ದಕ್ಷಿಣ ಕನ್ನಡ

ಕುಂತೂರು-ಪೆರಾಬೆ ಪರಿಸರದಲ್ಲಿ ಸರಣಿ ಕಳವು

Published On :

ಉಪ್ಪಿನಂಗಡಿ: ಕಡಬ ಠಾಣಾ ವ್ಯಾಪ್ತಿಯ  ಕುಂತೂರು-ಪೆರಾಬೆ ಪರಿಸರದಲ್ಲಿ ಗುರುವಾರ ರಾತ್ರಿ ಸರಣಿ ಕಳ್ಳತನ ನಡೆದಿದ್ದು  , ನಗದು ಹಾಗೂ ಬೆಲೆ ಬಾಳುವ ವಸ್ತುಗಳು ಕಳವಾಗಿವೆ.
ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯಲ್ಲಿರುವ ಕುಂತೂರು ಭಜನಾ ಮಂದಿರ, ಹಾಗೂ ಇದೇ ಪರಿಸರದ ದೈವಸ್ಥಾನ, ಚರ್ಚ್ ಹಾಗೂ ಮೂರು ಅಂಗಡಿಗಳಿಗೆ ನುಗ್ಗಿದ ಕಳ್ಳರು ನಗದು ಹಾಗೂ ಇತರೇ ಸಾಮಾಗ್ರಿಗಳನ್ನು ದೋಚಿದ್ದಾರೆ.
ಕುಂತೂರು ಶ್ರೀ ಶಾರದಾ ಭಜನಾ ಮಂದಿರದ ಬೀಗ ಮುರಿದು ಒಳನುಗ್ಗಿದ ಕಳ್ಳರು 2 ಕಾಣಿಕೆ ಡಬ್ಬಿಗಳ ಬೀಗ ಒಡೆದು  ಹಣ ದೋಚಿದ್ದಾರೆ. ಪೆರಾಬೆ ಗ್ರಾಮದ ಮುಡಿಪಿನಡ್ಕ ಮುಡಿಪಿನಾರು ಶ್ರೀ ಉಳ್ಳಾಲ್ತಿ ಚಾಮುಂಡಿ ದೈವಸ್ಥಾನದಲ್ಲಿದ್ದ ಗುಡಿಯ ಹೊರಗಡೆ ಇಡಲಾಗಿದ್ದ 3 ಕಾಣಿಕೆ ಡಬ್ಬಿಗಳನ್ನು ಒಡೆದು ಅದರಲ್ಲಿದ್ದ ಹಣ ದೋಚಿದ್ದಾರೆ.
ದೈವಸ್ಥಾನದ ಎದುರು ಭಾಗದಲ್ಲಿರುವ ಕುಂತೂರು ಸೈಂಟ್ ಮಮೇರಿಸ್ ಜೊಕೊಬ್ ವೈಟ್ ಸಿರಿಯನ್ ಚರ್ಚ್‌ಗೂ ನುಗ್ಗಿದ ಕಳ್ಳರು ಕಾಣಿಕೆ ಡಬ್ಬಿಯಲ್ಲಿದ್ದ ಹಣ ದೋಚಿದ್ದಾರೆ.
ಶಾಜನ್ ಎಂಬವರಿಗೆ ಸೇರಿದ ಬೇಕರಿ ಮತ್ತು ಕ್ರೀಂ ಪಾರ್ಲರ್ ಬಾಗಿಲಿನ ಬೀಗ ಮುರಿದು ನುಗ್ಗಿದ ಕಳ್ಳರು ಸುಮಾರು ರು. 2 ಸಾವಿರ ಮೌಲ್ಯದ ಸಿಗರೇಟ್, 2 ಲೀ.ನ 3 ಬಾಟ್ಲಿ ಕೂಲ್‌ಡ್ರಿಂಕ್ಸ್, ಬಿಸ್ಕೆಟ್, ರು. 500 ನಗದು  ದೋಚಿದ್ದಾರೆ.
ಒಟ್ಟು ಸುಮಾರು ರು. 5 ಸಾವಿರ ಮೌಲ್ಯದ ಸೊತ್ತು ಕಳವಾಗಿದೆ ಎಂದು ಮಾಲೀಕ ಶಾಜನ್ ತಿಳಿಸಿದ್ದಾರೆ.
ಅಂಗಡಿ ಕಳವು: ಇದೇ ಪರಿಸರದ  ಬಿ.ಕೆ.ಅಬ್ಬಾಸ್ ಎಂಬವರ ಅಂಗಡಿ ಬೀಗ ಮುರಿದು ನುಗ್ಗಿ ಅಂಗಡಿಯೊಳಗಿದ್ದ ನಗದು ಎಗರಿಸಿದ್ದಾರೆ.  
ಪೆರಾಬೆ ಗ್ರಾ.ಪಂ. ಬಳಿಯಿರುವ ಇಬ್ರಾಹಿಂ ಕೆ.ಎ., ಎಂಬವರ ಅಂಗಡಿಗೂ ನುಗ್ಗಿದ ಕಳ್ಳರು 15 ಪ್ಯಾಕೆಟ್ ಸಿಗರೇಟ್, ಅಂಗಡಿಯಲ್ಲಿದ್ದ ಕಾಣಿಕೆ ಡಬ್ಬಿಯಲ್ಲಿದ್ದ ಹಣವನ್ನೂ ದೋಚಿದ್ದಾರೆ.
ಇಲ್ಲಿಂದ ಅಂದಾಜು ಒಟ್ಟು ರು. 4 ಸಾವಿರ ಮೌಲ್ಯದ ಸೊತ್ತು ದೋಚಿರುವುದಾಗಿ ಮಾಲೀಕ ಇಬ್ರಾಹಿಂ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.