ಡಿಸೇಲ್, ಮೊಬೈಲ್ ಅಪಹರಣ
ಮಂಗಳೂರು: ಬಜಪೆ ಶಾಂತಿಗುಡ್ಡೆ ಎಸ್ಇಝಡ್ ಕಾಲನಿಯಲ್ಲಿ ಹಿಟಾಚಿ ಅಫರೇಟರ್ ಆನಂದ್ ಮೇಲೆ ಹಲ್ಲೆ ನಡೆಸಿದ 5 ಮಂದಿ ದುಷ್ಕರ್ಮಿಗಳು 300 ಲೀ.ಡೀಸೇಲ್ ಕಸಿದುಕೊಂಡು ಹೋಗಿದ್ದಾರೆ. ಅನಂದನ ಬಳಿ ಇದ್ದ 2 ಮೊಬೈಲ್ಗಳನ್ನು ಅಪಹರಿಸಿದ್ದಾರೆ ಎಂದು ಹಿಟಾಚಿ ಮಾಲೀಕ ಯಾದವ ಬೆಳ್ಚಡ ಬಜಪೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪತಿ ಹುಡುಕಿ ಕೊಡಿ
ಮಂಗಳೂರು: ಕೊಣಾಜೆ ನಿವಾಸಿ ಲೋಕನಾಥ ಶೆಟ್ಟಿಗಾರ್ (50) ಸೋಮವಾರಮನೆಯಿಂದ ಹೊರ ಹೋದವರು ನಾಪತ್ತೆಯಾಗಿದ್ದಾರೆ. 50 ವರ್ಷ, 5.4 ಎತ್ತರ, ಸಪೂರ ಶರೀರ. ಕೋಲುಮುಖ, ಹಿಪ್ಪಿ ಕೂದಲು, ಗಡ್ಡ. ನೀಲಿ ಬಣ್ಣದ ಚೌಕುಳಿಲುಂಗಿ, ನೀಲಿ ಅಂಗಿ ಧರಿಸಿದ್ದಾರೆ. ಮಾನಸಿಕ ಅಸಮತೋಲನ ಹೊಂದಿದ್ದಾರೆ. ಪತ್ನಿ ಲೀಲಾ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ.
ಯುವತಿ ನಾಪತ್ತೆ
ಮಂಗಳೂರು: ಪಾಂಡೇಶ್ವರ ಶಿವನಗರ ನಿವಾಸಿ ಅನಿಷಾ (18) ಮನೆಯಿಂದ ಹೊರ ಹೋದವಳು ನಾಪತ್ತೆಯಾಗಿದ್ದಾಳೆ. ಮಂಗಳವಾರ ಮನೆಯಿಂದ ಹೊರ ಹೋಗಿದ್ದು, ಬಳಿಕ ಪತ್ತೆಯಾಗಿಲ್ಲ. ನೆರೆಹೊರೆ, ಸಂಬಂಧಿಕರ ಬಳಿ ವಿಚಾರಿಸಿದರೂ ಯಾವುದೇ ಮಾಹಿತಿ ಸಿಕ್ಕಿಲ್ಲ. ತಾಯಿ ಆಯಿಶಾ ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.
15 ಮೂಟೆ ಅಡಕೆ ಕಳವು
ಮಂಗಳೂರು: ಮುಡಿಪು ಪೇಟೆಯ ಶೇಣವ ಆರ್ಕೆಡ್ನಲ್ಲಿರುವ ಭಾರತ್ ಸುಪಾರಿ ಟ್ರೇಡರ್ಸ್ಗೆ ನುಗ್ಗಿದ ಕಳ್ಳರು ತಲಾ 65 ಕಿಲೋ ತೂಗುವ 15 ಅಡಕೆ ಮೂಟೆ ಕಳವು ಮಾಡಿದ್ದಾರೆ.
ಶಟರ್ ಬೀಗ ಮುರಿದ ಕಳ್ಳರು ಒಳಗೆ ಇದ್ದ 4 ಸಾವಿರ ನಗದು ಕೂಡ ಅಪಹರಿಸಿದ್ದಾರೆ. ಒಟ್ಟು 1.4 ಲಕ್ಷ ಮೌಲ್ಯದ ಸೊತ್ತುಗಳು ಕಳವಾದ ಬಗ್ಗೆ ಮಾಲೀಕ ಹಂಝ ಎಸ್. ನೀಡಿದ ದೂರಿನಂತೆ ಕೊಣಾಜೆ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ಪೆರ್ನೆ ದುರಂತ: ನೆರವು ನೀಡಿ
ಮಂಗಳೂರು: ಪೆರ್ನೆ ಟ್ಯಾಂಕರ್ ಅನಿಲ ಸ್ಪೋಟ ಬೆಂಕಿ ದುರಂತಕ್ಕೆ ಸಂಬಂಧಿಸಿದಂತೆ ಅಲ್ಲಿನ ಸ್ಥಳೀಯರ ಪರಿಸ್ಥಿತಿ ಭೀಕರತೆ ಹಾಗೂ ಅಲ್ಲಿನ ಜನರ ನೋವುಗಳನ್ನು ಶಮನಗೊಳಿಸಲು ಜಿಲ್ಲಾಡಳಿತ ಸಾರ್ವಜನಿಕರ ನೆರವು ಕೋರಿದೆ. ಆಸಕ್ತರು ನೇರವಾಗಿ ಪೆರ್ನೆ ವಿಜಯಬ್ಯಾಂಕ್ ಎಸ್ಬಿ ಖಾತೆ 146901011000926 ಪೆರ್ನೆ ಅನಿಲ ದುರಂತ ರಿಲೀಫ್ಗೆ ನೀಡಬಹುದು ಎಂದು ವಾರ್ತಾ ಇಲಾಖೆ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

