ಚಿಕ್ಕಮಗಳೂರು

ಶಿಕ್ಷಣ, ಸ್ವಚ್ಛತೆ ಅರಿವು ಮೂಡಿಸಿ

Published On :

ಕ.ಪ್ರ.ವಾರ್ತೆ, ತರೀಕೆರೆ, ಮೇ 18
ಶಿಕ್ಷಣ ಮತ್ತು ಸ್ವಚ್ಛತೆಯ ಅರಿವು ಮೂಡಿಸಬೇಕೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಎಂ.ಡಿ. ಮಹೇಶ್ ತಿಳಿಸಿದ್ದಾರೆ.
ಯೋಜನೆ ವತಿಯಿಂದ ಭಾನುವಾರ ಕಚೇರಿ ಆವರಣದಲ್ಲಿ ಏರ್ಪಾಡಾಗಿದ್ದ ಜ್ಞಾನವಿಕಾಸ ಕಾರ್ಯಕರ್ತರ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಯೋಜನೆ ವತಿಯಿಂದ 25 ಜ್ಞಾನ ವಿಕಾಸ ಕೇಂದ್ರಗಳಿದ್ದು, ತರಬೇತಿ ಪಡೆದವರು ಪ್ರತಿ ಕೇಂದ್ರದಲ್ಲಿ ಐವತ್ತು ಸದಸ್ಯರಿಗೆ ಮಾಹಿತಿ ನೀಡಬೇಕು, ಆರೋಗ್ಯ ಶಿಕ್ಷಣ, ಸ್ವಚ್ಛತೆ, ರಕ್ತಹೀನತೆ ಇತ್ಯಾದಿಗಳನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಪೂರ್ಣ ಮಾಹಿತಿ ನೀಡಬೇಕು ಎಂದರು.
ಎಎಫ್‌ಎಸ್ ಶಾರಿಕಾ ಅವರು ಸಂಪನ್ಮೂಲ ವ್ಯಕ್ತಿಗಳ ಆಯ್ಕೆ ಕುರಿತು ಮಾತನಾಡಿ, ಸಂಪನ್ಮೂಲ ವ್ಯಕ್ತಿಯಾಗಿ ಆಯ್ಕೆಯಾಗುವರು ವಿಷಯ ತಜ್ಞರಾಗಿರಬೇಕು. ಉತ್ತಮ ಮಾತುಗಾರಿಕೆ ಹೊಂದಿರಬೇಕು. ಸ್ಥಳೀಯ ಭಾಷೆ ಬಲ್ಲವರಾಗಿರಬೇಕು ಎಂದರು.
ಡಿಎಫ್‌ಎಸ್ ಉಮೇಶ್ ಅವರು 2014- 15ನೇ ಸಾಲಿನ ಕ್ರೀಯಾಯೋಜನೆ ಕುರಿತು ಮಾತನಾಡಿ, ಕಾರ್ಯಕ್ರಮವನ್ನು ಹೇಗೆ ನಿಯೋಜಿಸಬೇಕು, ಎಷ್ಟು ಹಣ ಖರ್ಚು ಮಾಡಬೇಕು, ಯೋಜನೆಯ ಹಣ ಸದ್ವಿನಿಯೋಗವಾಗಬೇಕು ಎಂದು ತಿಳಿಸಿದರು. ಮಲ್ಲಮ್ಮ ಮಾತನಾಡಿದರು. ನಾಗರತ್ನ, ಜಯ್ಯಣ್ಣ, ಪುಟ್ಟಶಿವಪ್ಪ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.