ರೋಡ್,ಶೋಗೆ ತೆರೆದ ವಾಹನ ಇಲ್ಲ, ಮಾಧ್ಯಮ ಸಂಹಿತೆ
ಮಂಗಳೂರು: ಜಿಲ್ಲೆಯಲ್ಲಿ ಚುನಾವಣಾ ಸದಾಚಾರ ಸಂಹಿತೆ ಉಲ್ಲಂಘನೆಯಾಗದಂತೆ ಕಟ್ಟೆಚ್ಚರ ವಹಿಸಲು ಸಂಬಂಧಿತ ಇಲಾಖೆ ಮತ್ತು ಅಧಿಕಾರಿಗಳನ್ನು ಹೊಣೆ ಮಾಡಿ ಜಿಲ್ಲಾಧಿಕಾರಿ ಹರ್ಷಗುಪ್ತ ಸುತ್ತೋಲೆ ಹೊರಡಿಸಿದ್ದಾರೆ.
ಸಾರ್ವಜನಿಕ ಪ್ರದೇಶಗಳನ್ನು ಬ್ಯಾನರ್, ಬಂಟಿಂಗ್,ಗಳನ್ನು ಹಚ್ಚಿ ವಿರೂಪಗೊಳಿಸದಂತೆ ತಡೆಯುವ ಹೊಣೆ ಕಂದಾಯ ಅಧಿಕಾರಿಗಳು ಹಾಗೂ ನಗರದ ಸ್ಥಳೀಯ ಸಂಸ್ಥೆಗಳ ಕಮಿಷನರ್, ಕಾರ್ಯನಿರ್ವಹಣಾಧಿಕಾರಿಗಳು, ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳಿಗೆ, ಪಿಡಿಒಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು. ಪೊಲೀಸ್ ಕಮೀಷನರ್ ಮತ್ತು ಜಿಲ್ಲಾ ಎಸ್ಪಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದರು.
ರೋಡ್,ಶೋಗೆ ತೆರೆದ ವಾಹನ ಇಲ್ಲ: ಪ್ರಚಾರಕ್ಕೆ ಬಳಸುವ ಎಲ್ಲ ವಾಹನಗಳು ಆರ್,ಟಿಒರಿಂದ ಅಥವಾ ಸ್ಥಳೀಯ ನೋಡೆಲ್ ಅಧಿಕಾರಿಗಳಿಂದ ಎನ್,ಒಸಿ ಪಡೆದು ರಿಟರ್ನಿಂಗ್ ಅಧಿಕಾರಿಯ ಪೂರ್ವಾನುಮತಿ ಪಡೆಯಬೇಕು. ಸಂಚರಿಸುವ ವಾಹನಗಳು ಮೈಕ್ ಬಳಸುವಂತಿಲ್ಲ. ಬಿಳಿ ಬಣ್ಣದ ನಂಬರ್ ಪ್ಲೇಟ್ ಅಳವಡಿಸಿದ ವಾಹನಗಳನ್ನು ಬಾಡಿಗೆ ಪಡೆಯಲು ಅವಕಾಶವಿಲ್ಲ. ರೋಡ್,ಶೋಗಳಿಗೆ ತೆರೆಗ ವಾಹನ ಬಳಕೆ ಇಲ್ಲ. ಕಪ್ಪುಬಣ್ಣದ ಗಾಜುಗಳಿರುವ ವಾಹನ ಬಳಸುವಂತಿಲ್ಲ. ಸರಕು ಸಾಗಾಣೆ ವಾಹನಗಳಲ್ಲಿ ಜನರನ್ನು ಕೊಂಡೊಯ್ಯುವಂತಿಲ್ಲ. ಆಯೋಗ ನಿಗದಿಪಡಿಸಿದ ಮಾನದಂಡಕ್ಕನುಗುಣವಾಗಿ ಬ್ಯಾನರ್ ಅಳವಡಿಸಬೇಕು ಎಂದಿದ್ದಾರೆ.
ಮತದಾರರ ಕರೆತಂದರೆ ಕೇಸ್: ಪಕ್ಷ ಹಾಗೂ ಅಭ್ಯರ್ಥಿಗಳ ವೆಚ್ಚದಲ್ಲಿ ನಿಗಾ ಇರಿಸಲು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚುನಾವಣಾ ಪ್ರಚಾರಕ್ಕೆ ಬಳಸುವ ಎಲ್ಲ ವಾಹನಗಳು ಆರ್,ಒ ಅವರಿಂದ ಪಡೆದ ಪಾಸ್ ವಾಹನಕ್ಕೆ ಕಾಣಿಸುವಂತೆ ಹಾಕಬೇಕು. ಈ ವಾಹನಗಳಲ್ಲಿ ಮತದಾರರನ್ನು ಮತದಾನದಂದು ಕರೆತಂದರೆ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗುವುದು. ಇಂಥ ವಾಹನಗಳ ವಿರುದ್ಧ ಆರ್,ಟಿಒ, ಆರ್,ಒ, ಪೊಲೀಸ್ ಕಮಿಷನರ್ ಮತ್ತು ಜಿಲ್ಲಾ ಪೊಲೀಸರು ಕ್ರಮ ಕೈಗೊಳ್ಳಬಹುದು. ಕೇಟರಿಂಗ್,ಗೆ ಸೂಚನೆ: ಎಲ್ಲ ಹೊಟೇಲ್, ಕೇಟರಿಂಗ್,ನವರು ಯಾವುದೇ ರಾಜಕೀಯ ಪಕ್ಷ ಸಂಬಂಧಿ ಕಾರ್ಯಕ್ರಮಗಳಿಗೆ ಒದಗಿಸುವ ಆಹಾರ ವಿವರಗಳನ್ನು 1077ಕ್ಕೆ ಕಡ್ಡಾಯವಾಗಿ ತಿಳಿಸಬೇಕು. ಕಾರ್ಯಕರ್ತರಿಗೆ ನೀಡುವ ಆಹಾರ ವೆಚ್ಚವನ್ನು ಪಕ್ಷ ವೆಚ್ಚಕ್ಕೆ ಹಾಕಲಾಗುವುದು. ಮುಂಚಿತವಾಗಿ ತಿಳಿಸದೆ ನಿಯಮ ಉಲ್ಲಂಘಿಸಿದರೆ ಕೇಸ್ ದಾಖಲಿಸಲಾಗುತ್ತದೆ. ಮತದಾರರಿಗೆ ಊಟ ನೀಡುವುದು ಅಪರಾಧವಾಗಿದ್ದು, ಇದಕ್ಕೆ ಹೊಟೇಲ್, ಕೇಟರಿಂಗ್,ನವನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಮಾಧ್ಯಮಕ್ಕೆ ಸಂಹಿತೆ: ಮಾಧ್ಯಮಗಳಿಗೆ ನೀಡುವ ಎಲ್ಲ ಜಾಹಿರಾತುಗಳನ್ನು ಎಂಸಿಎಂಸಿ ಸಮಿತಿಗೆ ಮಾಹಿತಿ ನೀಡಬೇಕು. ಇದಕ್ಕೆ ಚುನಾವಣಾಧಿಕಾರಿ ಮುಖ್ಯಸ್ಥರು. ಅರ್ಜಿ ಸಲ್ಲಿಸುವ ವೇಳೆ ಜಾಹಿರಾತು ನೀಡುವ ಸಂಸ್ಥೆ, ದರಪಟ್ಟಿ, ಒಟ್ಟು ಖರ್ಚಿನ ಮಾಹಿತಿ, ಎಷ್ಟು ಬಾರಿ ಪ್ರಕಟ ಮಾಡುತ್ತಾರೆ ಎಂಬ ಸಮಗ್ರ ಮಾಹಿತಿ ಅದರಲ್ಲಿರಬೇಕು. ಇಲ್ಲಿಯೂ ನಿಯಮ ಉಲ್ಲಂಘಿಸಿದಲ್ಲಿ ಅಭ್ಯರ್ಥಿ, ಪಕ್ಷ ಹಾಗೂ ಪ್ರಕಟಿಸಿದ ಸಂಸ್ಥೆಯನ್ನು ಹೊಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ತಲೆಮರೆಸಿದ್ದರೆ ಹೆಸರು ಕೈಬಿಡಿ: ಸೆ.107/110 ಸಿಆರ್,ಪಿಸಿ ಕಾನೂನಿನಡಿ ಹಾಜರುಪಡಿಸುವ ವ್ಯಕ್ತಿಗಳು ಪರೋಕ್ಷವಾಗಿ ಚುನಾವಣಾ ಕರ್ತವ್ಯಕ್ಕೆ ತೊಂದರೆಪಡಿಸುವವರಾದರೆ ಅವರಲ್ಲಿ ಹೆಚ್ಚಿನ ಬಾಂಡ್ ಪಡೆದುಕೊಳ್ಳಬೇಕು. ವಿಫಲವಾದರೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕು. ಸಹಾಯ ಆಯುಕ್ತರು ಮತ್ತು ತಹಸೀಲ್ದಾರ್,ಗೆ ಇದರ ಜವಾಬ್ದಾರಿ.
ಜಾಮೀನು ರಹಿತ ವಾರಂಟ್ ಹೊರಡಿಸಿದ ಬಳಿಕ 6 ತಿಂಗಳಿಂದ ಅವರು ಪತ್ತೆಯಾಗದಿದ್ದರೆ ಅಥವಾ ಗಂಭೀರ ಪ್ರಕರಣ ಮಾಡಿ ತಲೆ ಮರೆಸಿದ್ದರೆ ಅವರನ್ನು ಆಯೋಗ ನಿರ್ದೇಶನದಂತೆ ಮತದಾರರ ಪಟ್ಟಿಯಿಂದ ಕೈಬಿಡಬೇಕು.
ಎಲ್ಲ ಮಾಹಿತಿಗಳನ್ನು ಕಡ್ಡಾಯವಾಗಿ ಕಂಟ್ರೋಲ್ ನಂಬರ್ 1077ಕ್ಕೆ ನೀಡುವಂತೆ ಹರ್ಷಗುಪ್ತ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

