ಲದ ಅಸುರಕ್ಷಿತ ಬಸ್‌ಗಳ ಓಡಾಟ ನಿಲ್ಲಿಸಿ ಉತ್ತಮ ಸುಸಜ್ಜಿತ ಬಸ್‌ಗಳನ್ನು ಓಡಿಸಬೇಕು, ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

