ದಕ್ಷಿಣ ಕನ್ನಡ

ನೀತಿಸಂಹಿತೆ ಉಲ್ಲಂಘನೆ ತಡೆ ಸಮಿತಿ

Published On :

ಮಂಗಳೂರು: ಚುನಾವಣಾ ನೀತಿ ಉಲ್ಲಂಘಿಸಿದಂತೆ ಪ್ರತಿಯೊಂದು ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಲು ಅಪರ ಜಿಲ್ಲಾಧಿಕಾರಿ ನೇತೃತ್ವದ ವಿವಿಧ ಸಮಿತಿ ಕಾರ್ಯಾಚರಿಸಲಿದೆ ಎಂದು ಜಿಲ್ಲಾಧಿಕಾರಿ ಹರ್ಷಗುಪ್ತ ಹೇಳಿದ್ದಾರೆ.
ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ಕ್ರಮಗಳ ಕುರಿತು ಭಾನುವಾರ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚುನಾವಣಾ ಖರ್ಚುವೆಚ್ಚದ ನಿಗಾ ಇಡಲು ಜಿಲ್ಲಾ ನೋಡಲ್ ಅಕೌಂಟಿಂಗ್ ಅಧಿಕಾರಿಯಾಗಿ ಆದಾಯ ತೆರಿಗೆ ಅಧಿಕಾರಿಯನ್ನು ಆಯ್ಕೆ ಮಾಡಿದ್ದು, ಇವರಿಗೆ ಸಹಾಯಕರನ್ನು ನೇಮಿಸಲಾಗಿದೆ.
ಬೆಳ್ತಂಗಡಿ, ಮೂಡುಬಿದಿರೆ, ಮಂಗಳೂರು ಉತ್ತರ, ದಕ್ಷಿಣ, ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯಕ್ಕೆ ಪ್ರತ್ಯೇಕ ಅಧಿಕಾರಿಗಳ ತಂಡ ನೇಮಿಸಲಾಗಿದೆ ಎಂದರು.
ವಿಡಿಯೋ ಸರ್ವಲೈನ್ ತಂಡವನ್ನು ಇದೇ ಮಾದರಿಯಲ್ಲಿ ರಚಿಸಲಾಗಿದ್ದು ಇವರಿಗೆ ತರಬೇತಿ ನೀಡಲಾಗುವುದು. ಇನ್ನೊಂದು ವಿಡಿಯೊ ವ್ಯೂವಿಂಗ್ ತಂಡ ರಚಿಸಲಾಗಿದೆ. ಪೇಯ್ಡ್ ನ್ಯೂಸ್ ಬಗ್ಗೆ ನಿಗಾ ಇಡಲು ಎಂಸಿಎಂಸಿ(ಮೀಡಿಯಾ ಸರ್ಟಿಪೈಯಿಂಗ್ ಅಂಡ್ ಮಾನಿಟರಿಂಗ್ ಕಮಿಟಿ) ಸಮಿತಿ ಕಾರ್ಯಾಚರಿಸಲಿದೆ ಎಂದರು.
ಚುನಾವಣೆ ಪ್ರಕ್ರಿಯೆಯಲ್ಲಿ ಅಕ್ರಮ ತಡೆಗೆ ರಚನಾತ್ಮಕ ವ್ಯೂಹ ರಚಿಸಲಾಗಿದ್ದು, ಎಲ್ಲೆಡೆಯಿಂದಲೂ ವೀಕ್ಷಕರು ಪ್ರತಿಯೊಂದು ಚಟುವಟಿಕೆಯನ್ನು ವೀಕ್ಷಿಸಬಹುದು ಎಂದು ಹೇಳಿದರು.
ಎಲ್ಲ ಸಮಿತಿಗಳ ಜವಾಬ್ದಾರಿ ಮತ್ತು ಪಾತ್ರದ ಬಗ್ಗೆ ವಿವರಿಸಿದ ಅವರು, ಇಲ್ಲಿ ಸೃಷ್ಟಿಸಿರುವ ಪಾತ್ರಗಳು ಕಾಲ್ಪನಿಕವಾಗಿರದೆ ಕಾರ್ಯಾನುಷ್ಠಾನಕ್ಕೆ ತರುವಂಥದ್ದು.
 ಇದನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಚುನಾವಣಾ ಅಕ್ರಮ ತಡೆಗೆ ಕಾರ್ಯಚರಿಸಲು ಪ್ರತಿಯೊಬ್ಬನಿಗೂ ಬೆಂಬಲವಾಗಿ ಚುನಾವಣಾಧಿಕಾರಿ ಇರುತ್ತಾರೆ. ಇದರಲ್ಲಿ ಯಾವುದೇ ಸಂದೇಹ ಬೇಡ ಎಂದರು.
ಚುನಾವಣಾ ಸಂದರ್ಭದಲ್ಲಿ ಕೇಂದ್ರ ಸ್ಥಾನ ಬಿಡದಿರುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಅಗ್ತಯ ಮತ್ತು ತುರ್ತು ಸಂದರ್ಭಗಳಲ್ಲಿ ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.