ಮಾನವೀಯತೆಯಿಂದ ಸಮಾನತೆ: ಸ್ವಾಮೀಜಿ
ಧರ್ಮಸ್ಥಳ: ಶರಣ ಸಂಸ್ಕೃತಿ ನಿಂತ ನೀರಲ್ಲ, ನಿರಂತರ ಹರಿಯುವ ಪ್ರವಾಹ. ಮಾನವೀಯತೆಯ ಮಹಾಪ್ರವಾಹ ಗುಪ್ತಗಾಮಿನಿಯಾಗಿ ನಿರಂತರ ಹರಿದಾಗ ಸಮಾನತೆಯ ನೆಲೆಯಲ್ಲಿ ಆದರ್ಶ ಸಮಾಜ ನಿರ್ಮಾಣವಾಗಿ ಸಮಾಜದ ಉನ್ನತಿ ಸಾಧ್ಯವಾಗುತ್ತದೆ ಎಂದು ಬೆಂಗಳೂರಿನ ಬೇಲಿಮಠದ ಶಿವರುದ್ರ ಮಹಾಸ್ವಾಮೀಜಿ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ಸೋಮವಾರ ನಡೆದ ಶರಣ ಸಂಸ್ಕೃತಿ ಮಹಾಯಾತ್ರೆಯ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಶ್ವದ ಸಕಲ ಜೀವಿಗಳಿಗೂ ಲೇಸನು ಬಯಸುವುದೇ ಧರ್ಮ. ಧರ್ಮದ ಬೆಳಕಿನಲ್ಲಿ ಸಮಾನತೆಯ ತತ್ವ ಮನೆಯಿಂದ ಪ್ರಾರಂಭವಾಗಬೇಕು. ಸಂಸಾರದಲ್ಲಿ ಸಮಾನತೆ ಇರಬೇಕು. ನಿಸ್ವಾರ್ಥಿಗಳಿಗೆ ಸದಾ ದೇವರ ಅನುಗ್ರ ಇರುತ್ತದೆ. ಕ್ರಾಂತಿಕಾರಿ ಬಸವಣ್ಣನ ಸಾರ್ವಕಾಲಿಕ ತತ್ವಗಳು ನಮ್ಮೆಲ್ಲರ ಸಾರ್ಥಕ ಬದುಕಿಗೆ ದಾರಿದೀಪವಾಗಿವೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ಬೆಂಗಳೂರಿನ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಸವಣ್ಣ ಜಾತ್ಯತೀತ ಹಾಗೂ ಕಾಲಾತೀತ ದಾರ್ಶನಿಕನಾಗಿದ್ದು, ಶರಣ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರೊಂದಿಗೆ ಸಾಕ್ಷಿ ಪ್ರಜ್ಞೆ ಜಾಗೃತಿಗೊಳಿಸುವುದೇ ಶರಣ ಸಂಸ್ಕೃತಿ ಮಹಾಯಾತ್ರೆಯ ಉದ್ದೇಶವಾಗಿದೆ. ಸಮಾನತೆಯೊಂದಿಗೆ ಸಮಾಜದ ಸಂಘಟನೆಯಾಗಬೇಕು. ನಮ್ಮ ಸನಾತನ ಸಂಸ್ಕೃತಿಯನ್ನು ಉಳಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಸಮಾನತೆ ಮತ್ತು ಕಾಯಕ ತತ್ವ ಶರಣ ಸಮಾಜದ ಮೂಲ ಸೂತ್ರವಾಗಿದೆ. ಆಚಾರಟ ವಿಚಾರಗಳಲ್ಲಿ ಅಂತರವಿರಬಾರದು. ಜೀವನದಲ್ಲಿ ದೊರಕಿದ ಅವಕಾಶಗಳ ಸದುಪಯೋಗ ಪಡೆದು ಸಾರ್ಥಕ ಜೀವನ ನಡೆಸಬೇಕು ಎಂದರು.
ಬೇಲಿಮಠದ ಸಿದ್ದಲಿಂಗ ಸ್ವಾಮೀಜಿ, ಪ್ರೊ. ಬಸವರಾಜ ಮಾದಿಗೊಂಡ, ಡಾ.ಬಿ. ಯಶೋವರ್ಮ ಮತ್ತು ಪ್ರೊ. ಮಿಥುನ್ ಚಕ್ರವರ್ತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

