ಮೊಳಕಾಲ್ಮುರಿನಲ್ಲಿ ಕಾಂಗ್ರೆಸ್ ದೊಡ್ಡಪಕ್ಷ
ಕ.ಪ್ರ.ವಾರ್ತೆ, ಮೊಳಕಾಲ್ಮುರು, ಮಾ.11
ಪಟ್ಟಣ ಪಂಚಾಯ್ತಿ ಚುನಾವಣೆ ಹೊರ ಬಿದ್ದಿದ್ದು, ಯಾವುದೇ ರಾಜಕೀಯ ಪಕ್ಷಗಳಿಗೆ ಸ್ಪಷ್ಟ ಬಹುಮತ ಸಿಕ್ಕಿಲ್ಲ.
ಪಟ್ಟಣ ಪಂಚಾಯತಿಯ ಒಟ್ಟು 15 ವಾರ್ಡ್‌ಗಳಲ್ಲಿ ಕಾಂಗ್ರೆಸ್ 6 ಸ್ಥಾನ, ಬಿ.ಎಸ್.ಆರ್. 5 ಸ್ಥಾನ, ಜೆಡಿಎಸ್, ಬಿಜೆಪಿ ತಲಾ 1, ಪಕ್ಷೇತರರು 2 ಸ್ಥಾನ ಗಳಿಸಿದ್ದಾರೆ.
ಕಳೆದ ಬಾರಿಯಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದ ಪಟ್ಟಣ ಪಂಚಾಯ್ತಿಯನ್ನು ಮತ್ತೊಮ್ಮೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿಯಲು ಹವಣಿಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಬಿ.ಎಸ್.ಆರ್ ಪಕ್ಷವು ಅಡ್ಡಗಾಲು ಹಾಕಿದೆ. ಇದರಿಂದ ಕುತೂಹಲ ಮೂಡಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಉಂಟಾಗಿದೆ.
ಪ್ರಥಮ ಬಾರಿಗೆ ಪಟ್ಟಣ ಪಂಚಾಯ್ತಿಯಲ್ಲಿ ಬಿ.ಎಸ್.ಆರ್. ಪಕ್ಷವು ಖಾತೆ ತೆರೆದಿದ್ದು, ಕೆ.ಜಿ.ಪಿ. ಖಾತೆ ತೆರೆಯಲಾಗದಂತಾಗಿದೆ. ಇನ್ನೂ ಗೊಂದಲಗಳಿಂದ ಕೂಡಿದ ಬಿ.ಜೆ.ಪಿ ಪಕ್ಷವು ಕೇವಲ ಒಂದೇ ಒಂದು ಸ್ಥಾನಕ್ಕೆ ತೃಪ್ತಿಪಡೆದುಕೊಂಡು ಕಳೆದ ಬಾರಿಯಂತೆ ಈ ಬಾರಿಯು ಕೂಡ ಜೆಡಿಎಸ್ ಪಕ್ಷವು ಒಂದೇ ಒಂದು ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಒಟ್ಟಾರೆಯಾಗಿ ಭಾರಿ ಕುತೂಹಲ ಮೂಡಿಸಿದ್ದ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಮತದಾರರು ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿಲ್ಲ.
1ನೇ ವಾರ್ಡ್- ಬಸವರಾಜ, ( ಬಿ.ಎಸ್.ಆರ್. ಪಕ್ಷ ) ಪಡೆದ ಮತ 524.
2ನೇ ವಾರ್ಡ್- ಭಾಗ್ಯಮ್ಮ, (ಕಾಂಗ್ರೇಸ್ )ಪಡೆದ ಮತ 202.
3ನೇ ವಾರ್ಡ್-ಪಕ್ಕ (ಬಿ.ಎಸ್.ಆರ್.ಪಕ್ಷ ) ಪಡೆದ ಮತ 304
4ನೇ ವಾರ್ಡ್- ಅಬ್ದುಲ್ ರಷೀದ್(ಕಾಂಗ್ರೇಸ್ )ಪಡೆದ ಮತ 303
5ನೇ ವಾರ್ಡ್-ಎನ್. ರಾಜಶೇಖರ (ಬಿ.ಜೆ.ಪಿ. ) ಪಡೆದ ಮತ 323
6ನೇ ವಾರ್ಡ್-ಮೊಹಮ್ಮದ್ ಮೆಹಬೂಬ್(ಬಿ.ಎಸ್.ಆರ್.ಪಕ್ಷ )
7ನೇ ವಾರ್ಡ್- ಎಂ.ಎಸ್. ರಘು (ಪಕ್ಷೇತರ ) ಪಡೆದ ಮತ 164
8ನೇ ವಾರ್ಡ್- ಎನ್. ಚಂದ್ರಶೇಖರ (ಕಾಂಗ್ರೇಸ್)ಪಡೆದ ಮತ 399
9ನೇ ವಾರ್ಡ್-.ಎಂ. ಶಿವಮೂರ್ತಿ (ಬಿ.ಎಸ್.ಆರ್.ಪಕ್ಷ ) ಪಡೆದ ಮತ 470
10ನೇ ವಾರ್ಡ್- ಅಂಜಿನಪ್ಪ (ಕಾಂಗ್ರೇಸ್)ಪಡೆದ ಮತ 284
11ನೇ ವಾರ್ಡ್-ಪ್ರಕಾಶ್ ್ಕಾಂಗ್ರೇಸ್)ಪಡೆದ ಮತ 225
12ನೇ ವಾರ್ಡ್-ಎನ್. ಅನಿತ (ಬಿ.ಎಸ್.ಆರ್.ಪಕ್ಷ ) ಪಡೆದ ಮತ 217
13ನೇ ವಾರ್ಡ್-ಕೌಸರ್(ಕಾಂಗ್ರೇಸ್)ಪಡೆದ ಮತ 480
14ನೇ ವಾರ್ಡ್- ಉಲ್ಪತ್ ಉನ್ನೀಸಾ (ಜೆಡಿಎಸ್)ಪಡೆದ ಮತ 420
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

