ಚಿಕ್ಕಮಗಳೂರು

ಕೃಷಿಕರ ಸಾಲ ವಸೂಲಿಗೆ ರೈತ ಸಂಘ ವಿರೋಧ

Published On :

ಕ.ಪ್ರ.ವಾರ್ತೆ ್ಣ ಕೊಪ್ಪ ್ಣ ಮೇ 16
ರೈತರ ಸಾಲ ವಸೂಲಾತಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಒತ್ತಾಯಿಸಿ ತಾಲೂಕಿನ ಸಿಂಡಿಕೇಟ್ ಬ್ಯಾಂಕ್ ಎಲೆಮಡಲು ಶಾಖೆ ಎದುರು ಗುರುವಾರ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ರೈತ ಸಂಘದ ಸಂಚಾಲಕ ಕರುವಾನೆ ನವೀನ್ ಮಾತನಾಡಿ, ಈ ಭಾಗದ ರೈತರು ಸಾಲ ಕಟ್ಟುವ ಪರಿಸ್ಥಿತಿಯಲ್ಲಿ ಇಲ್ಲ. ಕೇಂದ್ರ ಸರ್ಕಾರ ಗೋರಖ್ ಸಿಂಗ್ ವರದಿ ಅನುಷ್ಠಾನಗೊಳಿಸುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಕಳೆದ ಮುಂಗಾರಿನಲ್ಲಿ ಕೊಳೆ ರೋಗದಿಂದ ಸಂಪೂರ್ಣ ಫಸಲು ಕಳೆದುಕೊಂಡಿರುವ ಬೆಳೆಗಾರರು, ಬೆಳೆಗೆ ಉತ್ತಮ ಬೆಲೆ ಬಂದರೂ ಮಾರಲು ಬೆಳೆಯಿಲ್ಲವಾಗಿದೆ. ಬ್ಯಾಂಕ್‌ನವರು ವಸೂಲಾತಿಗೆ ಮುಂದಾದರೆ ಆತ್ಮಹತ್ಯೆಗಳು ನಡೆಯಬಹುದಾಗಿದ್ದು, ಬ್ಯಾಂಕ್ ಅಧಿಕಾರಿಗಳು ತಾಳ್ಮೆ ವಹಿಸಬೇಕು ಎಂದರು.
ರೈತ ಮುಖಂಡ ಬೆಳಗೊಳ ಚಿಂತನ್ ಮಾತನಾಡಿ, ಉದ್ಯಮಿಗಳ ಸಾಲ ಮನ್ನಾ ಮಾಡುವ ಸರ್ಕಾರಗಳು ರೈತರ ಸಾಲ ಮನ್ನಾಕ್ಕೆ ಗಮನಹರಿಸಬೇಕು. ಬೆಳೆಗಾರ ತಮ್ಮ ಸಾಲದ ಅಸಲು ಪಾವತಿಗೆ ಮುಂದಾದಲ್ಲಿ ಬಡ್ಡಿ ಮನ್ನಾ ಮಾಡುವ ಬಗ್ಗೆ ಸರ್ಕಾರ ಹಾಗೂ ಬ್ಯಾಂಕ್‌ಗಳು ಕ್ರಮ ವಹಿಸುವಂತೆ ಒತ್ತಾಯಿಸಿದರು.
ಬ್ಯಾಂಕಿನ ವ್ಯವಸ್ಥಾಪಕ ಅಜಯ್ ಅವರು ರೈತ ಸಂಘದ ಮನವಿ ಸ್ವೀಕರಿಸಿ ಮಾತನಾಡಿ, ಸಾಲ ಮರು ಹೊಂದಾಣಿಕೆಗೆ ಒಪ್ಪದ ಸಾಲಗಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮರು ಹೊಂದಾಣಿಕೆಗೆ ಒಪ್ಪಿಗೆ ಸೂಚಿಸಿದಲ್ಲಿ ಕಾನೂನು ಕ್ರಮ ಕೈಬಿಡಲಾಗುವುದು. ಅಸಲು ಮರುಪಾವತಿ ಮಾಡಿದವರ ಬಡ್ಡಿ ಮನ್ನಾ ಅಥವಾ ರಿಯಾಯಿತಿಗೆ ಬ್ಯಾಂಕ್ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸುವುದಾಗಿ ಭರವಸೆ ನೀಡಿದರು.
ರೈತ ಸಂಘದ ಅಧ್ಯಕ್ಷ ಕೆ.ಸಿ. ಸತೀಶ್, ರೈತ ಮುಖಂಡ ನಿಲುಗುಳಿ ನಾಗರಾಜ್, ತುಪ್ಪೂರ್ ನಾರಾಯಣ್, ಗುರುಮೂರ್ತಿ ಮೊದಲಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.