ದಕ್ಷಿಣ ಕನ್ನಡ

ದ.ಕ. ಜಿಲ್ಲೆ: 8 ಕ್ಷೇತ್ರ, 71 ಮಂದಿ ಕಣದಲ್ಲಿ

Published On :

ಮಂಗಳೂರು: ಮೇ 5ರಂದು ನಡೆಯುವ ವಿಧಾನಸಭಾ ಚುನಾವಣೆಗೆ ದ.ಕ.ಜಿಲ್ಲೆಯಲ್ಲಿ 8 ಕ್ಷೇತ್ರಗಳಿಗೆ 71 ಮಂದಿ ಅಂತಿಮ ಕಣದಲ್ಲಿದ್ದಾರೆ. ಶನಿವಾರ ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆ ದಿನವಾಗಿತ್ತು. ನಾಮಪತ್ರ ಸಲ್ಲಿಸಿದ 86 ಮಂದಿಯಲ್ಲಿ 15 ಮಂದಿ ನಾಮಪತ್ರ ಹಿಂಪಡೆದಿದ್ದರು.
ಕಣದಲ್ಲಿ ಉಳಿದ 71 ಮಂದಿಯಲ್ಲಿ 68 ಪುರುಷರು ಹಾಗೂ ಮೂರು ಮಂದಿ ಮಹಿಳಾ ಅಭ್ಯರ್ಥಿಗಳಿದ್ದಾರೆ. ಬಿಎಸ್ಪಿ 1, ಬಿಜೆಪಿ 8, ಸಿಪಿಎಂ 3, ಕಾಂಗ್ರೆಸ್ 8, ಎನ್ಸಿಪಿ 1, ಜೆಡಿಎಸ್ 8, ಜೆಡಿಯು 2, ಎಸ್ಡಿಪಿಐ 6, ಕೆಜೆಪಿ 8, ಸ್ವತಂತ್ರರು 26 ಮಂದಿ ಸ್ಪರ್ಧೆಯಲ್ಲಿದ್ದಾರೆ.
ಎಲ್ಲ ಕ್ಷೇತ್ರದಲ್ಲಿ 4 ಪಕ್ಷ ಸ್ಪರ್ಧೆ: ಜಿಲ್ಲೆಯ ಎಲ್ಲ 8 ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ಕೆಜೆಪಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಎಸ್ಡಿಪಿಐ 6 ಕಡೆ ಸ್ಪರ್ಧಿಸುತ್ತಿದ್ದು, ಮಂಗಳೂರು ದಕ್ಷಿಣ, ಬೆಳ್ತಂಗಡಿಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿಲ್ಲ. ಸಿಪಿಎಂ ಮಂಗಳೂರು ದಕ್ಷಿಣ, ಮಂಗಳೂರು ಮತ್ತು ಬೆಳ್ತಂಗಡಿ 3 ಕಡೆಗಳಲ್ಲಿ ಮಾತ್ರ ಸ್ಪರ್ಧೆ, 5 ಕಡೆ ಸ್ಪರ್ಧಿಸುತ್ತಿಲ್ಲ. ಎನ್ಸಿಪಿ ಮಂಗಳೂರು ಉತ್ತರದಲ್ಲಿ, ಜೆಡಿಯು ಮಂಗಳೂರು ಮತ್ತು ಬೆಳ್ತಂಗಡಿಯಲ್ಲಿ, ಬಿಎಸ್ಪಿ ಬೆಳ್ತಂಗಡಿಯಲ್ಲಿ ಮಾತ್ರ ಸ್ಪರ್ಧಿಸುತ್ತಿದೆ. ಪಕ್ಷೇತರರು 26 ಕಡೆ ಕಣಕ್ಕಿಳಿದಿದ್ದು, ಬೆಳ್ತಂಗಡಿಯಲ್ಲಿ ಪಕ್ಷೇತರ ಅಭ್ಯರ್ಥಿ ಇಲ್ಲ.
ನಾಮಪತ್ರ ಹಿಂಪಡೆದವರು: ಮೂಡುಬಿದಿರೆಯಲ್ಲಿ ಉಮಾನಾಥ ಸುವರ್ಣ, ಮಹಮ್ಮದ್ ಅಥವುಲ್ಲಾ, ಮಂಗಳೂರು ಉತ್ತರದಲ್ಲಿ ಅಬ್ದುಲ್ ಅಜೀಜ್, ಪ್ರಕಾಶ್ ಸೋಮಯಾಜಿ, ಮಂಗಳೂರು ದಕ್ಷಿಣದಲ್ಲಿ ಕ್ಯಾಲನ್ ಜೋನ್ ಡಿಸೋಜ, ಜೇಮ್ಸ್ ಡಿಸೋಜ, ಮಂಗಳೂರಿನಲ್ಲಿ ಅಬ್ದುಲ್ ಅಜೀಜ್, ಮಹಮ್ಮದ್ ನವಾಜ್, ಯೋಗೀಶ್ ಶೆಟ್ಟಿ, ಬೆಳ್ತಂಗಡಿಯಲ್ಲಿ ಅಬ್ದುಲ್ ರಜಾಕ್, ಬಂಟ್ವಾಳದಲ್ಲಿ ಮಹಮ್ಮದ್ ಶರೀಫ್(ಮುಸ್ಲಿಂ ಲೀಗ್)ಅಕ್ಬರ್ ಆಲಿ, ಎಂ.ಟಿ.ಮೂಸಾ, ಪುತ್ತೂರಿನಲ್ಲಿ ಇಬ್ರಾಹಿಂ ಸಾಗರ್, ಸುಳ್ಯದಲ್ಲಿ ವಸಂತ (ಎಲ್ಲರು ಪಕ್ಷೇತರ ಸ್ಥಾನ).



ಮೂಡುಬಿದಿರೆ


ಅಭಯಚಂದ್ರ ಜೈನ್(ಕಾಂಗ್ರೆಸ್), ಉಮಾನಾಥ ಕೋಟ್ಯಾನ್(ಬಿಜೆಪಿ), ಅಮರನಾಥ ಶೆಟ್ಟಿ(ಜೆಡಿಎಸ್), ಮೈಕಲ್ ಲೋಬೋ(ಕೆಜೆಪಿ), ಇಸ್ಮಾಯಿಲ್(ಎಸ್ಡಿಪಿಐ), ಅಭಯ ಕುಮಾರ್(ಪಕ್ಷೇತರ). ಒಟ್ಟು 6 ಮಂದಿ ಚುನಾವಣಾ ಕಣದಲ್ಲಿ.


ಮಂಗಳೂರು ಉತ್ತರ


ಮೈದಿನ್ ಬಾವಾ(ಕಾಂಗ್ರೆಸ್), ಕೃಷ್ಣ ಪಾಲೇಮಾರ್(ಬಿಜೆಪಿ), ಗುಲಾಂ ಮಹಮ್ಮದ್(ಜೆಡಿಎಸ್), ರಾಮಚಂದರ್ ಬೈಕಂಪಾಡಿ (ಕೆಜೆಪಿ), ಅಬೂಬಕ್ಕರ್(ಎಸ್ಡಿಪಿಐ), ಸುಪ್ರೀತ್ ಕುಮಾರ್ ಪೂಜಾರಿ(ಎನ್ಸಿಪಿ), ಮಹಾಬಲ ಶೆಟ್ಟಿ, ಮ್ಯಾಕ್ಸಿಂ ಪಿಂಟೋ, ವಿನಯ ಆಚಾರ್ಯ(ಪಕ್ಷೇತರ).


ಮಂಗಳೂರು ದಕ್ಷಿಣ


ಜೆ.ಆರ್.ಲೋಬೋ (ಕಾಂ), ಯೋಗೀಶ್ ಭಟ್ (ಬಿಜೆಪಿ), ಚೆಂಗಪ್ಪ (ಜೆಡಿಎಸ್), ವಸಂತ ಆಚಾರಿ (ಸಿಪಿಎಂ), ದಯಾನಂದ ಶೆಟ್ಟಿ (ಕೆಜೆಪಿ), ಅಬ್ದುಲ್ ಜಲೀಲ್, ನೌಷದ್ ಮಹಮ್ಮದ್, ಮಹಮ್ಮದ್ ಹಬೀಬುಲ್ಲಾ ಖಾದರ್, ಯೋಗೀಶ್ ಶೆಟ್ಟಿ, ಯೋಗೀಶ್ ನಾಯ್ಕ, ಸಚಿನ್ ಹೆಗ್ಡೆ, ಹರೀಶ್ ಆಳ್ವ, ಡೆರಿಕ್ ಪಿಂಟೋ (ಪಕ್ಷೇತರರು).


ಮಂಗಳೂರು


ಯು.ಟಿ.ಖಾದರ್ (ಕಾಂ), ಚಂದ್ರಹಾಸ ಉಳ್ಳಾಲ(ಬಿಜೆಪಿ), ಅಬ್ದುಲ್ ಅಜೀಜ್ ಮಲಾರ್ (ಜೆಡಿಎಸ್), ಕೃಷ್ಣಪ್ಪ ಸಾಲ್ಯಾನ್ (ಸಿಪಿಎಂ), ರವೀಂದ್ರ ಶೆಟ್ಟಿ (ಕೆಜೆಪಿ), ಅಕ್ರಂ ಹಸನ್(ಎಸ್ಡಿಪಿಐ), ಹಮೀದ್ ಉಳ್ಳಾಲ್ (ಜೆಡಿಯು), ಅಬ್ದುಲ್ ರಹಿಮಾನ್, ಆಲ್ಫ್ರೆಡ್ ಡಿಸೋಜ, ಇಬ್ರಾಹಿಂ, ಇಸ್ಮಾಯಿಲ್, ಕಬೀರ್, ಬಾವ ಮಹಮ್ಮದ್, ಫರೂಕ್, ಮಹಮ್ಮದ್ ಹನೀಫ್(ಪಕ್ಷೇತರರು).


ಬೆಳ್ತಂಗಡಿ


ವಸಂತ ಬಂಗೇರ (ಕಾಂಗ್ರೆಸ್), ರಂಜನ್(ಬಿಜೆಪಿ), ರಾಜಶ್ರೀ (ಜೆಡಿಎಸ್), ಬಿ.ಎಂ.ಭಟ್ (ಸಿಪಿಎಂ), ಚೆನ್ನಕೇಶವ(ಬಿಎಸ್ಪಿ), ಸುಕೇಶ್ ಕುಮಾರ್ (ಕೆಜೆಪಿ), ವೆಂಕಟೇಶ್ ಬೆಂಡೆ(ಜೆಡಿಯು). ಒಟ್ಟು 7 ಮಂದಿ ಕಣದಲ್ಲಿ.


ಬಂಟ್ವಾಳ


ರಮಾನಾಥ ರೈ(ಕಾಂಗ್ರೆಸ್), ರಾಜೇಶ್ ನೈಕ್(ಬಿಜೆಪಿ), ಕೃಷ್ಣಪ್ಪ ಪೂಜಾರಿ(ಸಿಪಿಎಂ), ಇಬ್ರಾಹಿಂ(ಕೆಜೆಪಿ), ಅಬ್ದುಲ್ ಮಜೀದ್ಖಾನ್(ಎಸ್ಡಿಪಿಐ), ಲೋಲಾಕ್ಷ(ಸ್ವತಂತ್ರ). ಒಟ್ಟು 6 ಮಂದಿ ಕಣದಲ್ಲಿ.


ಪುತ್ತೂರು


ಶಕುಂತಳಾ ಶೆಟ್ಟಿ (ಕಾಂಗ್ರೆಸ್), ಸಂಜೀವ ಮಠಂದೂರು(ಬಿಜೆಪಿ), ದಿನೇಶ್ ಬಿ.ಎನ್. (ಜೆಡಿಎಸ್), ಜಯರಾಮ ಭಟ್(ಕೆಜೆಪಿ), ಅಬೂಬಕ್ಕರ್ ಸಿದ್ದಿಕ್ (ಎಸ್ಡಿಪಿಐ), ಶೇಖರ ಮಾಡಾವು (ಪಕ್ಷೇತರ). ಒಟ್ಟು 6 ಮಂದಿ ಚುನಾವಣಾ ಕಣದಲ್ಲಿ.


ಸುಳ್ಯ

ರಘು (ಕಾಂಗ್ರೆಸ್), ಅಂಗಾರ (ಬಿಜೆಪಿ), ನಂದರಾಜ್ ಸಂಕೇಶ (ಜೆಡಿಎಸ್), ಚಂದ್ರಾವತಿ (ಕೆಜೆಪಿ), ಕೂಸಪ್ಪ (ಎಸ್ಡಿಪಿಐ), ಎ. ಅಂಗಾರ, ಕರುಣೇಶ್(ಪಕ್ಷೇತರ). ಕುಶಲ (ಪಕ್ಷೇತರ), ಕುಂಞರಾಮನ್ (ಪಕ್ಷೇತರ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.