ಮಕ್ಕಳ ವೇಶ್ಯಾವಾಟಿಕೆ ಜಾಲ ಬಯಲು
ಕ.ಪ್ರ. ವಾರ್ತೆ , ಮಂಗಳೂರು , ಏ.16
ಮಕ್ಕಳ ಕಳ್ಳ ಸಾಗಾಟ ನಡೆಸಿ ವೇಶ್ಯಾವಾಟಿಕೆ ನಡೆಸುವ ಜಾಲವನ್ನು 'ಒಡನಾಡಿ' ಸಂಸ್ಥೆ ಮತ್ತು ಸಿಐಡಿ ಪೊಲೀಸರು ಮಂಗಳವಾರ ಭೇದಿಸಿದ್ದಾರೆ. ಮಂಗಳೂರು ಕುಳಾಯಿ ಹೊನ್ನಕಟ್ಟೆ ಬಳಿ ಸೂತ್ರಧಾರಿ ಮಹಿಳೆಯನ್ನು ಬಂಧಿಸಿದ್ದು, 4 ಬಾಲಕಿಯರನ್ನು ರಕ್ಷಿಸಲಾಗಿದೆ.
ಹಿಂದೆ ಬಾರ್ಗರ್ಲ್ ಆಗಿದ್ದ ಹಾಸನ ಜಿಲ್ಲೆಯ ಬೇಲೂರಿನ ರತ್ನಾ ಹೊನ್ನಕಟ್ಟೆ ಬಳಿಯ ಕುಳಾಯಿಯಲ್ಲಿ ಈ ದಂಧೆ ನಡೆಸುತ್ತಿದ್ದಳು. ಮೈಸೂರು, ಮಂಡ್ಯ, ಎಚ್.ಡಿಢಿ .ಕೋಟೆಯ ಹಿಂದುಳಿದ, ಬಡ ಮಕ್ಕಳನ್ನು ಕರೆತಂದು ವೇಶ್ಯಾವಾಟಿಕೆಗೆ ಬಳಸಲಾಗುತ್ತಿತ್ತು. ಮಂಗಳೂರು, ಉಡುಪಿ ಸೇರಿದಂತೆ ಕರಾವಳಿಯ ಅನೇಕ ಲಾಡ್ಜ್ಗಳಲ್ಲಿ ಈಕೆ ವ್ಯವಹಾರ ನಡೆಸುತ್ತಿದ್ದು, ಈ ಸಂಬಂಧ ಒಪ್ಪಂದವನ್ನೂ ಮಾಡಿಕೊಂಡಿದ್ದಳು.
ವೈದ್ಯರು, ಪೊಲೀಸರು ಸೇರಿದಂತೆ ಪ್ರತಿಷ್ಠಿತರೇ ಈಕೆಯ ಗಿರಾಕಿಗಳು ಎಂದು ರಕ್ಷಿಸಲ್ಪಟ್ಟ ಬಾಲಕಿಯೊಬ್ಬಳು ಸುದ್ದಿಗಾರರಿಗೆ ತಿಳಿಸಿದ್ದಾಳೆ. ಈ ವಿಚಾರ ಜಿಲ್ಲೆಯ ಪೊಲೀಸರ ಗಮನಕ್ಕೆ ಬಂದಿದ್ದರೂ ಸುಮ್ಮನಿದ್ದರೂ ಎನ್ನಲಾಗಿದೆ. ಪೊಲೀಸರಿಗೆ ಮಾಮೂಲಿ ಕಳುಹಿಸುತ್ತಿದ್ದೆ ಎಂದು ಬಂಧಿತೆ ರತ್ನಾ ಬಾಯಿ ಬಿಟ್ಟಿದ್ದಾಳೆ. ಕರ್ನಾಟಕ ಸಂಘಟಿತ ಕಟ್ಟಡ ಹಾಗೂ ಟೈಲರಿಂಗ್ ಕ್ಷೇಮಾಭಿವೃದ್ಧಿ ಸಂಘ ಎಂಬ ಸಂಸ್ಥೆ ಪದಾಧಿಕಾರಿ ಎಂಬ ಗುರುತು ಚೀಟಿ ಹೊಂದಿರುವ ರತ್ನಾ ವಿವಿಧ ಮಹಿಳೆಯರ ಸಹಾಯದಿಂದ ಬಾಲಕಿಯರನ್ನು ಕರೆ ತರುತ್ತಿದ್ದಳು. ಬಾಲಕಿ ಪ್ರೌಢಳಾದ ತಕ್ಷಣ ಹೆದರಿಸಿ, ಬೆದರಿಸಿ ಪಾಪಕೃತ್ಯಕ್ಕೆ ತಳ್ಳುತ್ತಿದ್ದಳು.
ತಂಗಿಗೆ ವಿದ್ಯೆ, ಅಕ್ಕನಿಗೆ ಶಿಕ್ಷೆ: ನನ್ನ ತಂಗಿಗೆ ವಿದ್ಯಾಭ್ಯಾಸಕ್ಕೆ ಹಣ ಒದಗಿಸಲು ತನ್ನನ್ನು ಈ ದಂಧೆಗೆ ದೂಡಿದರು ಎಂದು ಬಾಲಕಿಯೊಬ್ಬಳು ಅಳಲು ತೋಡಿಕೊಂಡಿದ್ದಾಳೆ. ರಕ್ಷಿತರಲ್ಲಿ ಇಬ್ಬರು ಬಾಲಕಿಯರನ್ನು ದಂಧೆಗೆ ಬಳಸಲಾಗಿದೆ. ಇನ್ನಿಬ್ಬರನ್ನು ಮನೆಗೆಲಸಕ್ಕೆ ಬಳಸಿಕೊಳ್ಳಲಾಗುತ್ತಿತ್ತು.
ತಲಪಾಡಿಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಪ್ರಾಂಶುಪಾಲೆ ಸುಷ್ಮಾ ಮನೆಯಲ್ಲಿದ್ದ ಬಾಲಕಿಯನ್ನು ಚೈಲ್ಡ್ ಲೈನ್ ತಂಡದ ಉಪಸ್ಥಿತಿಯಲ್ಲಿ ರಕ್ಷಿಸಲಾಗಿದೆ. ಈಕೆ ಆಕ್ಕ ತಾರಾ ಎಂಬವಳು ಮತ್ತೊಬ್ಬರ ವಶದಲ್ಲಿದ್ದಳು. ಆಕೆಯನ್ನೂ ರಕ್ಷಿಸಲಾಗಿದೆ. ರಕ್ಷಣೆಗೊಂಡ ಬಾಲಕಿಯರ ವಯಸ್ಸು 12, 14, 16 ವರ್ಷ, ಮತ್ತೊಬ್ಬ 8 ವರ್ಷದ ಬಾಲಕಿ ಮನೆಗೆಲಸ ಮಾಡುತ್ತಿದ್ದಳು.
ಮೂವರ ಸೆರೆ: ಚಿಕ್ಕಮಗಳೂರಿನ ದೀಪು ಹಾಗೂ ಮಂಗಳೂರು ಸುರತ್ಕಲ್ನ ಜಯಣ್ಣ ಮಕ್ಕಳನ್ನು ಸರಬರಾಜು ಮಾಡುತ್ತಿದ್ದ ಜಾಲದಲ್ಲಿ ಶಾಮೀಲಾಗಿದ್ದು, ತಾರಾ ಸಹಿತ ಈ ಮೂವರನ್ನೂ ಬಂಧಿಸಲಾಗಿದೆ.
ಇಬ್ಬರು ಬಾಲಕಿಯರನ್ನು ಬೆಂಗಳೂರು, ಮಂಗಳೂರು, ಚಾಮರಾಜನಗರ, ಮೂಡುಬಿದಿರೆ ಸಹಿತ ರಾಜ್ಯದ ವಿವಿಧೆಡೆ ಲಾಡ್ಜ್ಗಳಲ್ಲಿ ವೇಶ್ಯಾವಾಟಿಕೆಗೆ ಬಳಸಲಾಗಿತ್ತು. ಸಿಐಡಿ ಡಿಐಜಿ ಸೋನಂದಾ ಮುಖರ್ಜಿ ಮಾರ್ಗದರ್ಶನದಲ್ಲಿ ಸಿಐಡಿ ಅಧಿಕಾರಿ ಅನಿಲ್ ಕುಮಾರ್ ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

