ಚಿಕ್ಕಮಗಳೂರು

ಅಣುವ್ರತ ಸಂಕಲ್ಪ ಯಾತ್ರೆಗೆ ಅದ್ಧೂರಿ ಸ್ವಾಗತ

Published On :

ಕ.ಪ್ರ.ವಾರ್ತೆ, ತರೀಕೆರೆ, ಮೇ 6
ಜೈನಾಚಾರ್ಯ ತುಳಸಿರವರ ಜನ್ಮಶತಾಬ್ದಿ ಅಂಗವಾಗಿ ಮಂಗಳವಾರ ಪಟ್ಟಣಕ್ಕೆ ಆಗಮಿಸಿದ ಅಣುವ್ರತ ಸಂಕಲ್ಪ ಯಾತ್ರೆಗೆ ಎಪಿಎಂಸಿ ಬಳಿ ಅದ್ಧೂರಿ ಸ್ವಾಗತ ಕೋರಲಾಯಿತು.
ಭವರ್‌ಲಾಲ್ ನಾಹರ್, ಪ್ರವೀಣ್ ನಹರ್, ಮಹೇಂದ್ರ, ಜೈನ್ ಸಮುದಾಯದವರು ಮತ್ತಿತರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಶಾರದ ಸಭಾಭವನದಲ್ಲಿ ನಡದ ಸಮಾರಂಭದಲ್ಲಿ ಜೈನಾಚಾರ್ಯ ತುಳಸಿ ಅವರ ಶಿಷ್ಯ ಸಮಣಿ ಕಂಚನ್ ಪ್ರಜ್ಞಾ ಮಾತನಾಡಿ, ಒಳ್ಳೆಯ ಮನುಷ್ಯರಾಗಲು ಅಣುವ್ರತದ ಸಣ್ಣಸಣ್ಣ ನಿಯಮಗಳನ್ನೂ ಪಾಲಿಸಬೇಕು. ಮನುಷ್ಯತ್ವವನ್ನು ಪಾಲಿಸಬೇಕು, ಒಳ್ಳೆಯ ಸಮಾಜಕ್ಕಾಗಿ ಅಣುವತ್ರ ಆಂದೋಲನ ನಡೆಸಲಾಗುವುದು ಎಂದು ತಿಳಿಸಿದರು.
ಪುರಸಭಾ ಸದಸ್ಯ ಟಿ.ಜಿ. ಅಶೋಕ್ ಕುಮಾರ್ ಮಾತನಾಡಿ, ಹಿಂಸೆ ತ್ಯಜಿಸಬೇಕು. ಅಣುವ್ರತ ಆಂದೋಲನ ಭಾವನಾತ್ಮಕ ಮತ್ತು ಅಹಿಂಸಾತ್ಮಕವಾದ ಉತ್ತಮ ಸಂದೇಶ ನೀಡುತ್ತದೆ ಎಂದು ತಿಳಿಸಿದರು.
ಅಣುವ್ರತ ಸಂಕಲ್ಪಯಾತ್ರೆ ರಾಜ್ಯ ಸಹ ಸಂಯೋಜಕ ಸುರೇಂದ್ರ ಗೋಖರು ಮಾತನಾಡಿ, ಅಣವ್ರತ ಸಂಕಲ್ಪ ಯಾತ್ರೆ ತರೀಕೆರೆಗೆ ಆಗಮಿಸಿದ್ದು, ಸಂತೋಷದ ದಿನವಾಗಿದೆ. ಅಣುವ್ರತ ಸಂಕಲವನ್ನು ಎಲ್ಲರೂ ಪಾಲಿಸಬಹುದು ಎಂದು ತಿಳಿಸಿದರು.
ಭವರ್‌ಲಾಲ್ ನಾಹರ್, ಗೌತಮ್, ಸಮಣಿ ಪಂಚಂ ಪ್ರಜ್ಞ, ರಶ್ಮಿ ಪ್ರಜ್ಞ, ಮಹೇಂದ್ರ, ಇಂದಿರಾ ಮಹಾವೀರ್, ಸಂತೋಷ್ ರಮೇಶ್ ಮೊದಲಾದವರು ಮಾತನಾಡಿದರು.
ಪ್ರವೀಣ್ ನಾಹರ್ ಜೈನ ಸಮುದಾಯದವರು ಸಮಾರಂಭದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.