ನೋಂದಣಿ ಸ್ವೀಕೃತಿ ಫಾರ್ಮ್ ಬಾಕಿ ಉಳಿಸಬೇಡಿ
ಮಂಗಳೂರು: ಮತದಾರರ ಪಟ್ಟಿ ನೋಂದಣಿ, ಹೆಸರು ಬದಲಾವಣೆ, ಹೆಸರು ತೆಗೆದುಹಾಕುವುದು ಇತ್ಯಾದಿಗಳಿಗೆ ಸ್ವೀಕೃತಿಯಾದ ಫಾರ್ಮ್ನ್ನು ಯಾವುದೇ ಕಾರಣಕ್ಕೂ ಬಾಕಿ ಉಳಿಸಬಾರದು ಎಂದು ಜಿಲ್ಲಾಧಿಕಾರಿ ಹರ್ಷಗುಪ್ತ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಗುರುವಾರ ಜಿಲ್ಲಾಧಿಕಾರಿ ಕಚೇರಿಯಿಂದ ಪುತ್ತೂರು, ಬಂಟ್ವಾಳ, ಸುಳ್ಯ, ಬೆಳ್ತಂಗಡಿ ತಹಸೀಲ್ದಾರ್ಗಳಿಗೆ ವಾಕಿಟಾಕಿ ಬಳಸಿ ಮತದಾರರ ಪಟ್ಟಿ ಸಮಗ್ರವಾಗಿ, ಸ್ವಚ್ಛವಾಗಿಡುವ ಬಗ್ಗೆ ಆಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು.
ಬಿಎಲ್ಒಗಳು ತಮ್ಮಲ್ಲಿರುವ ಅರ್ಜಿಗಳನ್ನು ಆರ್ಒ ಅಥವಾ ತಹಸೀಲ್ದಾರರಿಗೆ ವರ್ಗಾಯಿಸಬೇಕು. ಸೆಕ್ಟರ್ ಅಧಿಕಾರಿಗಳು ಮತ್ತು ತಹಸೀಲ್ದಾರ್ ಹೆಚ್ಚಿನ ಮುತ್ವರ್ಜಿ ವಹಿಸಬೇಕು. ಜನವರಿಯಲ್ಲಿ ಮತದಾರರ ಪಟ್ಟಿ ಪ್ರಕಟಿಸಿರುವುದರಿಂದ ಅಂತಿಮ ಹಂತದಲ್ಲಿ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ನಗದು ಬಹುಮಾನ ನೀಡ್ತಾರೆ: ವಿಶೇಷ ಮುತ್ವರ್ಜಿಯಿಂದ ಮತದಾನದ ಶೇಕಡವಾರು ಹೆಚ್ಚಿಸುವ ಕುರಿತು ಪ್ರಾಮಾಣಿಕ ಪ್ರಯತ್ನ ಸಾಧನೆ ಮಾಡಿದರೆ ಅವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದರು.
ಮತದಾರರಿಗೆ ಮತದಾನದ ಚೀಟಿ ಹಂಚುವಾಗ ಖುದ್ದಾಗಿ ಮತದಾರರನ್ನು ಗುರುತಿಸಬೇಕು. ಬಹಳ ದಿನಗಳಿಂದ ಮನೆಯಲ್ಲಿ ಇಲ್ಲದಿರುವ ಮತದಾರರನ್ನು ಗುರುತಿಸಿ ಸುದೀರ್ಘ ಗೈರಾಗಿದ್ದಲ್ಲಿ ಪ್ರತ್ಯೇಕ ಕಾಲಂ ಮಾಡಿ ಎಂದು ಸ್ಪಷ್ಟಪಡಿಸಿದರು.
ಹಾಸ್ಟೆಲ್ ಮಕ್ಕಳ ಸೇರ್ಪಡೆ ಬಗ್ಗೆ ಅಪೂರ್ಣ ಅರ್ಜಿಗಳು ಅಪೂರ್ಣವಾಗಿದ್ದರೆ ಅದನ್ನು ಸ್ವೀಕರಿಸಬೇಡಿ ಎಂದರು. ಬಿಎಲ್ಒ ಮುಖೇನ ಮತದಾನಕ್ಕೆ ಸ್ಲಿಪ್ ನೀಡುವಾಗ ಎಲ್ಲರೂ ಮತದಾನ ಮಾಡುವಂತೆ ಪ್ರೇರೇಪಿಸಿ. ಉತ್ತಮ ಕೆಲಸ ಮಾಡಿದ ಬಿಎಲ್ಒಗಳನ್ನು ಗುರುತಿಸಲಾಗುವುದು ಎಂದು ಹೇಳಿದರು.
15ರೊಳಗೆ ಪಟ್ಟಿ ಸಿದ್ಧ: ಎ.7 ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅಂತಿಮ ದಿನವಾಗಿದ್ದು, ಎಲ್ಲ ಸೆಕ್ಟರ್ ಅಧಿಕಾರಿಗಳು 10ರೊಳಗೆ ಸಮಗ್ರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಬೇಕಿದೆ ಎಂದು ವಿವರಿಸಿದರು.
15ರೊಳಗೆ ಮತದಾರರ ಪಟ್ಟಿ ಸಿದ್ಧಪಡಿಸಿ 17ರಂದು ಮತದಾರರ ಪಟ್ಟಿಯನ್ನು ಪ್ರಚುರಪಡಿಸಲು ಜಿಲ್ಲಾಡಳಿತ ಸಿದ್ಧವಾಗಬೇಕಾಗಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕೆ ಮೊದಲು ಮಂಗಳೂರು ಉತ್ತರ, ದಕ್ಷಿಣ, ಕೇಂದ್ರ ಮತ್ತು ಮೂಡುಬಿದಿರೆ ಬಿಎಲ್ಒ ಮತ್ತು ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಹರ್ಷಗುಪ್ತ ಪುರಭವನದಲ್ಲಿ ನೇರ ಸಂವಾದ ನಡೆಸಿದರು.
ಬೆಳಗ್ಗೆ ಕೂಳೀರಿನ 44 ಮತ್ತು 44ಎ ವಾರ್ಡ್ಗಳಿಗೆ ಖುದ್ದು ಭೇಟಿ ನೀಡಿ ಮತದಾರರ ಮನೆಗೆ ತೆರಳಿ ಪರಿಶೀಲನೆ ನಡೆಸಿದರು.ಬಳಿಕ ಭಾರತೀ ಎಜುಕೇಶನ್ ಸೆಂಟರ್ನಲ್ಲಿ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

