ಭಗವದ್ಭಕ್ತಿಯಿಂದ ಸಂತೃಪ್ತಿ ಸಾಧ್ಯ: ಶೃಂಗೇರಿ ಶ್ರೀ
ಶೃಂಗೇರಿ; ಪ್ರತಿಯೊಬ್ಬರಿಗೂ ಭಗವಂತನಲ್ಲಿ ಅಚಲ ನಂಬಿಕೆ, ಶುದ್ಧಭಕ್ತಿ ಇರಬೇಕು. ಇದರಿಂದ ಜೀವನದಲ್ಲಿ ಸಂತೃಪ್ತಿ ಪ್ರಾಪ್ತಿಯಾಗುತ್ತದೆ ಎಂದು ಜಗದ್ಗುರು ಭಾರತೀ ತೀರ್ಥರುತಿಳಿಸಿದರು.
ಅವರು ಮಠದ ಗುರುಭವನದಲ್ಲಿ ಕೆ.ಜಿ. ಗಣೇಶ್ ಭಟ್ ವಿರಚಿತ ಪರ್ಜನ್ಯಕಲ್ಪ ಗ್ರಂಥ ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು.
ನಾಡಿನಲ್ಲಿ ಮಳೆಯಿಲ್ಲದೇ ಅನಾವೃಷ್ಟಿ ಉಂಟಾದ ಸಂದರ್ಭದಲ್ಲಿ ಪರ್ಜನ್ಯ ಜಪ, ಹೋಮಗಳ ಮೂಲಕ ಭಗವಂತನ ಆರಾಧನೆ ಮಾಡಬೇಕು ಎಂಬುದು ಸರ್ವವಿದಿತವಾಗಿದೆ.
ಋಷಿ ಪ್ರಣೀತವಾದ ವಿಧಿವಿಧಾನಗಳ ಮುಖೇನ ದೇವತಾರಾಧನೆ ಕೈಗೊಂಡಲ್ಲಿ ಭಗವಂತ ಸಂಪ್ರೀತಗೊಳ್ಳುತ್ತಾನೆ. ಲೋಕಕಲ್ಯಾಣ ಬಯಸುವ ಋತ್ವಿಜ ಸಮೂಹಕ್ಕೆ ಅನುಕೂಲವಾಗಲಿ ಎಂಬ ಆಶಯದೊಂದಿಗೆ ಗಣೇಶ ಭಟ್ಟರು ರಚಿಸಿದ ಗ್ರಂಥ ಅತ್ಯಂತ ಉಪಯುಕ್ತವಾದುದು. ಈ ಗ್ರಂಥವು ಧಾರ್ಮಿಕ ವಿಧಿ ಕೈಗೊಳ್ಳುವ ಋತ್ವಿಜರಿಗೆ ಮಾರ್ಗದರ್ಶಕವಾಗಲಿ ಎಂದು ಹಾರೈಸಿದರು.
ಗ್ರಂಥ ಕತೃ ಗಣೇಶ್ ಭಟ್ ಮಾತನಾಡಿ, ಪರ್ಜನ್ಯಕಲ್ಪ ಪುಸ್ತಕದಲ್ಲಿ ಒಟ್ಟು 9 ವಿಧದ ಪ್ರಯೋಗಗಳನ್ನು ಉಲ್ಲೇಖಿಸಲಾಗಿದೆ. ಶೌನಕೀಯ ಪರ್ಜನ್ಯ ಶಾಂತಿ, ಭೋಧಾಯನೀಯ ಪರ್ಜನ್ಯಶಾಂತಿ, ಋಗ್ವಿಧಾನೀಯ ಪರ್ಜನ್ಯಶಾಂತಿ, ವೈಭಾಯನೀಯ ಪರ್ಜನ್ಯಶಾಂತಿ ಮುಂತಾದವುಗಳ ವಿಧಿವಿಧಾನಗಳ ಪ್ರಯೋಗಗಳನ್ನು ಪುಸ್ತಕ ಒಳಗೊಂಡಿದೆ ಎಂದವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

