ಚಿತ್ರದುರ್ಗ

ಯಾರಿಗೂ ಬಹುಮತ ನೀಡದ ಮತದಾರ

Published On :

ಕ.ಪ್ರ.ವಾರ್ತೆ, ಚಳ್ಳಕೆರೆ, ಮಾ.11  
ಪಟ್ಟಣದಲ್ಲಿ ಬಾರಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದ್ದ ಪುರಸಭೆಯ 27 ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ -9, ಜೆಡಿಎಸ್-8, ಕೆಜೆಪಿ-6, ಪಕ್ಷೇತರ -3 ಹಾಗೂ ಬಿಜೆಪಿ -1 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಬಿಎಸ್‌ಆರ್ ಇಲ್ಲಿ ಖಾತೆ ತೆರೆಯಲು ವಿಫಲವಾಗಿದೆ.
ನಿರೀಕ್ಷೆಗೂ ಮೀರಿ ಫಲಿತಾಂಶಗಳಲ್ಲಿ ಏರುಪೇರು ಉಂಟಾಗಿದ್ದು, ಪುರಸಭೆ ಆಡಳಿತ ಚುಕ್ಕಾಣಿ ಹಿಡಿಯಲು ಕಾಂಗ್ರೇಸ್ ಹಾಗೂ ಜೆಡಿಎಸ್ ಇನ್ನಿತರರನ್ನು ಆಶ್ರಯಿಸಬೇಕಾಗಿದೆ. ಯಾವುದೇ ಪಕ್ಷಕ್ಕೂ ಬಹುಮತ ಲಭ್ಯವಿಲ್ಲದ ಕಾರಣ ಇಲ್ಲಿನ ಪುರಸಭೆ ಅತಂತ್ರ ಸ್ಥಿತಿಯಲ್ಲಿದೆ.
ಕುಸಿದ ಕಾಂಗ್ರೆಸ್: ಕಳೆದ ಹೋಲಿಸಿದಾಗ 17 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದ ಕಾಂಗ್ರೆಸ್ ಈ ಬಾರಿ 9 ಸ್ಥಾನಕ್ಕೆ  ಕುಸಿದಿದೆ. 7 ಸ್ಥಾನಗಳು ಗೆಲವು ಸಾಧಿಸಿದ್ದ ಜೆಡಿಎಸ್ ಈ ಬಾರಿ 8 ಸ್ಥಾನಗಳಲ್ಲಿ ಗೆಲವು ಸಾಧಿಸಿದೆ. ಆಡಳಿತ ರೂಢ ಬಿಜೆಪಿ ಕಳೆದ ಬಾರಿ 2 ಸ್ಥಾನಗಲ್ಲಿ ಗೆಲುವು ಸಾಧಿಸಿದ್ದು, ಈ ಬಾರಿ ಕೇವಲ ಒಂದು ಸ್ಥಾನ ಮಾತ್ರ ಗಳಿಸಿದೆ.ಕಳೆದ ಬಾರಿ ಪಕ್ಷೇತರರಾಗಿ ಒಬ್ಬರು ವಿಜೇತರಾಗಿದ್ದು, ಈ ಬಾರಿ 3 ಸ್ಥಾನಗಳಲ್ಲಿ ಆಯ್ಕೆಯಾಗಿರುತ್ತಾರೆ.
ಒಂದನೇ ವಾರ್ಡ್‌ನಲ್ಲಿ ಕೆಜೆಪಿಯ ಜಿ.ಕೆ.ರವಿ, ಎರಡನೇ ವಾರ್ಡ್: ಕೆಜೆಪಿಯ  ಪಿ. ಮೂರ್ತಿ, 3 ನೇ  ವಾರ್ಡ್‌ನಿಂದ ಕಾಂಗ್ರೆಸ್‌ನ ಲಕ್ಷ್ಮಿದೇವಿ, 4ನೇ ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಟಿ.ಜೆ. ವೆಂಕಟೇಶ್ ಆಯ್ಕೆಯಾಗಿದ್ದಾರೆ.
5ನೇ ವಾರ್ಡ್: 5ನೇ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸಿ. ಲೋಕೇಶ ಮೂರ್ತಿ, 6ನೇ ವಾರ್ಡ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್. ಮಂಗಳಮ್ಮ, 7ನೇ ವಾರ್ಡ್‌ನಿಂದ ಕೆಜೆಪಿಯ ಬೋರಮ್ಮ, 8 ನೇ ವಾರ್ಡ್‌ನಿಂದ  ಜೆಡಿಎಸ್‌ನ ವಿ.ವೈ. ಪ್ರಮೋದ್, 9ನೇ ವಾರ್ಡ್‌ನಿಂದ ಜೆಡಿಎಸ್‌ನ ಮೊಹಮ್ಮದ್ ವಾಲೇಹಾ, 10ನೇ ವಾರ್ಡ್‌ನಿಂದ ಕೆಜೆಪಿಯ ಎನ್.ಕಾವ್ಯಶ್ರೀ, 11ನೇ ವಾರ್ಡ್‌ನಿಂದ ಕೆಜೆಪಿಯ ಅಭ್ಯರ್ಥಿಯಾಗಿ ಎಂ.ಮಂಜುನಾಥ ಆಯ್ಕೆಯಾಗಿದ್ದಾರೆ.
12ನೇ ವಾರ್ಡ್‌ನಿಂದ ಜೆಡಿಎಸ್‌ನ ಆರ್.ಜಾನಕಿ, 13ನೇ ವಾರ್ಡ್‌ನಿಂದ ಕಾಂಗ್ರೆಸ್‌ನ ಜಿ.ಟಿ.ಗೋವಿಂದರಾಜು, 14ನೇ ವಾರ್ಡ್‌ನಿಂದ ಜೆಡಿಎಸ್‌ನ ಎಚ್.ಎಫ್. ರೇಷ್ಮಾಬಾನು, 15ನೇ ವಾರ್ಡ್‌ನಿಂದ ಜೆಡಿಎಸ್‌ನ
ಟಿ.ವಿಜಯಕುಮಾರ, 16ನೇ ವಾರ್ಡ್‌ನಿಂದ ಕಾಂಗ್ರೆಸ್‌ನ ವೀರಣ್ಣ, 17ನೇ ವಾರ್ಡ್‌ನಿಂದ ಕೆಜೆಪಿಯ ಆರ್.ರವಿಕುಮಾರ್ ಆಯ್ಕೆಯಾಗಿದ್ದಾರೆ.
18ನೇ ವಾರ್ಡ್‌ನಿಂದ ಜೆಡಿಎಸ್‌ನ ಮಹದೇವಮ್ಮ, 19ನೇ ವಾರ್ಡ್‌ನಿಂದ ಬಿಜೆಪಿಯ ಪರಿಮಳ, 20ನೇ ವಾರ್ಡ್‌ನಿಂದ ಕಾಂಗ್ರೆಸ್‌ನ ಎಸ್.ಟಿ. ವಿಜಯ, 21 ನೇ ವಾರ್ಡ್‌ನಿಂದ ಕಾಂಗ್ರೆಸ್ ಅಭ್ಯರ್ಥಿ ಕೆ.ನಾಗರಾಜು, 22 ನೇ ವಾರ್ಡ್ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಎಂ.ಶಿಮಮೂರ್ತಿ, 23ನೇ ವಾರ್ಡ್‌ನಿಂದ ಕಾಂಗ್ರೆಸ್‌ನ  ಸಲೀಂ, 24ನೇ ವಾರ್ಡ್ ಪಕ್ಷೇತರ ಅಭ್ಯರ್ಥಿ ನಾಗವೇಣಮ್ಮ, 25 ನೇ ವಾರ್ಡ್ ಜೆಡಿಎಸ್‌ನ ಸಿ. ಶ್ರೀನಿವಾಸ್, 26ನೇ ವಾರ್ಡ್ ಜೆಡಿಎಸ್‌ನ ಬಿ.ಟಿ. ರಮೇಶ್, 27ನೇ ವಾರ್ಡ್ ಕಾಂಗ್ರೆಸ್‌ನ ಎಂ. ರಾಮು ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.