ಎಡಿಜಿಪಿ ರವೀಂದ್ರನಾಥ್ ಪ್ರಕರಣ: ನ್ಯಾಯಾಂಗ ತನಿಖೆಗೆ ಆಗ್ರಹ
ಕ.ಪ್ರ.ವಾರ್ತೆ , ಚಿಕ್ಕಮಗಳೂರು , ಮೇ 29
ಕೆಎಸ್ಆರ್ಪಿ ಎಡಿಜಿಪಿ ಪಿ. ರವೀಂದ್ರನಾಥ್ ಅವರು ಮಹಿಳೆಯೊಬ್ಬರ ಫೋಟೊ ಕ್ಲಿಕ್ಕಿಸಿದ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ನಗರ ಬಿಜೆಪಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರು ಆಗ್ರಹಿಸಿದ್ದಾರೆ.
ಪಿ. ರವೀಂದ್ರನಾಥ್ ಅವರು ಎಲ್ಲಾ ಸುದ್ದಿ ಮಾಧ್ಯಮದಲ್ಲೂ ತಾನು ನಿರಪರಾಧಿ ಎಂದು ಘಂಟಾಘೋಷವಾಗಿ ಹೇಳುತ್ತಾ ಬಂದಿದ್ದು, ಓರ್ವ ಐಪಿಎಸ್ ಅಧಿಕಾರಿಯನ್ನು ಸಬ್ ಇನ್ಸ್ಪೆಕ್ಟರ್ ಒಬ್ಬರು ಆರೋಪಿ ಸ್ಥಾನದಲ್ಲಿ ಕೂರಿಸುವುದು ರಾಜ್ಯ ಸರ್ಕಾರದ ನಿಷ್ಕಾಳಜಿತನ ಕಂಡುಬರುತ್ತದೆ.
ರವೀಂದ್ರನಾಥ ಅವರು ಒಳ್ಳೆಯ ಅಧಿಕಾರಿ ಎಂದು ಕೆಎಸ್ಆರ್ಪಿ ಪೇದೆಗಳು ಹಾಗೂ ಅವರ ಕುಟುಂಬ ವರ್ಗದವರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ.
ಸದರಿ ಹಿರಿಯ ಅಧಿಕಾರಿಗೆ ಕೇಂದ್ರ ಸರ್ಕಾರದಿಂದ ಒಳ್ಳೆಯ ಕೆಲಸಕ್ಕಾಗಿ ಪುರಸ್ಕಾರ ಸಿಕ್ಕಿದ್ದು, ಇಂತಹ ವ್ಯಕ್ತಿಯ ವಿರುದ್ಧ ಗೃಹ ಸಚಿವರು ವರ್ಗಾವಣೆ ಆದೇಶ ಮಾಡದೇ ಸ್ಥಳಕ್ಕೆ ಹೋಗಿ ಘಟನೆ ಸಂಬಂಧಪಟ್ಟಂತೆ ತಿಳಿದುಕೊಳ್ಳಬಹುದಾಗಿತ್ತು. ಇಲ್ಲವೇ ತಮ್ಮ ಪರವಾಗಿ ಸತ್ಯಾಂಶ ತಿಳಿದುಕೊಳ್ಳಲು ಯಾರನ್ನಾದರೂ ಕಳುಹಿಸಬಹುದಾಗಿತ್ತು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪೊಲೀಸರ ನಡುವೆಯೇ ದೂರುಗಳು ಇರುವುದರಿಂದ ಪೊಲೀಸರಿಂದ ತನಿಖೆ ನಡೆಸಿದಲ್ಲಿ ಯಾವುದೇ ಸತ್ಯಾಂಶ ಹೊರಬೀಳುವುದಿಲ್ಲ. ಪ್ರಕರಣದ ಸಂಪೂರ್ಣ ಭಾಗವನ್ನು ನೋಡಿದಾಗ ಒಂದು ಸಣ್ಣ ವಿಚಾರ ಅತಿರೇಕಕ್ಕೆ ಹೋಗಿರುವುದು ಸ್ಪಷ್ಟವಾಗಿರುತ್ತದೆ. ಸ್ವತಃ ರವೀಂದ್ರನಾಥರವರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದು, ಮಾಧ್ಯಮದಲ್ಲಿ ತನ್ನನ್ನು ಬಂಧಿಸಲಿ, ಸೂಕ್ತ ತನಿಖೆ ನಡೆಸಲಿ ಎಂದು ಹೇಳುತ್ತಿರುವುದನ್ನು ನೋಡಿದಲ್ಲಿ ಅವರು ಸತ್ಯ ತಿಳಿಸುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ಇಲ್ಲಿ ಸತ್ಯಾಂಶ ತಿಳಿದುಕೊಳ್ಳಲು ಅನೇಕ ದಿನಗಳು ಬೇಕಾಗಿಲ್ಲ. ಆದರೆ, ಕಾಲ ತಳ್ಳುವ ಉದ್ದೇಶಕ್ಕಾಗಿ ರಾಜ್ಯ ಸರ್ಕಾರವೂ ರವೀಂದ್ರನಾಥ ಅವರನ್ನು ವರ್ಗಾವಣೆಗೊಳಿಸಿ ಯಾವುದೇ ಸ್ಥಳ ತೋರಿಸದೆ ರಜೆಯ ಮೇಲೆ ತೆರಳಲು ಸೂಚಿಸಿರುವುದು ಅವಮಾನೀಯ ಘಟನೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

