ಚಿಕ್ಕಮಗಳೂರು

ಸಾಹಿತ್ಯ ಪ್ರಕಾರದಲ್ಲಿ ಪ್ರಬಂಧಕ್ಕೆ ಮಾನ್ಯತೆ

Published On :

ಚಿಕ್ಕಮಗಳೂರು: ಸಾಹಿತ್ಯ ಪ್ರಕಾರಗಳಲ್ಲಿ ಪ್ರಬಂಧ ಸಾಹಿತ್ಯಕ್ಕೆ ವಿಶೇಷ ಮಾನ್ಯತೆ ಮತ್ತು ಜನಪ್ರಿಯತೆಯಿದ್ದು, ಗದ್ಯದ ಪ್ರತಿಯೊಂದು ಪ್ರಕಾರವನ್ನೂ ಒಳಗೊಂಡ ಪ್ರಬಂಧದ ವ್ಯಾಪ್ತಿ ದೊಡ್ಡದು ಎಂದು ಮಕ್ಕಳ ತಜ್ಞ ಡಾ. ಜೆ.ಪಿ. ಕೃಷ್ಣೇಗೌಡ ಹೇಳಿದರು.
ನಗರದ ನರಸಿಂಗರಾವ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಉದ್ಭವ ಪ್ರಕಾಶನ ಏರ್ಪಡಿಸಿದ್ದ ಬೆಳವಾಡಿ ಮಂಜುನಾಥ ವಿರಚಿತ ಕನ್ನಡದಲ್ಲಿ ಪ್ರಬಂಧ ಸಾಹಿತ್ಯ ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ವಿಶಿಷ್ಟ ಕೃತಿ: ಆಧುನಿಕ ಗದ್ಯದ ಪ್ರಮುಖ ಪ್ರಕಾರವಾದ ಪ್ರಬಂಧದ ಸ್ವರೂಪ, ಇತಿಹಾಸ, ರಚನಾ ವಿಧಾನ ಮತ್ತು ವೈವಿಧ್ಯತೆಯನ್ನು ಸಾದರಪಡಿಸಿರುವ ವಿಶಿಷ್ಟ ಕೃತಿ ಇದು ಎಂದರು.
ಇಂಗ್ಲಿಷ್‌ನಲ್ಲಿ ದಿ ಹಿಸ್ಟ್ರಿ ಅಂಡ್ ಸ್ಟ್ರಕ್ಚರ್ ಆಫ್ ಎಸ್ಸೆಸ್ ಎಂಬುದು ಪ್ರಸಿದ್ಧ ಪುಸ್ತಕ. ಇಂಗ್ಲಿಷ್ ಪ್ರಬಂಧದ ಇತಿಹಾಸವನ್ನು ದಾಖಲಿಸಿರುವಂಥದ್ದು. ಕನ್ನಡದಲ್ಲಿ ಇಂತಹ ಪುಸ್ತಕದ ಕೊರತೆಯಿದ್ದು, ಬೆಳವಾಡಿ ಮಂಜುನಾಥ ನಿರಂತರವಾಗಿ ಎರಡು ವರ್ಷ ಅಧ್ಯಯನ ಮಾಡಿ, ಸಂಶೋಧನಾತ್ಮಕ ಕೃತಿ ರಚಿಸಿದ್ದಾರೆ. ಪ್ರತಿಯೊಂದು  ಪ್ರಕಾರಕ್ಕೂ ಸಮರ್ಥ ಉದಾಹರಣೆ ಕೊಟ್ಟು ವಿಶ್ಲೇಷಿಸಿರುವುದು ಈ ಕೃತಿಯ ಹಿರಿಮೆ ಎಂದು ಅವರು ಹೇಳಿದರು.
ಪ್ರಬಂಧ ವಿವಿಧ ಹಂತದಲ್ಲಿ ವಿಕಾಸಗೊಂಡ ಕ್ರಮವನ್ನು ವಿವರಿಸುತ್ತಲೇ ಒಂದು ಪ್ರಕಾರ ಮತ್ತೊಂದು ಪ್ರಕಾರದ ನಡುವಿನ ಸೂಕ್ಷ್ಮ ವ್ಯತ್ಯಾಸ ತಿಳಿಸಿದ್ದಾರೆ. ಪ್ರಬಂಧದ ಪ್ರಾಮುಖ್ಯತೆ ತಿಳಿಯಬಯಸುವರು ಈ ಕೃತಿಯನ್ನು ಓದಲೇಬೇಕು. ಬಹುಮುಖಿತ್ವ ಪ್ರಬಂಧದ ಪ್ರಮುಖ ಗುಣ ಎಂಬುದನ್ನು ನಿದರ್ಶನ ರೂಪದಲ್ಲಿ  ತೋರಿಸಲಾಗಿದೆ ಎಂದರು.
ಕಾಫಿ ಬೆಳೆಗಾರರಾದ ಅಪ್ಪಿಶೆಟ್ಟಿ ಸಮಾರಂಭ ಉದ್ಘಾಟಿಸಿದರು.  ಶ್ರೀಲಂಕಾದ ಕೊಲಂಬೊ ಓಪನ್ ಇಂಟರ್ ನ್ಯಾಷನಲ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿರುವ ಉದ್ಯಮಿ ಡಾ. ಆರ್. ಕೆ. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಆನಂದಕುಮಾರ ಶೆಟ್ಟಿ ಸ್ವಾಗತಿಸಿದರು. ಉಜ್ವಲ್ ವಂದಿಸಿದರು. ಸಾಹಿತಿ ಬೆಳವಾಡಿ ಮಂಜುನಾಥ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.