ದಕ್ಷಿಣ ಕನ್ನಡ

ಕನ್ನಡ ಸ್ಥಾನಮಾನ ಕುಸಿತ: ಲೀಲಾವತಿ ರಾವ್ ವಿಷಾದ

Published On :

ಮಂಗಳೂರು: ಕನ್ನಡ ಸಂಘಟನೆಗಳು, ರಕ್ಷಣಾ ವೇದಿಕೆ, ಕನ್ನಡ ಕಾವಲು ಪಡೆಗಳಂತಹ ಸಮಿತಿಗಳಿದ್ದರೂ ಕನ್ನಡಕ್ಕೆ ದೊರಕಬೇಕಾದ ಮೌಲ್ಯತೆ, ಸ್ಥಾನಮಾನ ಕುಸಿಯುತ್ತಿರುವುದು ವಿಷಾದನೀಯ ಸಾಹಿತಿ ಲೀಲಾವತಿ ಎಸ್.ರಾವ್ ಹೇಳಿದ್ದಾರೆ.
ಭಾನುವಾರ ಕುಳಾಯಿನಲ್ಲಿ ನಡೆದ ಮಂಗಳೂರು ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರ ಮತ್ತು ಸಮಾಜ ಕನ್ನಡಿಗನ ಬದುಕು ಕಟ್ಟಿಕೊಡುವಲ್ಲಿ ಸೂಕ್ತ ಕ್ರಮ ಕೈಗೊಳ್ಳುವವರೆಗೆ ಸಮಸ್ಯೆಗಳು ಬಗೆಹರಿಯದು ಎಂದು ಹೇಳಿದರು.
ಜಿಲ್ಲೆಯಲ್ಲಿ ಬಹುಭಾಷೆಗಳ ಸಂಗಮವಿರುವುದರಿಂದ ರಾಜ್ಯದ ಇತರ ಕಡೆ ಇಲ್ಲಿ ಮಾತನಾಡುವ ಕನ್ನಡವನ್ನು ಗ್ರಂಥಸ್ಥ ಭಾಷೆಯೆಂದು ಜನರು ಪ್ರಶಂಸಿಸುತ್ತಾರೆ ಎಂದರು.
ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಜಿಲ್ಲೆಯಲ್ಲಿ ತಾಲೂಕು, ಗ್ರಾಮ ಮಟ್ಟದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡಿ ಜಾಗೃತಿ ಮೂಡಿಸಲಾಗಿದೆ. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ 'ಮಕ್ಕಳ ಸಾಹಿತ್ಯ ಸಂಗಮ'ದ ಮೂಲಕ ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಒಲವು ಮೂಡಿಸಲಾಗುತ್ತಿದೆ ಎಂದರು.
ತಂತ್ರಜ್ಞಾನ ಬಳಕೆ ಜೊತೆಗೆ ನಮ್ಮ ಭಾಷೆ, ಸಂಸ್ಕೃತಿಯ ಅರಿವಿರಲಿ. ರೇಡಿಯೋ, ಟಿ.ವಿ., ಕಂಪ್ಯೂಟರ್ ಭರಾಟೆಯಲ್ಲಿ ಜಾನಪದ ಕ್ರೀಡೆ, ಹಾಡು, ಕಲಾಪ್ರಕಾರಗಳು ಕಣ್ಮರೆಯಾಗುತ್ತಿದೆ. ಎಫ್.ಎಂ. ರೇಡಿಯೋಗಳಲ್ಲಿ ಕನ್ನಡ ಕಂಗ್ಲಿಷ್ ಆಗಿ ಪರಿವರ್ತನೆಗೊಂಡಿದೆ. ಇವೆಲ್ಲದರ ಪರಿಣಾಮ ಸಾಮಾಜಿಕ ಸಂಬಂಧ ಗಳು ಕಡಿದುಹೋಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.