ಚಿಕ್ಕಮಗಳೂರು

ಹೆಬ್ಬೆ ತಿರುವು ಯೋಜನೆಗೆ ಕೈಜೋಡಿಸಿ: ಪ್ರಕಾಶ್

Published On :

ಕಡೂರು: 30 ಸಾವಿರಕ್ಕೂ ಹೆಚ್ಚು ಅಚ್ಚುಕಟ್ಟು ಪ್ರದೇಶಗಳಿಗೆ ನೀರೊದಗಿಸುವ ಮಹತ್ವದ ಹೆಬ್ಬೆ ತಿರುವು ಯೋಜನೆಯಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಹಾಗಾಗಿ 5 ಕಿ.ಮೀ. ಸುರಂಗ ಮಾರ್ಗದ ಮೂಲಕ ಮದಗದಕೆರೆಗೆ ನೀರು ತರಬಹುದಾಗಿದ್ದು, ಈ ಹೋರಾಟಕ್ಕೆ ಪಕ್ಷಾತೀತವಾಗಿ ಎಲ್ಲರೂ ಕೈ ಜೋಡಿಸಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅರೇಕಲ್ ಪ್ರಕಾಶ್ ಮನವಿ ಮಾಡಿದ್ದಾರೆ.
ಯೋಜನೆ ಬಗ್ಗೆ ಮಾಹಿತಿ ನೀಡಿದ ಅವರು, ಹೆಬ್ಬೆ ತಿರುವು ಯೋಜನೆ ಜಾರಿಗೆ ಅನೇಕ ರೀತಿಯ ಹೋರಾಟಗಳು ನಡೆದಿವೆ. ಬಿಜೆಪಿ ಸರ್ಕಾರದ ಅವಧಿಯಲ್ಲೂ ಯೋಜನೆ ಜಾರಿಗೆ ಹಲವಾರು ಪ್ರಯತ್ನ ನಡೆದಿವೆ. ಹೆಬ್ಬೆ ಜಲಪಾತವು ಮದಗದಕೆರೆಯಿಂದ ಸುಮಾರು 900 ಅಡಿ ಮಾತ್ರ ವ್ಯತ್ಯಾಸದಲ್ಲಿದೆ. ಅಂದು ಮುಖ್ಯಮಂತ್ರಿಯಾಗಿದ್ದ ಸದಾನಂದ ಗೌಡರಿಂದ ಯೋಜನೆಯ ಸಾಧಕ ಬಾಧಕಗಳ ಸರ್ವೆ ನಡೆದು ಸರ್ಕಾರಕ್ಕೆ ವರದಿ ನೀಡಲಾಗಿತ್ತು. ಅಲ್ಲದೆ ಮುಖ್ಯ ಎಂಜಿನಿಯರ್ ಎ.ಎಸ್. ಪಾಟೀಲರು ಈ ಯೋಜನೆಯ ಸರ್ವೆ ಕಾರ್ಯ ನಡೆಸಿ 5 ಕಿ.ಮೀ. ಸುರಂಗ ಮಾರ್ಗದ ಮೂಲಕ 900 ಅಡಿ ಆಳದಲ್ಲಿ ಸುರಂಗ ಮಾರ್ಗದ ಕಾಲುವೆ ನೀರು ತೆಗೆದುಕೊಂಡು ಹೋಗುವುದರಿಂದ ಮರ ಗಿಡಗಳಿಗಾಲೀ ಅಥವ ವನ್ಯಜೀವಿಗಳಿಗಾಗಲೀ ಯಾವ ಧಕ್ಕೆ ಆಗುವುದಿಲ್ಲ ಎಂದು ವರದಿ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.