ಚಿತ್ರದುರ್ಗ

ದುರ್ಗ: ಜೆಡಿಎಸ್ ದೊಡ್ಡ ಪಕ್ಷ

Published On :

ಚಿತ್ರದುರ್ಗ: ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಚಿತ್ರದುರ್ಗ ನಗರಸಭೆಯ 35 ವಾರ್ಡ್ ಗಳಲ್ಲಿ  ಜೆಡಿಎಸ್ 16 ಸ್ಥಾನ, ಕಾಂಗ್ರೆಸ್ 7, ಬಿಎಸ್‌ಆರ್ 4, ಕೆಜೆಪಿ 2, ಪಕ್ಷೇತರರಾಗಿ 6 ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.
 1 ನೇ ವಾರ್ಡ್ ಜಿ. ಮಹೇಶ್(ಜೆಡಿಎಸ್), 2 ನೇ ವಾರ್ಡ್ ಟಿ. ರಾಜೇಶ್ (ಪಕ್ಷೇತರ), 3 ನೇ ವಾರ್ಡ್  ವೆಂಕಟೇಶ್ (ಕಾಂಗ್ರೆಸ್), 4. ಎಸ್. ಚಂದ್ರಶೇಖರ್ (ಜೆಡಿಎಸ್), 5. ಎಚ್.ಕೆ. ಖಾದರ್ ಖಾನ್ (ಜೆಡಿಎಸ್), 6. ಡಿ. ಮಲ್ಲಿಕಾರ್ಜುನ (ಪಕ್ಷೇತರ), 7. ಮಲ್ಲಿಕಾರ್ಜುನ ಎಸ್.ಬಿ.ಎಲ್. (ಜೆಡಿಎಸ್). 8ರಲ್ಲಿ  ಎಚ್.ಎನ್. ಮಂಜುನಾಥ ಗೊಪ್ಪೆ (ಕಾಂಗ್ರೆಸ್), 9 ರಲ್ಲಿ ಎಲ್. ಛಾಯಾ ತಕ್ಕಡಿ ಸುರೇಶ್ (ಜೆಡಿಎಸ್),
10 ನೇ ವಾರ್ಡ್‌ನಲ್ಲಿ: ಮಹಾದೇವಿ ಲೋಕೇಶ್ (ಜೆಡಿಎಸ್), 11 ರಲ್ಲಿ ಟಿ. ರತ್ನಮ್ಮ ಜೆಡಿಎಸ್, 12 ರಲ್ಲಿ ಶಕೀಲ ಬಾನು, ಕಾಂಗ್ರೆಸ್, 13 ರಲ್ಲಿ ಎನ್.ಓ. ಅನುರಾಧ ರವಿಕುಮಾರ ಬಿಎಸ್‌ಆರ್, 14 ರಲ್ಲಿ ರವೀಜ ಬಾನು ಕಾಂಗ್ರೆಸ್, 15 ರಲ್ಲಿ ಭೀಮರಾಜು ಎಚ್. ಕೆಜೆಪಿ, 16 ರಲ್ಲಿ ಬಿ. ಕಾಂತರಾಜು ಜೆಡಿಎಸ್, 17 ರಲ್ಲಿ ಎಚ್. ತಿಮ್ಮಕ್ಕ ಬಿಎಸ್‌ಆರ್, 18 ರಲ್ಲಿ ಶಾಮಲ ಶಿವಪ್ರಕಾಶ್ ಕೆಜೆಪಿ, 19 ರಲ್ಲಿ ಎಚ್. ತಿಮ್ಮಣ್ಣ ಕಾಂಗ್ರೆಸ್, 20 ರಲ್ಲಿ ಟಿ. ರಮೇಶ್ ಜೆಡಿಎಸ್
21 ನೇ ವಾರ್ಡ್: ಜಿ.ಟಿ. ಹನುಮಂತ ರೆಡ್ಡಿ ಪಕ್ಷೇತರ, 22ರಲ್ಲಿ ಬಿ.ಎಲ್. ರವಿಶಂಕರ ಬಾಬು ಪಕ್ಷೇತರ 838, 23 ರಲ್ಲಿ ಮಹಮ್ಮದ್ ಅಹಮದ್ ಪಾಷ ಕಾಂಗ್ರೆಸ್, 24 ರಲ್ಲಿ ಸಯದ್ ಅಲೀಮ್ ಉಲ್ಲಾ ಬಿಎಸ್‌ಆರ್, 25 ರಲ್ಲಿ ಮಲ್ಲೇಶಪ್ಪ.ಕೆ. ಜೆಡಿಎಸ್, 26 ರಲ್ಲಿ ಜಿ. ಸೈಯದ್ ಫಕೃದ್ದೀನ್ ಜೆಡಿಎಸ್, 27 ರಲ್ಲಿ ಸೈಯದ್ ನಸುರುಲ್ಲಾ ಜೆಡಿಎಸ್, 28 ರಲ್ಲಿ ಟಿ. ರಾಘವೇಂದ್ರ ಈರುಳ್ಳಿ ಪಕ್ಷೇತರ,  29 ರಲ್ಲಿ ಶಾಂತಮ್ಮ ರುದ್ರಪ್ಪ ರೆಡ್ಡಿ ಜೆಡಿಎಸ್,  30 ರಲ್ಲಿ ಪಿ. ತಿಪ್ಪೇಸ್ವಾಮಿ ಜೆಡಿಎಸ್, 31 ರಲ್ಲಿ ಪ್ರಸನ್ನಕುಮಾರ್.ಟಿ. ಬಿಎಸ್‌ಆರ್, 32 ಜಿ.ಪಿ. ರತ್ನಮ್ಮ ಜೆಡಿಎಸ್, 33 ರಲ್ಲಿ ಶಾಂತಕುಮಾರಿ ಕೆ. ಶೇಖರ್ ಜೆಡಿಎಸ್, 34 ರಲ್ಲಿ ಗರಡಿ ಪ್ರಕಾಶ ಕಾಂಗ್ರೆಸ್ 1084 ಹಾಗೂ ವಾರ್ಡ್ ಸಂಖ್ಯೆ 35 ರಲ್ಲಿ ಆರ್. ಮಂಜುಳ ಪಕ್ಷೇತರರಾಗಿ ಸ್ಪರ್ಧಿಸಿ ವಿಜೇತರಾಗಿದ್ದಾರೆ.
ಶಾಂತಿಯುತ ಚುನಾವಣೆ  
ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಚುನಾವಣೆ ನಡೆಸಲು ಕಾರಣರಾದ ಮತದಾರರು ಮತ್ತು ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ ಧನ್ಯವಾದ ತಿಳಿಸಿದ್ದಾರೆ.
ಚುನಾವಣೆ ಅಧಿಸೂಚನೆ ಹೊರಡಿಸಿದ ನಂತರ ಮತ್ತು ಮಾರ್ಚ್ 7 ರಂದು ನಡೆದ ಮತದಾನ ಹಾಗೂ ಮಾ.11 ರಂದು ನಡೆದ ಮತ ಎಣಿಕೆಯ ಯಾವ ಸಂದರ್ಭದಲ್ಲಿಯು ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದ ತಿಳಿಸುತ್ತ ಮುಂಬರುವ ದಿನಗಳಲ್ಲಿಯು ಇದೇ ರೀತಿ ಸಾರ್ವಜನಿಕ ಶಾಂತಿ ಕಾಪಾಡಲು ಎಲ್ಲರ ಸಹಕಾರವನ್ನು ಜಿಲ್ಲಾಡಳಿತ ಬಯಸುತ್ತದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.