ಭಟ್, ಲೋಬೋ, ಪಾಲೆಮಾರ್ ನಾಮಪತ್ರ
ಮಂಗಳೂರು: ದಕ್ಷಿಣ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಎನ್.ಯೋಗೀಶ್ ಭಟ್ ನಾಮಪತ್ರ ಸಲ್ಲಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್, ದಕ್ಷಿಣ ಕ್ಷೇತ್ರ ಅಧ್ಯಕ್ಷ ಶ್ರೀಕರ ಪ್ರಭು, ನಿತಿನ್ ಕುಮಾರ್, ಪ್ರತಾಪ್ ಸಿಂಹ ನಾಯಕ್ ಇದ್ದರು. ಚುನಾವಣಾಧಿಕಾರಿ ಶ್ರೀಕಾಂತ್ ರಾವ್ ಸ್ವೀಕರಿಸಿದರು. ಕಾಂಗ್ರೆಸ್ ಅಭ್ಯರ್ಥಿಜಾನ್ ರಿಚರ್ಡ್ ಲೋಬೊ ನಾಮಪತ್ರ ಸಲ್ಲಿಸಿದರು. ಸುರೇಶ್ ಬಲ್ಲಾಳ್, ಶಾಸಕ ಯು.ಟಿ. ಖಾದರ್, ಐವನ್ ಡಿಸೋಜ ಇದ್ದರು.
ಉತ್ತರ ವಿಧಾನಸಭೆ ಕ್ಷೇತ್ರ ಅಭ್ಯರ್ಥಿಯಾಗಿ ಕೃಷ್ಣ ಜೆ.ಪಾಲೆಮಾರ್ ಸೋಮವಾರ ಮಂಗಳೂರನ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಸ್ವೀಕರಿಸಿದರು. ಉತ್ತರ ಕ್ಷೇತ್ರ ಬಿಜೆಪಿ ಅಧ್ಯಕ್ಷ ಶರಶ್ಚಂದ್ರ ಶೆಟ್ಟಿ, ಮಾಜಿ ಮೇಯರ್ ಶಂಕರ್ ಭಟ್, ವಕೀಲ ಪುರುಷೋತ್ತಮ ಭಟ್ ಇದ್ದರು. ಕೆಜೆಪಿ ಅಭ್ಯರ್ಥಿ ದಯಾನಂದ ಶೆಟ್ಟಿ ಚುನಾವಣೆ ಅಧಿಕಾರಿ ಶ್ರೀಕಾಂತ್ ರಾವ್‌ಗೆ ನಾಮಪತ್ರ ಸಲ್ಲಿಸಿದರು.
ವಿರೋಧಿಗಳ ಆಲಿಂಗನ
ಕಾಂಗ್ರೆಸ್ ಅಭ್ಯರ್ಥಿ ಲೋಬೋ ಮತ್ತು ಬಿಜೆಪಿ ಅಭ್ಯರ್ಥಿ ಭಟ್ಟರು ಪರಸ್ಪರ ಎದುರಾಗಿ ಪರಸ್ಪರ ಶುಭಾಶಯ ಕೋರಿದರು! ಲೋಬೋ ನಾಮಪತ್ರ ಸಲ್ಲಿಸಿ ಮಹಾನಗರ ಪಾಲಿಕೆ ಕಟ್ಟಡದಿಂದ ಇಳಿಯುತ್ತಿರುವ ವೇಳೆ ಯೋಗೀಶ್ ಭಟ್ಟರು ನಾಮಪತ್ರ ಸಲ್ಲಿಸಲು ಮೇಲೆ ಹತ್ತುತ್ತಿದ್ದರು. ಇಬ್ಬರು ಎದುರುಬದುರಾಗಿ ಆಲಂಗಿಸಿ ಶುಭಾಶಯ ಕೋರಿದ್ದು ವಿಶೇಷವಾಗಿತ್ತು. ನಾವಿಬ್ಬರೂ ಪರಸ್ಪರ ಪರಿಚಿತರು. ಅವರು ಶಾಸಕರಾಗಿದ್ದಾಗ ನಾನು ಮಂಗಳೂರಲ್ಲಿ ಅಧಿಕಾರಿಯಾಗಿದ್ದೆ ಎಂದು ಲೋಬೋ ನಸುನಕ್ಕರು. ನಮ್ಮ ಪಕ್ಷದ ತತ್ವಗಳು ಬೇರೆ ಇರಬಹುದು. ನಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇವೆ, ಯುದ್ಧ ಮಾಡುತ್ತಿಲ್ಲ ಎಂದು ಯೋಗೀಶ್ ಭಟ್ ಎಂದಿನ ನಗುವಿನಲ್ಲಿ ಪತ್ರಕರ್ತರ ಮುಂದೆ ಹೇಳಿದರು.
ಭಿನ್ನ ಶಮನ...
ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದರೂ ಐವನ್ ಡಿಸೋಜ ಸೋಮವಾರ ನಾಮಪತ್ರ ಸಲ್ಲಿಸುವ ವೇಳೆ ಜೆ. ಆರ್. ಲೋಬೊ ಜತೆ ಎಲ್ಲೆಡೆ ಒಟ್ಟಾಗಿ ಕಾಣಿಸಿಕೊಂಡರು. ಟಿಕೆಟ್ ವಂಚಿತ ಐವನ್‌ಗೆ ದಕ್ಷಿಣ ಕನ್ನಡ ಜಿಲ್ಲಾ ಚುನಾವಣೆ ಉಸ್ತುವಾರಿಯಾಗಿ ನೇಮಕಗೊಂಡಿರುವುದು ಐವನ್ ಅಸಮಾಧಾನ ಕಡಿಮೆಯಾಗಿದೆ. ಟಿಕೆಟ್ ನೀಡಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದ ಮಾಜಿ ಮೇಯರ್ ಅಶ್ರಫ್ ಕೂಡಾ ಇದ್ದರು.
57, 58 59, 60
ಸೋಮವಾರ ಉತ್ತರ, ದಕ್ಷಿಣ ವಿಧಾನಸಭೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಬಿಜೆಪಿ, ಕಾಂಗ್ರೆಸ್, ಸಿಪಿಎಂ ಅಭ್ಯರ್ಥಿಗಳ ವಯಸ್ಸು ಇದು! ಕೆಜೆಪಿ ದಯಾನಂದ ಶೆಟ್ಟಿಗೆ ಬಿಜೆಪಿ ಎನ್.ಯೋಗೀಶ್ ಭಟ್‌ಗೆ 59 ವರ್ಷ, ಕಾಂಗ್ರೆಸ್ ಜೆ.ಆರ್.ಲೋಬೋಗೆ 60 ವರ್ಷ. ಇನ್ನು ಬಿಜೆಪಿ ಅಭ್ಯರ್ಥಿ ಕೃಷ್ಣ ಪಾಲೆಮಾರ್ ವಯಸ್ಸು 57.
ಬೆಳ್ತಂಗಡಿ: 4 ನಾಮಪತ್ರ
ಬೆಳ್ತಂಗಡಿ: ರಾಜ್ಯ ವಿಧಾನಸಭಾ ಚುನಾವಣೆಯ ಕಾವು ಬೆಳ್ತಂಗಡಿಯಲ್ಲಿ ಕಾಣಿಸಿಕೊಂಡಿದ್ದು ಸೋಮವಾರ ಶಾಸಕ ವಸಂತ ಬಂಗೇರ ಸಹಿತ ಒಟ್ಟು 4 ಮಂದಿ ನಾಮಪತ್ರಗಳನ್ನು ಚುನಾವಣಾಧಿಕಾರಿಗೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಶಾಸಕ ಕೆ. ವಸಂತ ಬಂಗೇರ ಸೋಮವಾರ ಬೆಂಬಲಿಗರ ಜೊತೆ ಮೆರವಣಿಗೆಯಲ್ಲಿ ಬಂದು ಚುನಾವಣಾಧಿಕಾರಿಗಳಲ್ಲಿ ತಮ್ಮ ನಾಮ ಪತ್ರ ಸಲ್ಲಿಸಿದರು.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಬ್ಲಾಕ್ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರ ಗೌಡ, ಸುಜೀತಾ ವಿ. ಬಂಗೇರ, ನ.ಪಂ. ಮಾಜಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಮೊದಲಾದವರು ಇದ್ದರು.
ಬಂಟ್ವಾಳದಲ್ಲಿ ರಾಜೇಶ್ ನಾಯ್ಕ್
ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಅವರು ಸೋಮವಾರ ಮಧ್ಯಾಹ್ನ ಬಂಟ್ವಾಳ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಬಿಜೆಪಿ ಕಾರ್ಯಾಲಯದಿಂದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ತಾಲೂಕು ಕಚೇರಿಗೆ ಆಗಮಿಸಿದ ಅವರು, ಚುನಾವಣಾಧಿಕಾರಿ ಶಶಿಧರ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ. ಪಧ್ಮನಾಭ ಕೊಟ್ಟಾರಿ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಸುಲೋಚನಾ ಜಿ.ಕೆ. ಭಟ್, ಪುರಸಭಾ ಸದಸ್ಯ ಎ. ಗೋವಿಂದ ಪ್ರಭು ಇದ್ದರು. ಇದೇ ವೇಳೆ ಡಮ್ಮಿ ಅಭ್ಯರ್ಥಿಯಾಗಿ ಬಂಟ್ವಾಳ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ನಾಮಪತ್ರ ಸಲ್ಲಿಸಿದರು. ಪಕ್ಷದ ಪ್ರಮುಖರಾದ ದಿನೇಶ್ ಭಂಡಾರಿ, ದೇವದಾಸ ಶೆಟ್ಟಿ, ದಿನೇಶ್ ಅಮ್ಟೂರು, ನೇಮಿರಾಜ ರೈ, ತುಂಗಪ್ಪ ಬಂಗೇರ, ರಾಮದಾಸ ಬಂಟ್ವಾಳ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

