ಅನಿಯಮಿತ ವಿದ್ಯುತ್ ಕಡಿತ ಅರೆಬೆತ್ತಲೆ ಪ್ರತಿಭಟನೆ
ಕ.ಪ್ರ.ವಾರ್ತೆ ಮಂಗಳೂರು ಏ.8-
ಅನಿಯಮಿತವಾಗಿ ವಿದ್ಯುತ್ ಕಡಿತ ಮಾಡುವ ವಿರುದ್ಧ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟಕರು ಪಾಂಡೇಶ್ವರ ಮೆಸ್ಕಾಂ ಎದುರು ಸೋಮವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
ಎಸ್ಎಸ್ಎಲ್ಸಿ, ಪದವಿ ಪರೀಕ್ಷೆಗಳು ನಡೆಯುತ್ತಿದ್ದು, ರಾತ್ರಿ ಮತ್ತು ಬೆಳಗ್ಗಿನ ಹೊತ್ತು ವಿದ್ಯುತ್ ಕಡಿತಗೊಳಿಸುತ್ತಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯ ಅಂಧಕಾರಕ್ಕೆ ಸಿಲುಕಿದೆ. ಕಡಬದ ಕೊಯ್ಲ ಗ್ರಾಮದ 20 ಅಡಿಕೆ ಬೆಳೆಗಾರರ ಪಂಪ್ಸೆಟ್ ಕಿತ್ತು ಹಾಕಿ ಸುಳ್ಳು ಕೇಸು ದಾಖಲಿಸಲಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಕಾರರು ಕಚೇರಿಯೊಳಗೆ ಬಂದು ನೇರವಾಗಿ ಮಾತನಾಡುವಂತೆ ವ್ಯವಸ್ಥಾಪಕರು ಅಧಿಕಾರಿಗಳ ಬಳಿ ಹೇಳಿ ಕಳುಹಿಸಿದರೂ ಪಟ್ಟು ಬಿಡದ ರೈತರು, 'ನಾವಿದ್ದಲ್ಲಿಗೆ ಬರಲಿ, ನಾವು ರೈತರು, ಬಿಸಿಲಿನ ತಾಪ ಗೊತ್ತಿದೆ, ಎಸಿಯಲ್ಲಿ ಕುಳಿತ ಅವರಿಗೂ ರೈತರ ಕಷ್ಟ ಅರಿವಾಗಲಿ' ಎಂದರು.
ಹೊರಗೆ ಬಂದ ವ್ಯವಸ್ಥಾಪಕರು, ಮುಖಂಡರಲ್ಲಿ ಮಾತುಕತೆ ನಡೆಸಿದರು. ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ಹಗಲು ಮತ್ತು ರಾತ್ರಿ ವಿದ್ಯುತ್ ಕಡಿತ ತಪ್ಪಿಸಲು ಯತ್ನಿಸುತ್ತೇವೆ. ಅಡಕೆ ಬೆಳೆಗಾರರನ ಪ್ರಕರಣದಲ್ಲಿ ಮಂಗಳವಾರ ಸಂಜೆಯೊಳಗೆ ಮೆಸ್ಕಾಂ ತಾಂತ್ರಿಕ ನಿರ್ದೇಶಕರ ನೇತೃತ್ವದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

