20 ನಿಮಿಷ 20 ಸುದ್ದಿ
ಗುಲ್ಬರ್ಗ: ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕಗಳ ಸಂಯುಕ್ತಾಶ್ರಯದಲ್ಲಿ ಡಿಸಿ ಸಭಾ ಭವನದಲ್ಲಿ ಮೇ 26ರಂದು ಒಂದು ದಿನದ ಕಾರ್ಯಾಗಾರ ಆಯೋಜಿಸಿಸಿದೆ. ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆ ಪರಿಣಾಮಕಾರಿ ಅನುಷ್ಠಾನ ಸಾಮರ್ಥ್ಯಾಭಿವೃದ್ಧಿ ಮತ್ತು ಮೇಲ್ವಿಚಾರಣೆ ಕುರಿತು ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳದ ಅಧಿಕಾರಿಗಳು ಹಾಗೂ ಹೋಟೆಲ್, ರೆಸ್ಟೋರೆಂಟ್, ವಕೀಲರಿಗೆ ಈ ಕಾರ್ಯಾಗಾರ ಮೀಸಲಾಗಿದೆ. ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಉದ್ಘಾಟಿಸುವರು. ಉಪ ಪೊಲೀಸ್ ಅಧೀಕ್ಷಕ ಸವಿಶಂಕರ ನಾಯಕ, ಡಿಎಚ್ಒ ಡಾ. ಶಿವರಾಜ ಸಜ್ಜನಶೆಟ್ಟಿ, ಜಿಲ್ಲಾ ಶಸ್ತ್ರಜ್ಞೆ ಡಾ. ನಳಿನಿ ನಮೋಶಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ದುರಗೇಶ ಮಾಚನೂರು ಪ್ರಾಸ್ತಾವಿಕ ಭಾಷಣ ಮಾಡುವರು. ಮಾನಸಿಕ ತಜ್ಞ ಡಾ. ವಿಜಯೇಂದ್ರ ಅವರು ತಂಬಾಕು ಸೇವನೆ ಪ್ರಸ್ತುತ ಸ್ಥಿತಿಗತಿ ಹಾಗೂ ದುಷ್ಪರಿಣಾಮ, ರಾಜ್ಯ ತಂಬಾಕು ನಿಯಂತ್ರಣ ಘಟಕದ ಯೋಜನಾ ಸಂಯೋಜಕ ಪ್ರಭಾಕರ ಪೂಜಾರಿ ಅಧಿನಿಯಮ 2013ರ ಸೆಕ್ಷನ್ 4, 5, 6ಎ, 6ಬಿ ಮತ್ತು 7ರ ವಿವರಣೆ ನೀಡುವರು.
ತುರ್ತು ಕಾಮಗಾರಿ: ಹಲವೆಡೆ ವಿದ್ಯುತ್ ವ್ಯತ್ಯಯ ಇಂದು
ಗುಲ್ಬರ್ಗ: ರೇಲ್ವೆ ಇಲಾಖೆಯಿಂದ ತುರ್ತು ಕಾಮಗಾರಿ ಕೈಗೊಳ್ಳುವ ಪ್ರಯುಕ್ತ ನಗರದ 11 ಕೆ.ವಿ. ಐವಾನ್-ಇ-ಶಾಹಿ, ರಾಘವೇಂದ್ರ ಕಾಲೋನಿ ಫೀಡರ್ಗಳಿಂದ ವಿದ್ಯುತ್ ಸರಬರಾಜಾಗುವ ಬಡಾವಣೆಗಳಲ್ಲಿ ಮೇ 25ರಂದು ಬೆ.10ರಿಂದ ಸಂಜೆ 4ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಬಡಾವಣೆಗಳ ವಿವರ ಇಂತಿವೆ- ಹಳೆ ಗೆಸ್ಟ್ ಹೌಸ್, ನೀಚೆಗಲ್ಲಿ, ಕಮರ್ಸಿಯಲ್ ಟ್ಯಾಕ್ಸ್ ಕಚೇರಿ, ವಿಜಯ ವಿದ್ಯಾಲಯ, ಲಾಹೋಟಿ ಪೆಟ್ರೋಲ್ ಬಂಕ್, ಎಚ್ಕೆಇ ಕಚೇರಿ, ಏಶಿಯನ್ ಪ್ಲಾಜಾ, ಪರಿವಾರ ಹೋಟೆಲ್, ತಿಮ್ಮಾಪುರಿ ಚೌಕ್, ವಿ.ಜಿ ಮಹಿಳಾ ಕಾಲೇಜು. ರಾಘವೇಂದ್ರ ಕಾಲೋನಿ ಬಡಾವಣೆಗಳ ವಿವರ ಇಂತಿವೆ- ಎನ್.ವಿ ಶಾಲೆ, ಶರಣನಗರ, ಗೋವಾ ಹೋಟೇಲ್, ಬ್ರಹ್ಮಪೂರ, ಎಸ್.ಬಿ.ಟೆಂಪಲ್ ಏರಿಯಾ, ಕುಂಬಾರಗಲ್ಲಿ, ಮಹಾನಗರ ಪಾಲಿಕೆ ಕಚೇರಿ, ಸಂಗಮೇಶ್ವರ ಕಾಲೋನಿ, ಸುಭಾಷ ಚೌಕ ಮತ್ತು ಸೈನ್ಸ್ ಸೆಂಟರ್.
ಜಿಟಿಟಿಸಿ ಡಿಪ್ಲೋಮಾ ಕೋರ್ಸ್ಗೆ ಅರ್ಜಿ ಆಹ್ವಾನ
ಗುಲ್ಬರ್ಗ: ನಗರದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ಯಲ್ಲಿ ಜಾಬ್ ಓರಿಯಂಟೆಡ್ ಮತ್ತು ಪ್ರಾಕ್ಟೀಸ್ ಇಂಟಿಗ್ರೇಟೆಡ್ ಡಿಪ್ಲೋಮಾ ಇನ್ ಟೂಲ್ ಆಂಡ್ ಡೈ ಮೇಕಿಂಗ್, ಡಿಪ್ಲೋಮಾ ಇನ್ಪ್ರಿಸಿಷನ್ ಮ್ಯಾನುಫ್ಯಾಕ್ಚರಿಂಗ್, 1 ವರ್ಷದ ಕಂಪೋಸಿಟ್ ಮಷಿನಿಸ್ಟ್ ಮತ್ತು 2 ವರ್ಷದ ಟೂಲ್ ಆಂಡ್ ಡೈ ಟೆಕ್ನಿಷಿಯನ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಸ್ಸೆಸ್ಸೆಲ್ಸಿ ಪಾಸಾದ ಅಭ್ಯರ್ಥಿಗಳು ಮೇಲಿನ ಕೋರ್ಸ್ಗಳಿಗೆ ಪ್ರವೇಶ ಪಡೆಯಬಹುದು. ನಿಗದಿತ ಅರ್ಜಿ ಪಡೆದು ಭರ್ತಿ ಮಾಡಿ ಜೂ.4ರೊಳಗೆ ಸಲ್ಲಿಸಬೇಕು. ಆಯ್ಕೆಯನ್ನು ಸಂಪೂರ್ಣ ಮೆರಿಟ್ ಮತ್ತು ರೋಸ್ಟರ್ ಪದ್ಧತಿ ಆಧರಿಸಿದ್ದು, ಮಹಿಳಾ ಅಭ್ಯರ್ಥಿಗಳಿಗೆ ಶೇ. 30 ರಷ್ಟು ಸ್ಥಾನಗಳು ಮೀಸಲಿರಿಸಲಾಗಿದೆ. ಹೆಚ್ಚಿನ ಮಾಹಿತಿಗೆ ದೂ. 08472- 230084, 91416 30308 ನ್ನು ಸಂಪರ್ಕಿಸಲು ಕೋರಲಾಗಿದೆ.
ಸಿದ್ಧತಾ ಸಭೆ...
ಗುಲ್ಬರ್ಗದಲ್ಲಿ ಶನಿವಾರ ಮೇಲ್ಮನೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಶಿ ಪರವಾಗಿ ಸಿದ್ಧತೆ ಸಭೆ, ಕಾರ್ಯಕರ್ತರ ಸಭೆ ನಡೆಯಿತು. ಮಾಜಿ ಮಂತ್ರಿ ಲಕ್ಷ್ಮಣ ಸವದಿ, ನಮೋಶಿ ಸೇರಿದಂತೆ ಅನೇಕರು ಇದ್ದರು.
ಒಪ್ಪಂದದ ಆಧಾರದ ಮೇಲೆ ಹುದ್ದೆಗಳಿಗೆ ಅರ್ಜಿ ಆಹ್ವಾನ
ಗುಲ್ಬರ್ಗ: ಜಿಲ್ಲಾ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ 7 ತಾಲೂಕು ತಾಂತ್ರಿಕ ವ್ಯವಸ್ಥಾಪಕರ, 24 ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಮತ್ತು 1 ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆ ಸೇರಿದಂತೆ ಒಟ್ಟು 32 ಹುದ್ದೆಗಳನ್ನು ಒಪ್ಪಂದದ ಮೇಲೆ ಕಾರ್ಯನಿರ್ವಹಿಸಲು ಷರತ್ತಿಗೊಳಪಟ್ಟು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ವೆಬ್ಸೈಟ್ನಿಂದ ಅರ್ಜಿ ಪಡೆದು ಭರ್ತಿ ಮಾಡಿ ಅಂಚೆ ಮೂಲಕ ಸಲ್ಲಿಸಲು ಕೊನೆಯ ಮೇ 31. ಲಕೋಟೆ ಮೇಲೆ ಹುದ್ದೆಯ ಹೆಸರನ್ನು ನಮೂದಿಸಬೇಕು. ಮಾಹಿತಿಗೆ ಗುಲ್ಬರ್ಗ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಆತ್ಮ ಶಾಖೆ ಹಾಗೂ ಇಲಾಖೆಯ ವೆಬ್ಸೈಟ್ ಡಿಡಿಠಣಣ್ಠಛ್ಝಡಿಟ್ಝಡ್ಠಿಛ.್ಞಛ್ಠ.ಟ್ಝ್ಛಿ.್ಝಟಿ ಸಂಪರ್ಕಿಸುವಂತೆ ಜಿಪಂ ಸಿಇಒ ತಿಳಿಸಿದ್ದಾರೆ. ಈ ಹಿಂದೆ ಡಿ.6, 2013ರಂದು ನೇಮಕಾತಿ ಪ್ರಕಟಣೆ ರದ್ದಾಗಿರುವುದನ್ನು ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಕೋರಲಾಗಿದೆ.
ಕಲಾ ತಂಡದ ಗಣಕೀಕರಣ; ಮಾಹಿತಿ ಸಲ್ಲಿಸಲು ಸೂಚನೆ
ಗುಲ್ಬರ್ಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಿಲ್ಲೆಯ ವಿವಿಧ ಕಲಾ ಪ್ರಕಾರಗಳ ಕಲಾತಂಡಗಳಿಗೆ ಹಾಗೂ ಕಲಾವಿದರಿಗೆ ಕಾರ್ಯಕ್ರಮ ನೀಡುವ ಯೋಜನೆಯಿದ್ದು, ನೈಜ ಕಲಾವಿದರು ಮತ್ತು ಕಲಾ ತಂಡಕ್ಕೆ ಕಾರ್ಯಕ್ರಮ ಪ್ರಾಯೋಜಿಸಲು ಅನುಕೂಲವಾಗುವಂತೆ ಕಲಾವಿದರ ಮತ್ತು ಕಲಾ ತಂಡಗಳನ್ನು ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡು ಅದನ್ನು ಗಣಕೀಕರಣ ಮಾಡಲು ಯೋಜಿಸಿದೆ. ಆದ್ದರಿಂದ ಜಿಲ್ಲೆಯ ಕಲಾವಿದರು ಮತ್ತು ಕಲಾ ತಂಡಗಳು ಇಲಾಖೆಯಿಂದ ನೀಡಲಾಗುವ ನಿಗದಿತ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಕಲಾಪ್ರಕಾರ ವಿವರವಾದ ಮಾಹಿತಿಯನ್ನು ಸಲ್ಲಿಸಿ ನೋಂದಣಿ ಮಾಡಿಸಿಕೊಳ್ಳಲು ತಿಳಿಸಲಾಗಿದೆ ಎಂದು ಗುಲ್ಬರ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ದೂ. 08472- 227734ನ್ನು ಸಂಪರ್ಕಿಸಿ.
ಉದ್ಘಾಟನೆ...
ಗುಲ್ಬರ್ಗದ ವಾರ್ಡ್ 51ರ ಶಕ್ತಿನಗರ ಬಡಾವಣಿಗೆಯಲ್ಲಿ ಶೇ.22.75 ಅನುದಾನದಲ್ಲಿ ಸೂಮಾರು 15 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಾಗಾರಿಯನ್ನು ಪಾಲಿಕೆ ಸದಸ್ಯರಾದ ಹುಲಗೇಪ್ಪ ಕನಕಗಿರಿ ಉದ್ಘಾಟಿಸಿದರು. ವೀರೇಶ, ಮಹಾಂತೇಶ, ಸಂಜುಕುಮಾರ, ರಫೀಕ್ ಅಹಮ್ಮದ್ ಇದ್ದರು.
ಅಂಧರ ಪ್ರೌಢಶಾಲೆ ಪ್ರವೇಶಾತಿಗೆ ಅರ್ಜಿ ಆಹ್ವಾನ
ಗುಲ್ಬರ್ಗ: ಗುಲ್ಬರ್ಗ ಅಂಧ ಮಕ್ಕಳ ಸರ್ಕಾರಿ ಪ್ರೌಢಶಾಲೆಯಲ್ಲಿ 2014- 15ನೇ ಸಾಲಿಗೆ 1-10ನೇ ತರಗತಿಯವರೆಗೆ ವ್ಯಾಸಂಗ ಮಾಡಲು 6- 16 ವರ್ಷದವರೆಗಿನ ಅರ್ಹ ಅಂಧ ಬಾಲಕರಿಂದ ಅರ್ಜಿ ಆಹ್ವಾನಿಸಿದೆ. ಈ ಶಾಲೆಯಲ್ಲಿ ನುರಿತ ಅನುಭವವುಳ್ಳ ಬ್ರೈಲ್ ಶಿಕ್ಷಕರು ಸೇರಿದಂತೆ ವಿವಿಧ ವಿಷಯವಾರು ಶಿಕ್ಷಕರು ಇದ್ದು, ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣದೊಂದಿಗೆ ವಸತಿ, ಊಟ, ವೈದ್ಯಕೀಯ ಸೌಲಭ್ಯ, ಸಮವಸ್ತ್ರ, ಪಠ್ಯಪುಸ್ತಕ, ಮತ್ತು ಇತರೆ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗವುದು. ಪ್ರವೇಶವನ್ನು ಜೂ.1ರಿಂದ ಜು.15ರವರೆಗೆ ನಡೆಯಲಿದೆ. ವಿದ್ಯಾರ್ಥಿಗಳು 4 ಭಾವಚಿತ್ರ, ಜಾತಿ ಪ್ರಮಾಣಪತ್ರ ಮತ್ತು ಅಂಗವಿಕಲ ವೈದ್ಯಕೀಯ ಪ್ರಮಾಣಪತ್ರದೊಂದಿಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ಅಂಧ ಬಾಲಕರ ಸರ್ಕಾರಿ ಪ್ರೌಢಶಾಲೆ ಅಧೀಕ್ಷಕರು ತಿಳಿಸಿದ್ದಾರೆ.
ಎನ್ಟಿಟಿಎಫ್ ತರಬೇತಿ ಆಯ್ಕೆ 27ರಂದು ಸಂದರ್ಶನ
ಗುಲ್ಬರ್ಗ: ಬೆಂಗಳೂರಿನ ಎನ್ಟಿಟಿಎಫ್ ಕಂಪನಿಯು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಉತ್ತೀರ್ಣ ಹಾಗೂ ಅನುತ್ತೀರ್ಣರಾದವರಿಗೆ ಎರಡು ವರ್ಷಗಳ ಅವಧಿಯ ಎನ್ಟಿಟಿಎಫ್ ಟ್ರೇನಿಂಗ್ ಪ್ರೋಗ್ರಾಂ ಕುರಿತು ತರಬೇತಿ ನೀಡಲು ಮೇ 27ರಂದು ಗುಲ್ಬರ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಸಂದರ್ಶನದ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. 18-21 ವಯೋವಾನದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಉತ್ತೀರ್ಣ ಹಾಗೂ ಅನುತ್ತೀರ್ಣರಾದವರೂ ಸಂದರ್ಶನಕ್ಕೆ ಹಾಜರಾಗಬಹುದು. ತರಬೇತಿಯಲ್ಲಿ 5000- 8000ವರೆಗೆ ಸ್ಟೇಫಂಡ್ ನೀಡಲಾಗುವುದು. ಅಭ್ಯರ್ಥಿಗಳು ಮೇ 22ರಿಂದ ತಮ್ಮ ಹೆಸರನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೋಂದಾಯಿಸಲು ಕೋರಲಾಗಿದೆ. ಮಾಹಿತಿಗೆ (ಮೊ.9945496784, 9620369964)ಸಂಪರ್ಕಿಸಿ.
ಇಟಗಾ ಗ್ರಾಮದಲ್ಲಿ ಬೇಸಿಗೆ ತರಬೇತಿ ಶಿಬಿರ ಮುಕ್ತಾಯ
ಚಿತ್ತಾಪುರ: ಪಾಲಕರು ಮಕ್ಕಳಿಗೆ ಶಿಕ್ಷಣ ನೀಡಿದರೆ ಅವರು ದೇಶದ ಭಾವಿ ಪ್ರಜೆಯಾಗಿ ದೇಶದ ಆರ್ಥಿಕ, ಸಾಮಾಜಿಕ ಹಾಗೂ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂದು ಗಂಗಾಪರಮೇಶ್ವರಿ ಬಿಇಡಿ ಕಾಲೇಜಿನ ಪ್ರಾಂಶುಪಾಲ ವಿಜಯಕುಮಾರ ಬಿರಾದಾರ ಹೇಳಿದರು. ತಾಲೂಕಿನ ಇಟಗಾ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಬೇಸಿಗೆ ತರಬೇತಿ ಶಿಬಿರ ಸಮಾರೋಪ ಸಮಾರಂಭದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಮಕ್ಕಳಿಗೆ ಶಿಕ್ಷಣ ಕಡ್ಡಾಯವಾಗಿ ನೀಡಬೇಕು. ಮಕ್ಕಳೇ ಮುಂದಿನ ಆಸ್ತಿ ಎಂದು ಭಾವಿಸಿ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂದು ಕರೆ ನೀಡಿದರು. ಕಲಾವಿದ ಉದಯಕುಮಾರ ಸಾಗರ, ಪತ್ರಕರ್ತ ಕಾಶಿನಾಥ ಗುತ್ತೆದಾರ, ಪ್ರಾಂಶುಪಾಲ ನಾಗರಾಜ ಕಾಮಾ, ಸಾಹೇಬಗೌಡ, ತಮ್ಮಣ್ಣ ಡಿಗ್ಗಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ನಾಗೇಂದ್ರ ಡಿಗ್ಗಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ, ಜಯ ಕರ್ನಾಟಕ ತಾಲೂಕು ಅಧ್ಯಕ್ಷ ವೀರೇಶ ಪಾಟೀಲ್, ದಯಾನಂದ ಪಾಟೀಲ್, ಮುರಳೀಧರ, ಸಿದ್ದಣಗೌಡ ಮಾಲಿಪಾಟೀಲ್ ತಿಪ್ಪಣ್ಣ ತಳಪತಿ, ನಾಗೇಂದ್ರ ವೈ.ಡಿಗ್ಗಿ, ಸುಬ್ಬಣ್ಣ ಕುಂಬಾರ, ಶರಣಪ್ಪ ಸಾಲಹಳ್ಳಿ, ದೇವಿಂದ್ರ, ಹಣಮಂತ, ರೇವಪ್ಪ ವೇದಿಕೆಯಲ್ಲಿದ್ದರು.
ಉದ್ಯೋಗ ಮೇಳಕ್ಕೆ 27ರಂದು ಚಾಲನೆ
ಗುಲ್ಬರ್ಗ: ಗುಲ್ಬರ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಸಹಯೋಗದಲ್ಲಿ ಮೇ 27ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 5ರವರೆಗೆ ಗುಲ್ಬರ್ಗದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. 10ನೇ, 12ನೇ ತರಗತಿ ಪಾಸಾದ ಹಾಗೂ ಎಲ್ಲಾ ಪದವೀಧರರು, ಐಟಿಐ ಮತ್ತು ಡಿಪ್ಲೋಮಾ ಹಾಗೂ ಕಂಪ್ಯೂಟರ್ ಕೌಶಲ್ಯ ತರಬೇತಿ ಪಡೆದುಕೊಂಡ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ರೇವಣಸಿದ್ದಯ್ಯ ಎಸ್. ನೀಲಾ, ಬಿಸನಸ್ ಡೆವಲೆಪಮೆಂಟ್ ಆಫೀಸರ್ ಅವರ ಮೊ. 9945496784, 9620369964 ಹಾಗೂ ದೂ.ಸಂ.08472- 274846 ಸಂಪರ್ಕಿಸಲು ಸೂಚಿಸಲಾಗಿದೆ.
ಅಲ್ಪಸಂಖ್ಯಾತರ ನಿಗಮದಿಂದ ಸೌಲ ಸೌಲಭ್ಯಕ್ಕೆ ಅರ್ಜಿ ಕರೆ
ಗುಲ್ಬರ್ಗ: ಗುಲ್ಬರ್ಗದ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತವು ಜಿಲ್ಲೆಯ ಮತೀಯ ಅಲ್ಪಸಂಖ್ಯಾತರು ವಿವಿಧ ಸಾಲ ಸೌಲಭ್ಯ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಮತೀಯ ಅಲ್ಪಸಂಖ್ಯಾತರಿಗಾಗಿ ಯೋಜನೆಗಳು- ಸ್ವಾವಲಂಬನಾ, ಅರಿವು ಸಾಲ ಯೋಜನೆ, ಶ್ರಮಶಕ್ತಿ ಸಾಲ ಯೋಜನೆ, ಮೈಕ್ರೋ ಸಾಲ ಯೋಜನೆ, ಗಂಗಾ ಕಲ್ಯಾಣ ಯೋಜನೆ ಮತ್ತು ಮನೆ ಕಟ್ಟಡ ಬಡ್ಡಿ ಸಹಾಯಧನ ಯೋಜನೆ. ಕ್ರೈಸ್ತ ಸಮುದಾಯದ ಯೋಜನೆಗಳ- ಅರಿವು ಸಾಲ ಯೋಜನೆ, ಶ್ರಮಶಕ್ತಿ ಸಾಲ ಯೋಜನೆ, ಮೈಕ್ರೋ ಸಾಲ ಯೋಜನೆ ಮತ್ತು ಮನೆ ಕಟ್ಟಡ ಬಡ್ಡಿ ಸಹಾಯಧನ ಯೋಜನೆ. ಮೇಲಿನ ಸಾಲ ಸೌಲಭ್ಯ ಯೋಜನೆ ಪಡೆಯಲು ಇಚ್ಛಿಸುವವರು ಇಲಾಖೆಯ ವೆಬಣಸೈಟ್ ಢಿಢಿಢಿ.್ಞಟಜ್ಛ.್ಝಟಿ ನಲ್ಲಿ ಆನ್ಲೈನ್ ಅರ್ಜಿಯನ್ನು ಜೂ.21ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯ ಒಂದು ಪ್ರತಿಯನ್ನು ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ, ಮನೆ.ಸಂ. 10-03-96 10-3-96 ಎನ್.ವಿ.ಕಾಂಪ್ಲೆಕ್ಸ್, ನಿಷ್ಠಿ ಯಮಹಾ ಶೋ ರೂಂ ಹಿಂದುಗಡೆ, ವಿಠ್ಠಲ ನಗರ ಗುಲ್ಬರ್ಗಇವರಿಗೆ ಸಲ್ಲಿಸಬೇಕು.
ಜ್ಯೋತಿ ಬೆಳಗಿ ಚಾಲನೆ..
ಇಟಗಾ ಗ್ರಾಮದಲ್ಲಿ ಹಮ್ಮಿಕೊಂಡ ಸ್ವಾಮಿ ವಿವೇಕಾನಂದ ಬೇಸಿಗೆ ತರಬೇತಿ ಶಿಬಿರದ ಮುಕ್ತಾಯ ಸಮಾರಂಭವನ್ನು ಗಂಗಾ ಪರಮೇಶ್ವರಿ ಬಿಇಡಿ ಕಾಲೇಜಿನ ಪ್ರಾಂಶುಪಾಲ ವಿಜಯಕುಮಾರ ಬಿರಾದಾರ ಉದ್ಘಾಟಿಸಿದರು.
ಸಂಯೋಜನೆ ನಂತರವೇ ಪ್ರವೇಶ ತೆಗೆದುಕೊಳ್ಳಿ
ಗುಲ್ಬರ್ಗ: ಎಸ್ಸಿವಿಟಿಯಡಿ ಅಭ್ಯರ್ಥಿಗಳು ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿಗೆ ಪ್ರವೇಶ ಪಡೆದ ನಂತರ ಸಂಯೋಜನೆ ಪಡೆದು ಪರೀಕ್ಷೆಗೆ ಅರ್ಜಿ ಸಲ್ಲಿಸುತ್ತಿರುವುದು ಕಂಡು ಬರುತ್ತಿದೆ. ಸರ್ಕಾರಿ ಮತ್ತು ಖಾಸಗಿ ಕೈಗಾರಿಕೆ ತರಬೇತಿ ಸಂಸ್ಥೆಗಳಲ್ಲಿ ಎಸ್ಸಿವಿಟಿಯಡಿ ಮುಂಬರುವ ಪರೀಕ್ಷೆಗೆ ಸಂಬಂಧಿಸಿದಂತೆ ಸಂಯೋಜನೆ ಪಡೆದ ನಂತರವೇ ಅಭ್ಯರ್ಥಿಗಳು ಪ್ರವೇಶ ಮಾಡಿಕೊಳ್ಳತಕ್ಕದ್ದು. ಮುಂಬರುವ ವರ್ಷಗಳಲ್ಲಿ ನಿಗದಿತ ಸಮಯದಲ್ಲಿ ಪ್ರಕ್ರಿಯೆ ಜರುಗಿಸಲಾಗುವುದು. ಪ್ರವೇಶ ಪಡೆದ ನಂತರ ಸಂಯೋಜನೆ ಪಡೆದರೆ ಪರೀಕ್ಷೆಗೆ ಅನುಮತಿಸಲಾಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಮುನ್ನ ಸಂಸ್ಥೆಯ ಸಂಯೋಜನೆ ಪಡೆದಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕೆಂದು ಉದ್ಯೋಗ ಮತ್ತು ತರಬೇತಿ ಇಲಾಖೆ ಗುಲ್ಬರ್ಗ ವಿಭಾಗೀಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಬಿದಾಯಿ ಯೋಜನೆ ಜಾಗೃತಿ ಕಾರ್ಯಕ್ರಮಕ್ಕೆ ಸಂಹಿತೆ ಅಡ್ಡಿ
ಗುಲ್ಬರ್ಗ: ಪೌರಾಡಳಿತ, ಸಾರ್ವಜನಿಕ ಉದ್ದಿಮೆಗಳು ಹಾಗೂ ಅಲ್ಪಸಂಖ್ಯಾತರ ಮತ್ತು ವಕ್ಫ್ ಸಚಿವರಾದ ಡಾ. ಖಮರುಲ್ ಇಸ್ಲಾಂ ಅವರು ಮೇ 24ರಂದು ಬೆಳಗ್ಗೆ 11 ಗಂಟೆಗೆ ಗುಲ್ಬರ್ಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ವಿಭಾಗೀಯ ಮಟ್ಟದ ಮೆಟ್ರಿಕ್ ಪೂರ್ವ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಬಿದಾಯಿ ಸಾಫ್ಟ್ವೇರ್ ಉದ್ಘಾಟಿಸುವವರಿದ್ದರು. ಆದರೆ ಈಶಾನ್ಯ ಶಿಕ್ಷಕ ಮತಕ್ಷೇತ್ರದ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಸಚಿವರು ಸಮಾರಂಭಕ್ಕೆ ಬರಲೇ ಇಲ್ಲ. ಇದೇ ಕಾರಣದಿಂದ ಬಿದಾಯಿ ಸಾಫ್ಟ್ವೇರ್ ಚಾಲನೆ ಸಮಾರಂಭವೇ ರದ್ದಾಯ್ತು. ಪಾಲ್ಗೊಂಡಿದ್ದವರಲ್ಲಿ ನಿರಾಶೆ ಆವರಿಸಿತ್ತು. ಆದರೆ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ. ಪ್ರಸಾದ್ ಅವರು ದೀಪ ಬೆಳಗಿಸಿ ಚಾಲನೆ ನೀಡಿದರು.
ಚಾಲನೆ...
ಗುಲ್ಬರ್ಗ ಮುಖ್ಯರಸ್ತೆ ಸುಧಾರಣೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಚಾಲನೆ ನೀಡಿದರು. ಮೇಯರ್, ಉಪ ಮೇಯರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇಂದು ನರರೋಗ ಸಂಬಂಧಿತ ನೇರ ಪ್ರಸಾರ
ಗುಲ್ಬರ್ಗ: ಇನ್ ಮ್ಯೂಸಿಕ್ ಚಾನಲ್ನಲ್ಲಿ ಮೇ 25ರಂದು ಭಾನುವಾರ ಬೆಳಗ್ಗೆ 11 ಗಂಟೆಯಿಂದ 12 ಗಂಟೆವರೆಗೆ ನರರೋಗ ಸಂಬಂಧಿತ ನೇರ ಪ್ರಸಾರಗೊಳ್ಳಲಿದೆ ಎಂದು ಇನ್ ಗುಲ್ಬರ್ಗ ವಾಹಿನಿಯ ವ್ಯವಸ್ಥಾಪಕರು ತಿಳಿಸಿದ್ದಾರೆ. ಚಿರಾಯು ಆಸ್ಪತ್ರೆಯ ಖ್ಯಾತ ನರರೋಗ ತಜ್ಞ ಡಾ. ಶರಣಗೌಡ ಪಾಟೀಲ್ ನರರೋಗ ಸಮಸ್ಯೆಗಳ ಪ್ರಶ್ನೆಗೆ ಉತ್ತರಿಸಲಿದ್ದಾರೆ. ಮಾಹಿತಿಗೆ 81231- 22222ಗೆ ಸಂಪರ್ಕಿಸಬಹುದು.
ತರಿತಾಂಡಾದಲ್ಲಿ ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ: ಗುಲ್ಬರ್ಗ: ಮಾಡಬೂಳ ಪೊಲೀಸ್ ಠಾಣೆ ವ್ಯಾಪ್ತಿಯ ತರಿತಾಂಡಾದಲ್ಲಿ ಸುಮಾರು 25ರಿಂದ 30 ವರ್ಷ ವಯೋವಾನದ ವ್ಯಕ್ತಿಯೊಬ್ಬ ಮೇ 14ರಂದು ಬೇವಿನ ಮರದ ಕೆಳಗೆ ಮಲಗಿಕೊಂಡಿದ್ದು ಮೃತಪಟ್ಟಿರುತ್ತಾನೆ. ಅವರ ಹೆಸರು ವಿಳಾಸ ಯಾವುದೂ ತಿಳಿದು ಬಂದಿಲ್ಲ. ವ್ಯಕ್ತಿಯ ಭಾವಚಿತ್ರವನ್ನು ಪರಿಶೀಲಿಸಿ ಸಂಬಂಧಿಕರು ಯಾರಾದರೂ ಇದ್ದಲ್ಲಿ ಮಾಡಬೂಳ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ. ದೂ. 81976 66147, 94808 03570, ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಸಂಖ್ಯೆ 94808 03542, ಪೊಲೀಸ್ ಉಪಾಧೀಕ್ಷಕರ ಕಚೇರಿ ಸಂಖ್ಯೆ 9480803525ನ್ನು ಸಂಪರ್ಕಿಸಲು ಕೋರಲಾಗಿದೆ.
ಗುಂಡಳ್ಳಿ: ಜಗಜೀವನರಾಂ ನಾಮಫಲಕ ಅನಾವರಣ
ಶಹಾಪುರ: ತಾಲೂಕಿನ ಗುಂಡಳ್ಳಿ ಗ್ರಾಮದಲ್ಲಿ ಡಾ. ಬಾಬುಜಗಜೀವನರಾಮ ಅವರ ನಾಮಫಲಕ ಅನಾವರಣ ಹಾಗೂ ಜಯಂತಿ ಕಾರ್ಯಕ್ರಮ ನೆರವೇರಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ತಾಪಂ ಉಪಾಧ್ಯಕ್ಷರಾದ ಯಂಕಮ್ಮ ಚಂದ್ರಶೇಖರ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ತಾಪಂ ಮಾಜಿ ಉಪಾಧ್ಯಕ್ಷ ಗುರಣ್ಣಗೌಡ ಧ್ವಜಾರೋಹಣ ನೆರವೇರಿಸಿದರು. ಖಾನಾಪುರ ಗ್ರಾಪಂ ಅಧ್ಯಕ್ಷ ರಾಜಕುಮಾರ ಹೊರಮನಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕಾ ಮಾದಿಗ ದಂಡೋರಾ ಹೋರಾಟ ಸಮಿತಿಯ ಸಿದ್ದಪ್ಪ ಎಸ್. ದೇವರಗೋನಾಳ ಉಪಸ್ಥಿತರಿದ್ದರು. ದಾವಸಾಬ ನದಾಫ್ ಗುಂಡಳ್ಳಿ, ಅಯ್ಯಪ್ಪ ಮಾರಡಿಗಿ ಇದ್ದರು. ಇದೇ ಸಂದರ್ಭದಲ್ಲಿ ಗುಂಡಳ್ಳಿ ಗ್ರಾಮ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪದಾಧಿಕಾರಿಗಳ ವಿವರ: ಅಧ್ಯಕ್ಷರಾಗಿ ದೊಡ್ಡ ಭೀಮರಾಯ ಪುಟ್ಟೆಗೆನೋರ, ಉಪಾಧ್ಯಕ್ಷರಾಗಿ ಬಸವರಾಜ ಬುದ್ದಿವಂತ, ಪ್ರ. ಕಾರ್ಯದರ್ಶಿಯಾಗಿ ಮರಿಲಿಂಗ ಪುಟ್ಟೆಗೆನೋರ, ಸಹ ಕಾರ್ಯದರ್ಶಿಯಾಗಿ ಸುಧಾಕರ ಹೆಡಗಿಮದ್ರಿ, ಖಜಾಂಚಿಯಾಗಿ ಮರೆಪ್ಪ ಪುಟ್ಟೆಗೆನೋರ, ಕಾರ್ಯ ಸಮಿತಿ ಸದಸ್ಯರಾಗಿ ನರಸಪ್ಪ, ಚಂದಪ್ಪ ಆಯ್ಕೆಯಾಗಿದ್ದಾರೆ.
ಮಂಡಗಳ್ಳಿ ಶಾಲೆ ರಸ್ತೆಯಲ್ಲಿ ಚರಂಡಿ ನೀರು
ಶಹಾಪುರ: ಹತ್ತಿಗೂಡೂರ ಗ್ರಾಪಂ ವ್ಯಾಪ್ತಿಗೆ ಒಳಪಡುವ ಮಂಡಗಳ್ಳಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಇಲ್ಲಿ ಸುವ್ಯವಸ್ಥೆಯ ಚರಂಡಿಗಳಿಲ್ಲ. ಸಮರ್ಪಕವಾದ ರಸ್ತೆಗಳಿಲ್ಲ. ಕೊಳಚೆ ನೀರು ಮನೆ ಅಂಗಳದಲ್ಲಿ, ರಸ್ತೆಯಲ್ಲಿ ಹರಿಯುತ್ತ ದುರ್ವಾಸನೆ ಬೀರುತ್ತಿದೆ. ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದರೂ ಹಳ್ಳಿಗಳ ಸ್ಥಿತಿ ಹದಗೆಟ್ಟಿದೆ. ಕೋಟ್ಯಾಂತರ ರೂ.ಗಳ ಅನುದಾನ ಸದ್ಬಳಕೆಯಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದ್ದು ಶಾಲೆಯಲ್ಲಿ ನೂರಾರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಾರೆ. ಮಕ್ಕಳು Ú ಶಾಲೆಗೆ ತಲುಪುವ ರಸ್ತೆಯ ತುಂಬಾ ಕೊಳಚೆ ನೀರು ಮಡುಗಟ್ಟಿ ನಿಂತಿದೆ. ಶಾಲಾ ದಿನಗಳಲ್ಲಿ ಮಕ್ಕಳು ಶಾಲೆಗೆ ಹೋಗುವುದೇ ದುಸ್ತರವಾಗಿದೆ. ಗ್ರಾಪಂ, ಆಡಳಿತ ರಸ್ತೆಯನ್ನು ಸುಗಮಗೊಳಿಸಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

